ಕಲ್ಲಾಪು ಬುರ್ದುಗೋಳಿ ಶ್ರೀ ಕೊರಜ್ಜನ ಉದ್ಭವ ಶಿಲೆಯ ಆದಿಸ್ಥಳದಲ್ಲಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ ಬಿಗ್ ಬಾಸ್ ಶೈನ್ ಶೆಟ್ಟಿ

Tuesday, November 19th, 2024
ಕಲ್ಲಾಪು ಬುರ್ದುಗೋಳಿ ಶ್ರೀ ಕೊರಜ್ಜನ ಉದ್ಭವ ಶಿಲೆಯ ಆದಿಸ್ಥಳದಲ್ಲಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ ಬಿಗ್ ಬಾಸ್ ಶೈನ್ ಶೆಟ್ಟಿ

ಉಳ್ಳಾಲ : ಈ ತಿಂಗಳು ತೆರೆಕಾಣಲಿರುವ ಶೈನ್ ಶೆಟ್ಟಿ, ಪ್ರಭು ಮುಂಡ್ಕೂರು ಅಭಿನಯದ ಮರ್ಯಾದೆ ಪ್ರಶ್ನೆ ಯಶಸ್ಸಿಗಾಗಿ ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಉದ್ಬವ ಶಿಲೆಯ ಆದಿಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ, ನಾವು ದಿನನಿತ್ಯ ನಮ್ಮ ಕಾರ್ಯ ಪ್ರಾರಂಭಿಸುವಾಗ ಅಜ್ಜನನ್ನು ನೆನಪಿಸಿಕೊಂಡು ಸಾಕಷ್ಟು ಯಶಸ್ವಿಯಾಗಿದ್ದೇವೆ, ಈ ಚಿತ್ರವೂ ಜನರ ಮನಗೆಳ್ಳುವಲ್ಲಿ ಕೊರಗಜ್ಜ ಹರಸಲಿ ಎಂದು ಪ್ರಾರ್ಥಿಸಲು ಈಕ್ಷೇತ್ರಕ್ಕೆ ಬಂದಿದ್ದೇವೆ ಖಂಡಿತ ದೈವ ಬಲ ಇರುತ್ತದೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ನಾಯಕ್ ಕ್ಷೇತ್ರದ ಇತಿಹಾಸವನ್ನು ನಟರಿಗೆ […]

ಅಪ್ಪಟ ತುಳುವ, ಅಜ್ಜನ ಭಕ್ತನಾಗಿ ಅಪಪ್ರಚಾರಕ್ಕೆ ಇಳಿಯಲು ಸಾಧ್ಯವೇ?’: ನಟ ಅರ್ಜುನ್ ಕಾಪಿಕಾಡ್

Saturday, September 14th, 2024
ಅಪ್ಪಟ ತುಳುವ, ಅಜ್ಜನ ಭಕ್ತನಾಗಿ ಅಪಪ್ರಚಾರಕ್ಕೆ ಇಳಿಯಲು ಸಾಧ್ಯವೇ?': ನಟ ಅರ್ಜುನ್ ಕಾಪಿಕಾಡ್

ಮಂಗಳೂರು: ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ ಹೋಗುವ ಮನಸ್ಸಾಗುವುದಿಲ್ಲ. ಮನಸ್ಸಲ್ಲಿ ಏನು ಬೇಸರವಿದ್ದರೂ ಇಲ್ಲಿಗೆ ಬಂದಾಗ ಅದನ್ನು ಕಳೆಯುತ್ತೇವೆ ಎಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಕನ್ನಡ ಚಲನಚಿತ್ರ “ಕಲ್ಜಿಗ” ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು. ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ […]

ಕಲ್ಲಾಪು ಬಳಿ 25 ಅಂಗಡಿಗಳಿಗೆ ಬೆಂಕಿ, ಕೋಟ್ಯಂತರ ರೂಪಾಯಿ ನಷ್ಟ

Monday, June 10th, 2024
Kallapu-shops

ಮಂಗಳೂರು : ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ ಸಂಭವಿಸಿ 5 ದೊಡ್ಡ ಹಾಗೂ 20 ಸಣ್ಣ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಭಾನುವಾರ ಮುಂಜಾನೆ 4 ಗಂಟೆ ವೇಳೆಗೆ ನಡದಿರುವ ಬಗ್ಗೆ ವರದಿಯಾಗಿದೆ. ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿನ ನವೀದ್ ಮಾಲೀಕತ್ವದ ಎಸ್.ಎನ್ ಫ್ರೂಟ್ಸ್ , ಸುಹೈಲ್ ಎಂಬವರಿಗೆ ಸೇರಿದ ಕೆಎಫ್ ಕೆ, ಲತೀಫ್ ಎಂಬವರ ಕೆ.ಕೆ.ಫ್ರೂಟ್ಸ್ , ಇಂಡಿಯನ್ (60 ),ಸಲಾಂ ಅವರ ಬಿ.ಎಸ್.ಆರ್, ಝುಲ್ಫೀಕರ್ ಅವರ ಪಿಕೆಎಸ್, ನಾಸೀರ್ ಎಂಬವರ ಕೆಜಿಎನ್ […]

ಅನಾಥಾಶ್ರಮಕ್ಕೆ ದೇಣಿಗೆ ನೀಡಲು ಹೊರಟ ಮಹಿಳೆ ನಿಗೂಢ ನಾಪತ್ತೆ !

Wednesday, March 3rd, 2021
Hinaj

ಉಳ್ಳಾಲ : ವಿದೇಶದಿಂದ ಬಂದ ಗರ್ಭಿಣಿ ಮಹಿಳೆಯೊಬ್ಬರು ಕಲ್ಲಾಪುವಿನಲ್ಲಿರುವ ಅನಾಥಾಶ್ರಮ ಶಾಲೆಗೆ ದೇಣಿಗೆ ಹಣವನ್ನು ನೀಡಲು ಹೋಗಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಮಾರ್ಚ್ 2 ರ ಮಂಗಳವಾರ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಗರ್ಭಿಣಿಯನ್ನು ಸೋಮೇಶ್ವರ ಒಂಬತ್ತುಕೆರೆ ನಿವಾಸಿ ಇಬ್ರಾಹಿಂ ಎಂಬವರ ಪತ್ನಿ ಹಿನಾಜ್(25) ಎಂದು ಗುರುತಿಸಲಾಗಿದೆ. ಹಿನಾಜ್ ಪತಿಯೊಂದಿಗೆ ವಿದೇಶದಲ್ಲಿದ್ದರು ಮತ್ತು ಕೆಲವು ವಾರಗಳ ಹಿಂದೆ ತಮ್ಮ ತವರೂರಿಗೆ ಮರಳಿದ್ದರು. ಪ್ರತಿಜ್ಞೆಯನ್ನು ಪೂರೈಸಲು ಹಣವನ್ನು ಹಸ್ತಾಂತರಿಸಲು […]

ಅಕ್ರಮವಾಗಿ ಕರುಗಳನ್ನು ಸಾಗಾಟ : ಆರೋಪಿಗಳಿಬ್ಬರು ಪರಾರಿ

Thursday, September 24th, 2020
calf

ಮಂಗಳೂರು  : ಅಕ್ರಮವಾಗಿ  ಕರುಗಳನ್ನು ಸಾಗಾಟ ನಡೆಸುತ್ತಿದ್ದ ಕಾರನ್ನು ಉಳ್ಳಾಲ ಪೊಲೀಸರು ಕಲ್ಲಾಪು ಸಮೀಪ ಅಡ್ಡ ಗಟ್ಟಿ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ವೇಳೆ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ ಜಾನುವಾರು ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕಲ್ಲಾಪು ಸಮೀಪ ಅಡ್ಡಗಟ್ಟಿದ್ದರು. ಈ ಸಂದರ್ಭ ಕಾರಿನಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ‌. ಕಾರನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ನಿರಂತರ ಮಳೆ – ಎಕ್ಕೂರು, ಜಪ್ಪಿನಮೊಗರು, ಕಲ್ಲಾಪು ಪ್ರದೇಶ ಜಲಾವೃತ

Friday, September 11th, 2020
Jappiana Mogaru

ಮಂಗಳೂರು : ನಿರಂತರವಾಗಿ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ  ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ಎಕ್ಕೂರು, ಜಪ್ಪಿನಮೊಗರು, ಕಲ್ಲಾಪು ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದಾಗಿ ಶುಕ್ರವಾರ  ಮುಂಜಾನೆಯ ವೇಳೆ ಜಪ್ಪಿನಮೊಗರು ಸುತ್ತಮುತ್ತ ಹಲವು ಮನೆಗಳು, ಫ್ಲ್ಯಾಟ್‌ಗಳ ಒಳಗೆ ನೆರೆ ನೀರು ನುಗ್ಗಿದೆ. ಗುರುವಾರ ತಡರಾತ್ರಿಯಿಂದ ಮಳೆ ಮತ್ತಷ್ಟು ಬಿರುಸುಗೊಂಡಿದ್ದರಿಂದ  ‘‘ಜಪ್ಪಿನಮೊಗರು ಆಸುಪಾಸಿನ ಸುಮಾರು 50 ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆಯಲ್ಲಿರುವ ಸಾಮಗ್ರಿಗಳು ಮಳೆ ನೀರಿನಿಂದಾಗಿ ಸಂಪೂರ್ಣವಾಗಿ ನಿರುಪಯುಕ್ತವಾಗಿದೆ. ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ದಳದ ತಂಡ ದೋಣಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಈಗಾಗಲೇ […]

ಕಲ್ಲಾಪು : ಹಾಸಿಗೆಯ ಗೋಡಾನ್ ನಲ್ಲಿ ಅಗ್ನಿ ದುರಂತ

Saturday, October 19th, 2019
Agni

ಉಳ್ಳಾಲ : ಕಲ್ಲಾಪು ಪಟ್ಲದಲ್ಲಿ ಹಾಸಿಗೆ ಶೇಖರಿಸಿಟ್ಟಿದ್ದ ಗೋಡಾನ್‌ವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ಸಂಭವಿಸಿದೆ. ತೊಕ್ಕೊಟ್ಟಿನ ಸಪ್ನಾ ಎಂಟರ್ ಪ್ರೈಸಸ್‌ಗೆ ಸೇರಿದ ಗೋಡಾನ್ ಇದಾಗಿದೆ. ಬೆಂಕಿಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.  

ಕಲ್ಲಾಪು: ಖಾಸಗಿ ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಮೃತ್ಯು

Monday, November 6th, 2017
accident

ಮಂಗಳೂರು:ನಗರದ ಕಲ್ಲಾಪುವಿನಲ್ಲಿ ಖಾಸಗಿ ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ  ನಡೆದಿದೆ. ಉಳ್ಳಾಲ ಬೈಲ್ ನಿವಾಸಿ ಮಹಮ್ಮದ್ ಸಯ್ಯದ್ ಶಲೀಲ್ ಮೃತ ವಿದ್ಯಾರ್ಥಿ. ತುಂಬೆ ಬಿಎ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿಯಾದ ಈತ, ಮೊಬೈಲ್‌ನ ಇಯರ್ ಫೋನ್‌ನಲ್ಲಿ ಸಂಭಾಷಣೆ ಮಾಡುತ್ತ ಬೈಕ್ ಚಲಾಯಿಸುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿದೆ. ಈ ವೇಳೆ ಖಾಸಗಿ ಬಸ್‌ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾನೆ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಹೆದ್ದಾರಿ ಬದಿ ದರೋಡೆಗೆ ಯತ್ನ: ಐವರ ಬಂಧನ

Monday, October 23rd, 2017
robbery plot

ಮಂಗಳೂರು: ಮಂಗಳೂರಿನ ಉಳ್ಳಾಲ ಪೊಲೀಸರು  ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ದರೋಡೆ ನಡೆಸುತ್ತಿದ್ದ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ . ಬಂಧಿತರನ್ನು ಪುತ್ತೂರಿನ ರವಿಕುಮಾರ್, ಕೇರಳದ ಮಂಜೇಶ್ವರ ಕುಂಜತ್ತೂರು ನಿವಾಸಿಗಳಾದ ಖಲೀಲ್, ರಾಜೇಶ್ ಕೆ, ಅಝೀಮ್, ಜಾಬೀರ್ ಅಬ್ಬಾಸ್ ಎಂದು ಗುರುತಿಸಲಾಗಿದೆ . ಬಂಧಿತರಿಂದ ಮಾರಕಾಸ್ತ್ರಗಳು , ಕಬ್ಬಿಣದ ರಾಡು, ಮೆಣಸಿನ ಪುಡಿ , ಚೂರಿ ಹಾಗೂ ಮಾರುತಿ ಸಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ಕೇರಳದಿಂದ ಮಂಗಳೂರು ಹೋಗುವ […]

ನಗರದ ಕಲ್ಲಾಪು ಬಳಿ ಬಸ್ -ಜೀಪ್ ಡಿಕ್ಕಿ ಆರುಮಂದಿಗೆ ಗಾಯ

Friday, December 7th, 2012
Jeep bus hit at Kallaup

ಮಂಗಳೂರು : ಗುರುವಾರ ಬೆಳಗ್ಗೆ ತೊಕ್ಕೊಟ್ಟು ಸಮೀಪ ಕಲ್ಲಾಪು ಬಳಿ ಬಸ್ ಮತ್ತು ಕಾರ್ ನಡುವೆ ಮುಖಾಮುಕಿ ಸಂಭವಿಸಿದ ಡಿಕ್ಕಿಯಲ್ಲಿ ಜೀಪ್ ನಲ್ಲಿದ್ದ 6 ಮಂದಿ ಗಾಯಗೊಂಡಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಿದೇಶಕ್ಕೆ ತೆರಳಲಿದ್ದ ಮನೆಮಂದಿಯೊಬ್ಬರನ್ನು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಿಟ್ಟು ಹಿಂದಿರುಗುತ್ತಿದ್ದ ವೇಳೆ ಕುಂಪಲದಿಂದ ಸ್ಟೇಟ್ ಬ್ಯಾಂಕ್ ಗೆ ತೆರಳುತ್ತಿದ್ದ ಸಿಟಿ ಬಸ್ ಡಿಕ್ಕಿ ಹೊಡೆದಿದೆ. ಕಾಸರಗೋಡು ವಿದ್ಯಾನಗರದ ನಾಸಿರ್, ಅಬ್ದುಲ್ ಕುಂಞ, ಅನ್ಫಾಲ, ಅಶ್ರಫ್, ನೌಫಾರ ಹಾಗೂ ಜೀಪ್ ಚಾಲಕ ಅಬೂಬಕರ್ ಗಾಯಾಳುಗಳಾಗಿದ್ದು ಈ […]