ಶ್ರೀಕೃಷ್ಣಮಠದ ಗರ್ಭಗುಡಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವಾಗ ಪುರಾತನ ಕಲಾಕೃತಿ ಪತ್ತೆ
Tuesday, October 4th, 2016ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವಾಗ ಪುರಾತನ ಕಲಾಕೃತಿಯೊಂದು ಗೋಚರಕ್ಕೆ ಬಂದಿದೆ. ಇದು ಸುತ್ತುಪೌಳಿಯ ಮೇಲ್ಭಾಗದಲ್ಲಿ ಗೋಚರಿಸುತ್ತಿದೆ. ಆಕೃತಿ ಪಶ್ಚಿಮ ದಿಕ್ಕಿಗೆ ಮುಖ ಮಾಡಿದೆ. ಮಣ್ಣು ಮತ್ತು ಸುಣ್ಣದಿಂದ ರಚಿಸಲಾದ ಕಲಾಕೃತಿಯಂತೆ ತೋರುತ್ತಿದ್ದು, ಸುಮಾರು ಮೂರು ಅಡಿ ಎತ್ತರವಿದೆ. ಇದು ಗೋಡೆಯಲ್ಲಿ ರಚಿಸಿದ ಉಬ್ಬುಕೃತಿ. ಆ ಕೃತಿಯನ್ನು ಕಂಡಾಗ ವೇದವ್ಯಾಸರು ಮತ್ತು ಮಧ್ವಾಚಾರ್ಯರು ಎಂದು ಅಂದಾಜಿಸಬಹುದಾಗಿದೆ. ಮಣ್ಣಿನ ಆಕೃತಿಯಾದ ಕಾರಣ ಕೆಲವೆಡೆ ಹಾಳಾಗಿದೆ. ಹಾಳಾದ ಕಡೆ ಸಿಮೆಂಟ್ ತೇಪೆ ಹಾಕುವುದು ಬೇಡ ಎಂದು ಪರ್ಯಾಯ ಶ್ರೀಪೇಜಾವರ […]