ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅದಾನಿ ಆನೆಯ ಜೊತೆ ಪಿಲಿನಲಿಕೆ ಆಕೃತಿ ಸ್ಥಾಪನೆ

Thursday, November 19th, 2020
Pili Nalike

ಮಂಗಳೂರು : ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಿಸಲಾಗಿದ್ದ ಪಿಲಿನಲಿಕೆ ಆಕೃತಿ ಮತ್ತೆ ಮೂಲ ಸ್ಥಾನದಲ್ಲಿ ಸ್ಥಾಪನೆ ಮಾಡಲಾಗಿದೆ, ಜೊತೆಗೆ ಅದಾನಿ ಗ್ರೂಪಿನ ಆನೆಯ ಸಂಕೇತವು ಇದೆ. ಪಿಲಿನಲಿಕೆ ಆಕೃತಿಯನ್ನು ಮೂಲ ಸ್ಥಾನದಲ್ಲಿ ಮತ್ತೆ ಸ್ಥಾಪಿಸುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು. ಪಿಲಿನಲಿಕೆ ಎಂಬುದು ಬೇರೆ ಕಡೆಯಿಂದ ಮಂಗಳೂರಿಗೆ ಬರುವ ಜನರಿಗೆ ಗೋಚರಿಸುವ ತುಳುನಾಡಿನ ಕಲೆ ಮತ್ತು ಸಂಸ್ಕೃತಿ. ಪಿಲಿನಲಿಕೆಯ ಆಕೃತಿ ತುಳುನಾಡಿನ ಹೆಮ್ಮೆ ಎಂದು ಅದಾನಿ ಗ್ರೂಪ್‌ನ ಪಿಆರ್‌ಒ ಗೆ ಹೇಳಿದ್ದರು.

ಜನರ ಸಮಸ್ಯೆಗಳ ಪರಿಶೀಲನೆ ಮಹಾನಗರ ಪಾಲಿಕೆ ಕಣ್ಣೂರು ವಾರ್ಡ್ 52ರಲ್ಲಿ ಶಾಸಕ ಜೆ.ಆರ್ ಲೋಬೊ

Thursday, September 26th, 2013
lobo-kannuru

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಣ್ಣೂರು ವಾರ್ಡ್ 52ಕ್ಕೆ ಶಾಸಕ ಜೆ.ಆರ್ ಲೋಬೊ ಬೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಶೀಲಿಸಿದರು. ಅಲ್ಲಿನ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಡ್ರೈನೇಜ್ ಹಾಗೂ ರಸ್ತೆ ದುರವಸ್ಥೆ. ಸುಮಾರು 300 ಮನೆಗಳು ರೈಲ್ವೆ ಹಳಿಯ ಪಕ್ಕದಲ್ಲಿರುವುದರಿಂದ ರೈಲು ಹಳಿ ದಾಟುವ ಸಂದರ್ಭ ತೊಂದರೆಗಳುಂಟಾಗುತ್ತದೆ. ರೈಲ್ವೆ ಹಳಿ ದಾಟುವ ವ್ಯವಸ್ಥೆಯನ್ನು ಆದ್ಯತೆಯ ಆಧಾರದ ಮೇರೆಗೆ ನಡೆಸಬೇಕಾಗಿದೆ. ಅಲ್ಲಿನ ಸಮಸ್ಯೆಗಳನ್ನೆಲ್ಲಾ ಪರಿಶೀಲಿಸಿ  ಜನರ ಅಗತ್ಯತೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಸಂಬಂಧಿಸಿದ […]