ಆಸ್ಪತ್ರೆಗಳ ವರ್ತನೆಯನ್ನು ಖಂಡಿಸಿ ಡಿವೈಎಫ್ಐ ಕಾರ್ಯಕರ್ತರ ಪ್ರತಿಭಟನೆ

Friday, November 18th, 2016
DYFI

ಮಂಗಳೂರು: 500, 1000 ರೂ. ಮುಖಬೆಲೆಯ ನೋಟು ನಿಷೇಧದಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ನವೆಂಬರ್ 24ರವರೆಗೆ ಎಲ್ಲಾ ಮುಖಬೆಲೆಯ ನೋಟ್‌ಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆಯ ಸೂಚನೆಯಿದ್ದರೂ, ಆಸ್ಪತ್ರೆಗಳು ಮಾತ್ರ ಈ ಸೂಚನೆಗೆ ಕ್ಯಾರೇ ಅನ್ನುತ್ತಿಲ್ಲ. ಇದರಿಂದ ರೋಗಿಗಳು ಗುಣಮುಖರಾದರೂ ಆಸ್ಪತ್ರೆಯಲ್ಲಿಯೇ ಬಂಧಿಗಳಾಗುವಂತಾಗಿದೆ. ಆಸ್ಪತ್ರೆಗಳ ಈ ವರ್ತನೆಯನ್ನು ಖಂಡಿಸಿ ಡಿವೈಎಫ್ಐ ಕಾರ್ಯಕರ್ತರು ನಗರದ ಕೊಲಾಸೊ ಆಸ್ಪತ್ರೆಯ ಮುಂದೆ ನಿನ್ನೆ ಪ್ರತಿಭಟನೆ ನಡೆಸಿದರು. ಈಗಾಗಲೇ 13ಕ್ಕೂ ಹೆಚ್ಚು ಮಂದಿ ರೋಗಿಗಳು ಗುಣಮುಖರಾಗದೆ ಈ ಆಸ್ಪತ್ರೆಗಳಲ್ಲೇ ಉಳಿದಿದ್ದರು. ದುಡ್ಡು ಕೊಡುತ್ತೇವೆ […]

ಭಾರತಕ್ಕೆ ಜಗತ್ತಿನಲ್ಲಿ ಅಗ್ರಸ್ಥಾನ ದೊರಕಲು ಭ್ರಷ್ಟಾಚಾರ ತೊಲಗಬೇಕು : ಆಡ್ವಾಣಿ

Tuesday, November 1st, 2011
LK Advani Janachetana yatra

ಮಂಗಳೂರು: ಭ್ರಷ್ಟಾಚಾರ ವಿರೋಧಿಸಿ ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿಯವರು ಕೈಗೊಂಡಿರುವ ರಾಷ್ಟ್ರೀಯ ಜನ ಚೇತನಾ ಯಾತ್ರೆಯು ಸೋಮವಾರ ನಗರವನ್ನು ತಲುಪಿತು .  ಮಂಗಳೂರಿನ  ಕೇಂದ್ರ ಮೈದಾನಿನಲ್ಲಿ ನಡೆದ  ಬೃಹತ್‌ ಸಮಾವೇಶದಲ್ಲಿ ಜಿಲ್ಲೆಯ ವಿವಿದೆಡೆಗಳಿಂದ ಬಂದ ಅಡ್ವಾಣಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದರು. ಜನಚೇತನಾ ರಥ ಮಂಗಳೂರು ತಲುಪುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿದರು. ಭ್ರಷ್ಟಾಚಾರವನ್ನು ತೊಲಗಿಸಿ, ವಿದೇಶದಲ್ಲಿರುವ ಕಪ್ಪು ಹಣವನ್ನು ಹಿಂದೆ ತಂದು ಜಗತ್ತಿನ ಅಗ್ರಸ್ಥಾನದ ದೇಶವನ್ನಾಗಿ ಭಾರತವನ್ನು ರೂಪಿಸಲು ದೇಶದ ಜನತೆ ಪಣತೊಡಬೇಕು ಎಂದು ಬಿಜೆಪಿ […]