ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವು
Monday, January 30th, 2017ಮಂಗಳೂರು: ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಗಳೂರಿನ ನಂತೂರು ಬಳಿಯ ಉಜ್ಜೋಡಿಯಲ್ಲಿ ನಡೆದಿದೆ. ವಲೇರಿಯನ್ ಲೋಬೋ(55), ಎಸ್ಮಿ ಲೋಬೋ(51), ಸಂದೀಪ್ (28) ಮೃತಪಟ್ಟವರು. ಕಬ್ಬಿಣದ ಏಣಿಯಿಟ್ಟು ತೆಂಗಿನ ಮರಕ್ಕೇರಿದ್ದಾಗ ಈ ದುರಂತ ಸಂಭವಿಸಿದೆ. ತೆಂಗಿನಮರದಲ್ಲಿದ್ದ ಕಾಳುಮೆಣಸು ಕೀಳಲು ವಲೇರಿಯನ್ ಲೋಬೋ ಮರ ಹತ್ತಿದ್ದರು. ಈ ವೇಳೆ ಸ್ಟೀಲ್ ಏಣಿ ವಿದ್ಯುತ್ ತಂತಿಗೆ ಬಿದ್ದು ಈ ದುರಂತ ಸಂಭವಿಸಿದೆ. ಲೋಬೋ ರಕ್ಷಣೆಗೆ ಧಾವಿಸಿದ ಇಬ್ಬರು ಕೂಡ ದುರಂತದಲ್ಲಿ ಸಾವಿಗೀಡಾಗಿದ್ದಾರೆ.