Blog Archive

ಫೆ. 10: ರಕ್ಷಣಾ ಸಚಿವೆ ನಿರ್ಮಲಾ ಕಲ್ಲಡ್ಕಕ್ಕೆ

Tuesday, February 6th, 2018
nirmala

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಫೆ. 10ರಂದು ರಾಜ್ಯ ಮಟ್ಟದ ವಿವಿಧ ವಿಶ್ವವಿದ್ಯಾನಿಲಯಗಳ ಭಾರತೀಯ ಶೌರ್ಯಪರಂಪರೆ ವಿಚಾರ ಸಂಕಿರಣವನ್ನು ಬೆಳಗ್ಗೆ 9.45ಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ. ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್‌ ಪ್ರಸ್ತಾವನೆಗೈಯುವರು.ವಿಚಾರ ಸಂಕಿರಣದ ಮೊದಲ ಅವಧಿಯಲ್ಲಿ ಕರ್ನಾಟಕ ಉತ್ತರ ರಾ.ಸ್ವ. ಸಂಘದ ಪ್ರಾಂತ ಸಹ ಬೌದ್ಧಿಕ್‌ ಪ್ರಮುಖ್‌. […]

ಹೆಲ್ಮೆಟ್ ಧರಿಸಿದ್ದಇಬ್ಬರು ಆಗಂತುಕರಿಂದ ಕಲ್ಲಡ್ಕ ದಲ್ಲಿ ವ್ಯಕ್ತಿ ಮೇಲೆ ದಾಳಿ

Tuesday, December 26th, 2017
Kalladka Attack

ಬಂಟ್ವಾಳ  :  ಕರೋಪಾಡಿ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಹತ್ಯೆ ಆರೋಪಿ ಎನ್ನಲಾದ  ವ್ಯಕ್ತಿಯೊಬ್ಬರ  ಮೇಲೆ ದಾಳಿ ಹೆಲ್ಮೆಟ್ ಧರಿಸಿದ್ದ ಇಬ್ಬರು ಆಗಂತುಕರು  ತಲ್ವಾರ್ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ  ಕಲ್ಲಡ್ಕ ದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕೇಶವ ಎಂದು ಗುರುತಿಸಲಾಗಿದ್ದು, ಆತನನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಘಟನೆ ಬೆನ್ನಲ್ಲೇ ಕಲ್ಲಡ್ಕ ಪರಿಸರದಲ್ಲಿ ಬಿಗುವಿನ ವಾತಾವರಣ  ನಿರ್ಮಾಣ ಗೊಂಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್  ಸರು ಸ್ಥಳಕ್ಕೆ ಆಗಮಿಸಿದ್ದಾರೆ.

ದಾಖಲೆ ರಹಿತವಾಗಿ ಹಣ ಸಾಗಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳ ವಶ

Thursday, December 8th, 2016
transporting-unaccounted

ಪುತ್ತೂರು: ದಾಖಲೆ ರಹಿತವಾಗಿ ಹಣ ಸಾಗಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳ ಸಹಿತ 18.8 ಲಕ್ಷ ರೂಪಾಯಿಯನ್ನು ಪುತ್ತೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪುತ್ತೂರು ಮೂಲಕವಾಗಿ ದಾಖಲೆ ರಹಿತವಾಗಿ ಹಣ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಲ್ಲಡ್ಕದಿಂದ ಪುತ್ತೂರಿಗೆ ಆಗಮಿಸಿದ ಕಾರನ್ನು ಮುಕ್ರಂಪಾಡಿಯಲ್ಲಿ ತಡೆದ ಪೊಲೀಸರು, ಒಟ್ಟು 18.8 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 100 ರೂಪಾಯಿ ಮುಖಬೆಲೆಯ 1,90,700 ರೂಪಾಯಿ ಹಾಗೂ 2000 ರೂಪಾಯಿ ಮುಖಬೆಲೆಯ 16,80,000 ರೂಪಾಯಿ ಮತ್ತು 50 ರೂಪಾಯಿ ಮುಖಬೆಲೆಯ 9,300 […]

ಗೋಳ್ತಮಜಲು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

Saturday, May 16th, 2015
jcb

ಮಂಗಳೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕದಲ್ಲಿ ನಾಗರೀಕರು ಚರಂಡಿ ಸ್ವಚ್ಛಗೊಳಿಸಲು ಬಂದ ಜೆಸಿಬಿಯ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ತಡೆದ ಘಟನೆ ನಡೆದಿದೆ. ನಾಗರೀಕರು 5 ವರ್ಷಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಿ ಚರಂಡಿ ಸ್ವಚ್ಛಗೊಳಿಸಲು ಆಗ್ರಹಿಸಿದ್ದರೂ ಸ್ಪಂದಿಸದೆ ಇದೀಗ ಚುನಾವಣಾ ಅಧಿಸೂಚನೆ ಪ್ರಕಟವಾದ ನಂತರ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿರುವ ಗ್ರಾಮ ಪಂಚಾಯತ್ ನಡೆಯ ಬಗ್ಗೆ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಚುನಾವಣಾ ನೀತಿ […]