ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ ನಿಧನ

Wednesday, February 7th, 2024
Padmanabha naringana

ಮಂಗಳೂರು : ಪದ್ಮನಾಭ ನರಿಂಗಾನ (77)ಅವರು ಹೃದಯಾಘಾತದಿಂದ ನಗರದ ಖಾಸಗಿ‌ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಇವರು ಸಮಾಜಸೇವೆಯೊಂದಿಗೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಹಿಂದ ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಮುಖಂಡ, ದಲಿತ ನಾಯಕ, ನರಿಂಗಾನ ಕಂಬಳ ಸಮಿತಿ ಗೌರವ ಸಲಹೆಗಾರ, ನರಿಂಗಾನ ಕಂಬಳ ಸಮಿತಿ ಗೌರವ ಸಲಹೆಗಾರ, ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿದ್ದರು. ಕಳೆದ‌‌ ಬಾರಿ‌ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು. ಮೃತರುಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ನಿಧನಕ್ಕೆ […]

ಕಾಂಗ್ರೆಸ್ ಮುಖಂಡನನ್ನ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ

Saturday, March 20th, 2021
Amzad

ಚಿಕ್ಕಬಳ್ಳಾಪುರ:  ಕಾಂಗ್ರೆಸ್ ಮುಖಂಡನನ್ನ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಶನಿವಾರ ನಡೆದಿದೆ. ಕೊಲೆಯಾದ ಕಾಂಗ್ರೆಸ್ ಮುಖಂಡ ಅಮಜದ್ (43) ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಅಮಜದ್ ನನ್ನು ಒಮ್ನಿ ಕಾರಿನ ಮೂಲಕ ಹಿಂಬಾಲಿಸಿ ಬಂದ ಅಪರಿಚಿತರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ಅಮಜದ್ ಮಿನಲ್ ಹಿನ್ನೆಲೆ ಹೊಂದಿದ್ದವನಾಗಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿದ್ದ. ಶಿಡ್ಲಘಟ್ಟ ನಗರ ಪೊಲೀಸರು ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೊಲೆಯ ಉದ್ದೇಶ ತಿಳಿದುಬಂದಿಲ್ಲ. ಹಾಡಹಗಲೇ […]

ದಕ್ಷಿಣ ಕನ್ನಡ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಸದಾನಂದ ಪೂಂಜ

Saturday, March 13th, 2021
Sadananda Poonja

ಬಂಟ್ವಾಳ: ಹಿರಿಯ ಕಾಂಗ್ರೆಸ್ ಮುಖಂಡ, ದ.ಕ. ಜಿ.ಪಂ. ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ(80) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದ ಅವರು ಸಜೀಪಮೂಡ ಗ್ರಾಮದ ಅಭಿವೃದ್ಧಿಯ ರೂವಾರಿಗಳಾಗಿ ಗುರುತಿಸಿಕೊಂಡಿದ್ದರು, ಸಜೀಪ ಮಾಗಣೆಯ ಆಡಳಿತದಾರರಾಗಿದ್ದರು. ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಸುಭಾಷ್‌ನಗರ ಶಾರದೋತ್ಸವ ಸಮಿತಿ, ಸುಭಾಷ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಸಜೀಪಮೂಡದಲ್ಲಿ ಸರಕಾರಿ ಪ.ಪೂ.ಕಾಲೇಜು ಸ್ಥಾಪನೆಗೆ ಪ್ರಮುಖ ಕಾರಣರಾಗಿದ್ದರು. ತಾಲೂಕು ಬೋರ್ಡ್ ಉಪಾಧ್ಯಕ್ಷರಾಗಿ, ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ […]

ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಕೆ. ಕೃಷ್ಣಪ್ಪ ಮೆಂಡನ್ ನಿಧನ

Friday, December 4th, 2020
Krishnappa mendon

ಮಂಗಳೂರು : ಹಿರಿಯ ಕಾಂಗ್ರೆಸ್ ಮುಖಂಡ, ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಕೆ. ಕೃಷ್ಣಪ್ಪ ಮೆಂಡನ್ (88) ಅವರು ಶುಕ್ರವಾರ  ನಿಧನರಾಗಿದ್ದಾರೆ. ಅವರು ತನ್ನ ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಕಂಕನಾಡಿ ವಾರ್ಡಿನ ಪಂಚಾಯತ್ ಸದಸ್ಯರಾಗಿ ಆರಂಭಿಸಿದ್ದರು. 1983 ರಿಂದ ಮಂಗಳೂರು ಮಹಾನಗರಪಾಲಿಕೆ ಅಳಪೆ ವಾರ್ಡಿನಿಂದ ಕಾರ್ಪೊರೇಟರ್ ಆಗಿ ಚುನಾಯಿತರಾಗಿದ್ದರು. ನಾಲ್ಕು ಬಾರಿ ಅವರು ಅಳಪೆ ವಾರ್ಡಿನಿಂದ ಕಾರ್ಪೊರೇಟರ್ ಆಗಿ ಚುನಾಯಿಸಲ್ಪಟ್ಟಿದ್ದಾರೆ. 1993 ರಲ್ಲಿ ಅವರು ಮಂಗಳೂರಿನ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಅದಲ್ಲದೆ, ದ. ಕ. […]

ಕಾಂಗ್ರೆಸ್ ಮುಖಂಡ ಮೊಹಿಯುದ್ದೀನ್ ಬಾವಾ ಮನೆಯಲ್ಲಿ ಕೊರೊನಾ, ಸೀಲ್ಡೌನ್

Friday, June 26th, 2020
moideen-bava-house

ಮಂಗಳೂರು : ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಮನೆಯಲ್ಲಿ ಕೊರೊನಾ  ಪ್ರಕರಣ ಕಂಡು ಬಂದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮನೆಗೆ  ಯಾರು ಪ್ರವೇಶಿಸಬಾರದು ಎಂಬ ನಾಮ ಫಲಕ ಹಾಕಿ ಮಂಗಳೂರು ಮಹಾನಗರ ಪಾಲಿಕೆ ಸೀಲ್ಡೌನ್ ಮಾಡಲಾಗಿದೆ. ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಪುತ್ರ ಬೆಂಗಳೂರಿನಲ್ಲಿ ವಾಸವಿದ್ದು, ಅವರಿಗೆ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢವಾಗಿದೆ ಇದರಿಂದಾಗಿ ಅವರ ಮನೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. […]

ಮುಂಬೈಯಿಂದ ಬಂದ ವ್ಯಕ್ತಿಯನ್ನು ಕೇರಳಕ್ಕೆ ತಲುಪಿಸಿದ ಕಾಂಗ್ರೆಸ್ ಮುಖಂಡನಿಗೆ ಕೋರೆಂಟೈನ್

Sunday, May 17th, 2020
delampady

ಪುತ್ತೂರು  : ಪಾಸ್ ಇಲ್ಲದೆ ಮುಂಬೈಯಿಂದ ಬಂದ ವ್ಯಕ್ತಿಯನ್ನು ಕಾರಿನಲ್ಲಿ ಕೇರಳಕ್ಕೆ ತಲುಪಿಸಿದ ಕಾಂಗ್ರೆಸ್ ಗ್ರಾಮ ಪಂಚಾಯತು ಸದಸ್ಯನ ವಿರುದ್ದ ಆಧೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ದೇಲಂಪಾಡಿ ಗ್ರಾಮ ಪಂಚಾಯತು ಸದಸ್ಯ, ಕಾಂಗ್ರೆಸ್ ನೇತಾರ ಕೊರಗಪ್ಪ ರೈ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಮುಂಬೈಯಿಂದ ಆಗಮಿಸಿದ ದೇಲಂಪಾಡಿ, ಮಯ್ಯಳ ನಿವಾಸಿ ಜಗನ್ನಾಥ ರೈ ಎಂಬವರನ್ನು ಪುತ್ತೂರಿನಿಂದ ತನ್ನ ಕಾರಿನಲ್ಲಿ ಕೊರಗಪ್ಪ ರೈ ಕರೆ ತಂದಿದ್ದರು. ಪಾಸ್ ಸಹಿತ ಯಾವುದೇ ದಾಖಲೆ ಇಲ್ಲದೆ ಜಗನ್ನಾಥ ರೈ ಅವರನ್ನು ಊರಿಗೆ ಕರೆದುಕೊಂಡು […]

ಬಿ ಜೆ ಪಿ ನಾಯಕರ ಮೇಲೆ ಕೇಸು ದಾಖಲಿಸುವಂತೆ ಪೊಲೀಸ್ ಆಯುಕ್ತ ಕಾಂಗ್ರೆಸ್ ಮುಖಂಡರಿಂದ ಮನವಿ

Tuesday, September 10th, 2019
congress appeal

ಮಂಗಳೂರು  : ಮಾಜಿ ಜಿಲ್ಲಾದಿಕಾರಿಯಾದ ಹಾಗು ಐ ಎ ಎಸ್ ಅಧಿಕಾರಿಯಾದ ಶಶಿಕಾಂತ್ ಸಿಂಥೆಲ್ ಅವರನ್ನು ದೇಶದ್ರೋಹಿ ಎಂದು ಹೇಳಿಕೆ ನೀಡಿದ ಬಿ ಜೆ ಪಿ ಜಿಲ್ಲಾಧ್ಯಕ್ಶ ಸಂಜೀವ ಮಠ೦ದೂರ್ ಹಾಗು ಬಿ ಜೆ ಪಿ ನಾಯಕರ ಮೇಲೆ ಕೇಸು ದಾಖಲಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗು ಐವನ್ ಡಿಸೋಜಾ ವಿಧಾನ ಪರಿಷತ್ ಶಾಸಕರು ಮತ್ತು ಇತರ ಕಾಂಗ್ರೆಸ್ ಮುಖಂಡರು ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿ ಪೊಲೀಸ್ ಆಯುಕ್ತರು ಸರಿಯಾದ ಕ್ರಮ […]