ಕತಾರಿನಲ್ಲಿ ’ಕರೋನಾ-19’ ಸಂಕಷ್ಟಕ್ಕೀಡಾದವರಿಗೆ ನೆರವಾಗುವ ಕನ್ನಡಿಗರ ಮಾನವೀಯತೆಯ ಸ್ಟೋರಿ

Monday, May 25th, 2020
qatar kannadiga

ಕತಾರ್ :  ದಿನೇ ದಿನೇ ಕರೋನ ಮಹಾಮಾರಿಯ ತಾಂಡವ ಹೆಚ್ಚುತ್ತಿದೆ. ಒಂದೆಡೆ ಪೀಡಿತರಾಗಿ ರೋಗಗ್ರಸ್ಥ ರಾಗಿರುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಕೆಲಸ ಕಳೆದುಕೊಂಡು, ಸಂಬಳವಿಲ್ಲದೆ, ಹೊಟ್ಟೆಗೆ ಊಟವೂ ಸಿಗದಂತಹ ಪರಿಸ್ಥಿತಿ ಹಲವರನ್ನು ನಿರಾಶ್ರಿತರನ್ನಾಗಿಸಿದೆ. ಕತಾರಿನ ಭಾರತೀಯ ರಾಯಭಾರಿ ಕಾರ್ಯಾಲಯದಡಿಯಲ್ಲಿ ಕಾರ್ಯನಿರತವಾಗಿರುವ ’ಭಾರತೀಯ ಸಮುದಾಯ ಹಿತೈಶಿ ವೇದಿಕೆ’ (ಐ.ಸಿ.ಬಿ.ಎಫ಼್) ಸಂಸ್ಥೆಯು ಇಂತಹ ನಿರಾಶ್ರಿತರನ್ನು ಹುಡುಕಿ ಅವರಿಗೆ ಸಹಾಯ ಹಸ್ತ ನೀಡುತ್ತಿದೆ. ಪ್ರತ್ಯೇಕವಾಗಿ ಕನ್ನಡಿಗರಾದ ಶ್ರೀ ಮಹೇಶ್ ಗೌಡ, ಉಪಾಧ್ಯಕ್ಷರು, ಐ.ಸಿ.ಬಿ.ಎಫ಼್ ಮತ್ತು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಜಂಟಿ ಕಾರ್ಯದರ್ಶಿ, […]

ದುಬಾೖಯಿಂದ ಕನ್ನಡಿಗರನ್ನು ಹೊತ್ತ ಇನ್ನೊಂದು ವಿಮಾನ ಮೇ 18ರಂದು ಬರಲಿದೆ

Sunday, May 17th, 2020
airIndia

ಮಂಗಳೂರು: ದುಬಾೖಯಿಂದ ಕನ್ನಡಿಗರನ್ನು ಹೊತ್ತ ಇನ್ನೊಂದು ವಿಮಾನ ಮೇ 18ರಂದು ಸಂಜೆ 6.30ಕ್ಕೆ ಮಂಗಳೂರಿಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿರುತ್ತಾರೆ ಎಂಬ ನಿಖರ ಮಾಹಿತಿ ದೊರಕಿಲ್ಲ. ಪ್ರಯಾಣಿಕರಿಗೆ ಮಂಗಳೂರಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಪ್ರಯಾಣಿಕರು ಕೂಡ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದರು. ಮೇ 20 ಮಸ್ಕತ್‌ನಿಂದ ಹಾಗೂ 22ರಂದು ದೋಹಾದಿಂದ ಬೆಂಗಳೂರಿನ ಮೂಲಕ ಮಂಗಳೂರಿಗೆ ವಿಮಾನ ಬರುವ ಮಾಹಿತಿಯಿತ್ತು. ಆದರೆ […]

ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡಿಗ ಸಹೋದರರ ಸಮಾಜ ಸೇವೆ

Monday, May 11th, 2020
ambika food

ಮುಂಬೈ :  ರಾಜು ಮೊಗವೀರ ಹಾಗೂ ಸತೀಶ ಮೊಗವೀರ ಇವರ ಅಂದೇರಿಯ ಅಂಬಿಕಾ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಇದರ ಪ್ರಾಯೋಜಕತ್ವದಲ್ಲಿ ಕೊರೊನ ಸಂತ್ರಸ್ತರಿಗೆ ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಪ್ರತಿ ದಿನ ಹದಿನೈದು ಸಾವಿರ ದಿಂದ ಇಪತ್ತು ಸಾವಿರ ಊಟದ ಪ್ಯಾಕೆಟ್ ಗಳನ್ನು ವಿತರಿಸಲಾಗುತ್ತಿದೆ. ದಿನಾಲೂ ಬೇರೆ ಬೇರೆ ರೀತಿಯ ಪುಲಾವ್, ಬಿರಿಯಾನಿ, ಕಿಚಡಿ, ಮಸಾಲಾ ಬಾತ್, ಹಾಗೂ ಪಾವ್ ಬಾಜಿ ಯನ್ನು ವಿತರಿಸುತ್ತಿದ್ದಾರೆ. ಹಾಗೂ ಅಲ್ಲಿನ ಹತ್ತಿರದ ನಿವಾಸಿಗಳಿಗೂ, ಕಾರ್ಮಿಕರಿಗೂ, ಊಟವಿಲ್ಲದೆ ಪರದಾಡುತ್ತಿದ್ದವರಿಗೆ ಉಚಿತ […]

ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗರಿಗಾಗಿ ಸಹಾಯವಾಣಿಗೆ ಚಾಲನೆ ನೀಡಿದ ಬಿ.ಎಸ್.ಯಡಿಯೂರಪ್ಪ

Monday, April 27th, 2020
helpline

ಬೆಂಗಳೂರು   : ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮನವಿಯ ಮೇರೆಗೆ ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗರಿಗಾಗಿ ಸಹಾಯವಾಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಪ್ರಪಂಚ ದಾದ್ಯಂತ ಮಾರಕ ಸೋಂಕುರೋಗ ಕೋವಿಡ್-19 ಹರಡಿರುವ ಹಿನ್ನಲೆಯಲ್ಲಿ ದೇಶವ್ಯಾಪಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಕೆಲಸದ ನಿಮಿತ್ತ ಹೊರ ರಾಜ್ಯಗಳಿಗೆ ಹೋಗಿ ಸಿಲುಕಿರುವ ಕರ್ನಾಟಕ ಮೂಲದವರ ಸಮಸ್ಯೆಗಳನ್ನು ಆಲಿಸಲು ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ ವತಿಯಿಂದ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಇಂದಿನಿಂದ ಕಾರ್ಯಾರಂಭಗೊಳ್ಳಲಿದೆ. ಬೆಂಗಳೂರಿನ ಡೈರಿ ವೃತ್ತದಲ್ಲಿರುವ ಕಲ್ಯಾಣ ಸುರಕ್ಷಾ ಭವನದಲ್ಲಿ ಕಾರ್ಯನಿರ್ವಹಿಸುವ […]

ಗಡಿಯಿಂದ ಬೇರ್ಪಟ್ಟಿದ್ದರೂ ನಾನು ಕನ್ನಡಿಗ: ಕಾಸರಗೋಡು ಚಿನ್ನ

Friday, December 1st, 2017
Kasargod-Chinna

ಮೂಡಬಿದಿರೆ: “ಕಾಸರಗೋಡಿನಲ್ಲಿದ್ದರೂ ನಾನು ಸಾಂಸ್ಕೃತಿಕವಾಗಿ ಕರ್ನಾಟಕದವನು. ಮುಂದೊಂದು ದಿನ ನಮ್ಮ ತಾಯಿಯನ್ನು ಸೇರುವ ನಂಬಿಕೆ ಇದೆ” ಎಂದು ಹೆಮ್ಮೆಯಿಂದ ಹೇಳಿಕೊಂಡರು ಹಿರಿಯ ರಂಗಕಲಾವಿದ, ಚಿತ್ರನಟ, ನಿರ್ದೇಶಕ ಕಾಸರಗೋಡು ಚಿನ್ನ. ಆಳ್ವಾಸ್ ನುಡಿಸಿರಿಯ ಭಾಗವಾಗಿ ನಡೆದ “ನನ್ನ ಕಥೆ, ನಿಮ್ಮ ಜೊತೆ”ಯಲ್ಲಿ ಅವರ ಕಥೆಯನ್ನು ಅವರೇ ಹಂಚಿಕೊಂಡಿದ್ದಾರೆ. “ಕಾಸರಗೋಡು ಕೇರಳದ ಪಾಲಾದರೂ, ಪರೋಕ್ಷವಾಗಿ ಅದು ಕನ್ನಡ ನೆಲವೇ ಆಗಿದೆ. ನನ್ನ ನೆಲದಲ್ಲಿ ಕನ್ನಡವನ್ನು ಉಳಿಸಿ ಬೆಳಿಸಬೇಕೆಂಬ ಉದ್ದೇಶದಿಂದ ನನ್ನ ೨೫ ಸಿನಿಮಾಕ್ಕೆ ಪೂರ್ಣವಿರಾಮ ಇಟ್ಟು ಇಲ್ಲಿ ಕನ್ನಡ, ತುಳು […]

ಕನ್ನಡಿಗರಿಗೇ ಕನ್ನಡ ಬಾಷೆಯ ಮೇಲೆ ಅಭಿಮಾನ ಇಲ್ಲ !

Thursday, December 4th, 2014
Kannada

ಮಂಗಳೂರು : ಕರ್ನಾಟಕ ರಾಜ್ಯ ಸರಕಾರ ಭ್ರಮೆಯಲ್ಲಿ ಇದೆಯೋ ಅಥವಾ ವಾಸ್ತವಿಕತೆಯನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆಯೋ ಗೊತ್ತಾಗುತ್ತಿಲ್ಲ. ಇಲ್ಲದೇ ಹೋದರೆ 1994 ರಿಂದ ಬಂದ ಅಷ್ಟೂ ಸರಕಾರಗಳು ತಮ್ಮ ಜೋಳಿಗೆಯಲ್ಲಿದ್ದ ಭಾಷಾ ನೀತಿಯನ್ನು ನ್ಯಾಯಾಲಯದ ಅಂಗಳದಲ್ಲಿ ಬಿಚ್ಚಿಟ್ಟು ಖುಷಿ ನೋಡುತ್ತಿರಲಿಲ್ಲ. ಪ್ರತಿ ಸಾರಿ ನ್ಯಾಯಾಲಯದಿಂದ ಪೆಟ್ಟು ತಿಂದರೂ ಮತ್ತೇ ಮತ್ತೇ ಮೇಲ್ಮನವಿಯನ್ನು ಸಲ್ಲಿಸುವುದರ ಮೂಲಕ ಭಾಷಾ ನೀತಿಯನ್ನು ಗಾಳಿಗೆ ಬಿಟ್ಟ ಅಪವಾದದಿಂದ ದೂರ ಉಳಿಯುವ ಯತ್ನ ಮಾಡುತ್ತಿದೆ. ಆದರೆ ಈ ಬಾರಿ ರಾಜ್ಯ ಸರಕಾರಕ್ಕೆ ಅಂತಹ ಅವಕಾಶ ಸಿಗುವ […]