ಕೊರೊನಾ ಸೋಂಕಿನಿಂದ ಇಂಡಿಯಾ ಆಸ್ಪತ್ರೆಯಲ್ಲಿ ಮೃತರಾದ ವೈದ್ಯೆ 8 ತಿಂಗಳ ಹಿಂದೆಯಷ್ಟೇ ಮದುವೆಯಾದ್ದರು

Wednesday, April 28th, 2021
Indiana

ಮಂಗಳೂರು: ಕೇರಳ ಮೂಲದ ಯುವ ವೈದ್ಯೆ ಕೊರೊನಾ ಸೋಂಕಿನಿಂದ ಇಂಡಿಯಾನ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ. ನಗರದ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು‌. ಈ ಹಿನ್ನೆಲೆಯಲ್ಲಿ  ಆಕೆಯನ್ನು ಅದೇ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ಆದರೆ ಅವರು ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾರೆ. ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆಯಲ್ಲಿಯೂ ಆಕೆ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದರು. ವೈದ್ಯೆಗೆ ವಿವಾಹವಾಗಿ ಕೇವಲ 8 ತಿಂಗಳಾಗಿದ್ದು, ಪತಿ-ಪತ್ನಿ ಇಬ್ಬರೂ ಇಂಡಿಯಾನ ಆಸ್ಪತ್ರೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು‌. […]

ಕಣಚೂರು ಆಸ್ಪತ್ರೆ ವತಿಯಿಂದ ಟೆಲಿಮೆಡಿಸಿನ್ ಸೇವೆ.

Monday, March 30th, 2020
Kanachuru Tele

ಮಂಗಳೂರು : ಕರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್‌ಡೌನ್ ಘೋಷಣೆಯ ಬಳಿಕ ಜಿಲ್ಲೆಯಲ್ಲಿ ಹಲವು ಆಸ್ಪತ್ರೆಗಳು ಹೊರ ರೋಗಿಗಳಿಗೆ ನೀಡುವ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಿದೆ.ಇದರಿಂದ ಅನೇಕ ರೋಗಿಗಳು ಸಕಾಲಕ್ಕೆ ವೈದ್ಯರ ಸಲಹೆ, ಔಷಧಿಗಳು ಸಿಗದೇ ತೊಂದರೆಗೀಡಾಗಿದ್ದಾರೆ. ಇದನ್ನು ಮನಗಂಡು ನಾಟೆಕಲ್‌ನ ಕಣಚೂರು ವೈದ್ಯಕೀಯ ಮಹಾವಿದ್ಯಾಲಯದ ಅಧೀನದಲ್ಲಿರುವ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಆನ್‌ಲೈನ್ ಮೂಲಕ ಟೆಲಿಮೆಡಿಸಿನ್ ಸೇವೆ ಆರಂಭಿಸಿದೆ. ಈ ಸೇವೆಯಂತೆ ಅಗತ್ಯವಿದ್ದವರು ಮನೆಯಲ್ಲಿಯೆ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ರೋಗಿಗಳ ಆರೋಗ್ಯ ಸಮಸ್ಯಗಳಿಗೆ […]