ಮಂಗಳೂರು ಹಿಂಸಾಚಾರದಲ್ಲಿಇಬ್ಬರು ಮೃತ್ಯು , ಮೂವರು ಪೊಲೀಸರಿಗೆ ಗಂಭೀರ ಗಾಯ
Friday, December 20th, 2019ಮಂಗಳೂರು : ಗುರುವಾರ ನಿಷೇಧಾಜ್ಞೆ ಜಾರಿ ನಡುವೆಯೂ ಗುಂಪು ಸೇರಿ ಹಿಂಸಾಚಾರಕ್ಕೆ ಮುಂದಾಗಿದ್ದ ಕೆಲವು ಕಿಡಿಗೇಡಿಗಳಿಗೆ ಲಾಠಿ ಪ್ರಹಾರ, ಅಶ್ರುವಾಯು ದಾಳಿ, ನಿರಂತರ ಧ್ವನಿ ವರ್ಧಕದ ಮೂಲಕ ವಿನಂತಿಸಿದರೂ ಸಂಜೆ 5.30 ರವರೆಗೆ ಕಲ್ಲು ತೂರಾಟ ನಡೆಸುತ್ತಲೇ ಇದ್ದರು. ಮಂಗಳೂರು ಪೊಲೀಸ್ ಕಮಿಷನರ್ ಪಿ ಹರ್ಷ ಅವರು ಕಲ್ಲು ತೂರಾಟ ಮಾಡುವವರಿಗೆ ವಿನಂತಿಸುತ್ತಲೇ ಇದ್ದರು. ಆದರೂ ಕಿಡಿಗೇಡಿಗಳು ನಿರಂತರ ಹಿಂಸಾಚಾರದ ಕೃತ್ಯವನ್ನು ಮುಂದುವರಿಸಿದ್ದರು. ಗುರುವಾರ ಸಂಜೆ ವೇಳೆಗೆ ಸ್ಥಳೀಯ ಮುಖಂಡರು ಹಿಂಸಾಚಾರ ಮಾಡಬಾರದು ಎಂದು ವಿನಂತಿಸಿದರು ದಾಳಿ ಕೋರರು ಕಲ್ಲು ತೂರುವುದನ್ನು ನಿಲ್ಲಿಸಲಿಲ್ಲ. ಸಂಜೆ ವೇಳೆ […]