ಫೆವಿಕಾಲ್‌ ಸಂಸ್ಥೆಯ ಜಾಹೀರಾತಿನಲ್ಲಿ ಯಕ್ಷಗಾನಕ್ಕೆ ಅವಮಾನ

Monday, November 23rd, 2020
Fevicol

ಮಂಗಳೂರು : ಕಥಕ್ಕಳಿಯ ಹಿಮ್ಮೇಳದ ಸದ್ದು ಮಾಡುತ್ತಾ ಯಕ್ಷಗಾನದ ರಂಗಸ್ಥಳದಲ್ಲಿ ತೆಂಕಿತಿಟ್ಟಿನ ಪ್ರದರ್ಶನ  ಮಾಡುವ  ವೇಳೆ ರಂಗಸ್ಥಳದ ಸಿಂಹಾಸನದಲ್ಲಿ ವೇಷಧಾರಿ ಕುಳಿತುಕೊಳ್ಳುವಾಗ ಅದು ಕುಸಿದು ಬೀಳುತ್ತದೆ. ಆಗ ಸಿಟ್ಟಿನಿಂದ ವೇಷಧಾರಿ ಅರಚುತ್ತಾ ಎದುರು ವೇಷಧಾರಿ ಸಹಿತ ಹಿಮ್ಮೇಳದವರನ್ನು ಅಟ್ಟಾಡಿಸುತ್ತಾನೆ ಈ ಮೂಲಕ ಫೆವಿಕಾಲ್‌ ಸಂಸ್ಥೆ ಯಕ್ಷಗಾನವನ್ನು ಅವಮಾನಿಸಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಮೂಲಕ ಫೆವಿಕಾಲ್‌ ಸಂಸ್ಥೆಯ ಅಂಟಿನ ಉತ್ಪನ್ನಕ್ಕೆ ಯಾವುದೂ ಸರಿಸಾಟ ಇಲ್ಲ ಎಂಬುದನ್ನು ಸಾರುವ ಪ್ರಯತ್ನ ನಡೆಸಲಾಗಿದೆ. ಜಾಹೀರಾತಿನಲ್ಲಿ ಕಾಣಿಸಿಕೊಂಡ ಕಲಾವಿದರ ಪೈಕಿ ಕೆಲವರು ವೃತ್ತಿಪರ ಕಲಾವಿದರು ಎಂದು […]

ಮುಖ್ಯಮಂತ್ರಿಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

Thursday, October 27th, 2011
DVS Release Logo

ಮಂಗಳೂರು: ನವೆಂಬರ್ . 18 ಮತ್ತು 19ರಂದು ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿರುವ 17ನೇ ದ. ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ನಗರದಲ್ಲಿ ಮಂಗಳವಾರ ಬಿಡುಗಡೆಗೊಳಿಸಿದರು. ಯಕ್ಷಗಾನ ಹಾಗೂ ಕಥಕ್ಕಳಿಯ ವೇಷ, ತೆಂಗು, ಕಂಗು, ಬಾಳೆಯ ಹಿನ್ನಲೆಯನ್ನಾಗಿರಿಸಿ, ಕನ್ನಡದ ‘ಕ’ ಅಕ್ಷರದ ಮುಗುಳಿಯ ನಡುವೆ ಕನ್ನಡ ಭುವನೇಶ್ವರಿ ಹಾಗೂ ತುಳು ಜಾನಪದ ಭೂತಾರಾಧನೆಯನ್ನು ಪ್ರತಿನಿಧಿಸುವ ದೈವಗಳ ಅಣಿಯ ಆವರಣದ ನಡುವೆ ಕನ್ನಡ ಅಂಕೆಯಲ್ಲಿ 17ನೇ ಜಿಲ್ಲಾ ಸಾಹಿತ್ಯ […]