ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ವಾಹನ ಸವಾರರನ್ನು ಓಡಿಸಿದ ಕಾಡಾನೆ

Sunday, July 11th, 2021
Elephant

ಕಡಬ :   ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಟ್ಟಾಡಿಸಿದ ಘಟನೆ ಭಾನುವಾರ ನಡೆದಿದೆ. ಸಿರಿಬಾಗಿಲು ಗ್ರಾಮದ ಅನಿಲ ಸಮೀಪ ಹೆದ್ದಾರಿಗೆ ಆಗಮಿಸಿದ ಒಂಟಿ ಕಾಡಾನೆಯು ಕಾರು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಓಡಿಸಿದೆ ಎಂದು ತಿಳಿದು ಬಂದಿದೆ.

ತೋಟಕ್ಕೆ ಬಂದು ವಾಪಸ್ ಹೋಗಲಾಗದೆ ಉಳಿದ ಆನೆಮರಿ

Friday, October 30th, 2020
elephant

ಬೆಳ್ತಂಗಡಿ :  ಕಾಡಾನೆಗಳ ಹಿಂಡೊಂದು ಕಡಿರುದ್ಯಾವರದಲ್ಲಿ ತೋಟಕ್ಕೆ ನುಗ್ಗಿದ್ದು ಅದರಲ್ಲಿದ್ದ ಆನೆಮರಿಯೊಂದು ವಾಪಸ್ ಹೋಗಲಾಗದೆ ತೋಟದಲ್ಲಿ ಉಳಿದ ಘಟನೆ ಗುರುವಾರ ರಾತ್ರಿ  ನಡೆದಿದೆ. ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡ ಎಂಬವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿಯನ್ನು ತಿಂದು ಸಂಪೂರ್ಣ ನಾಶ ಮಾಡಿದೆ. ತೋಟದಿಂದ ಕಾಡಿಗೆ ಹೋಗುವ ಸಮಯದಲ್ಲಿ ಮರಿಯಾನೆಯೊಂದಕ್ಕೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಬಾಕಿಯಾಗಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳಗ್ಗೆ ತೋಟದ ಮಾಲಕರು ಹೋದಾಗ ವಿಷಯ ಗೊತ್ತಾಗಿದ್ದು, ಆನೆ ಮರಿ ತೋಟದಲ್ಲಿ ಇರುವುದನ್ನು ಗಮನಿಸಿದ ಅವರು ಅರಣ್ಯ […]

ಮಾಲ್ದಾರೆ ಹಂಚಿತಿಟ್ಟು ಗ್ರಾಮದಲ್ಲಿ ಕಾಡಾನೆ ದಾಳಿಗೆ ಬೆಳೆಗಾರ ಬಲಿ

Monday, February 10th, 2020
kaadane

ಮಡಿಕೇರಿ : ಕಾಡಾನೆ ದಾಳಿಯಿಂದ ಬೆಳೆಗಾರರೊಬ್ಬರು ದಾರುಣವಾಗಿ ಮೃತ ಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪ ಹಂಚಿತಿಟ್ಟು ಗ್ರಾಮದಲ್ಲಿ ನಡೆದಿದೆ. ಅವರೆಗುಂದ ಗ್ರಾಮದ ನಿವಾಸಿ ಪೆಮ್ಮಯ್ಯ(68) ಎಂಬುವವರೇ ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿಯಾಗಿದ್ದಾರೆ. ಮಾಲ್ದಾರೆ ಹಂಚಿತಿಟ್ಟು ಮಾರ್ಗದ ರಸ್ತೆ ಬದಿಯಲ್ಲಿ ಮೃತದೇಹ ಕಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಕಾಡಾನೆ ದಾಳಿ ಮಾಡಿರುವುದು ಖಾತ್ರಿಯಾಯಿತು. ಎದೆ, ತಲೆ ಹಾಗೂ ಕಾಲಿನ ಭಾಗಕ್ಕೆ […]

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಒತ್ತಾಯ : ಬಾಣಾವರದಲ್ಲಿ ಪ್ರತಿಭಟನೆ

Wednesday, December 18th, 2019
somavarapete

ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಬಾಣಾವರ ವ್ಯಾಪ್ತಿಯ ಸಿದ್ದಲಿಂಗಪುರ, ಸಂಗಯ್ಯನಪುರ, ಬಸರಿಗುಪ್ಪೆ, ಅಳಿಲುಗುಪ್ಪೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಡಿವಾಣ ಹಾಕುವಂತೆ ಆಗ್ರಹಿಸಿ ಸಾರ್ವಜನಿಕರು ಬಾಣಾವರ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು. 12 ಕಾಡಾನೆಗಳ ಹಿಂಡು ಈ ಭಾಗದಲ್ಲಿ ಬೀಡುಬಿಟ್ಟಿದ್ದು, ಜನವಸತಿ ಪ್ರದೇಶದಲ್ಲಿಯೇ ಸಂಚರಿಸುತ್ತಿವೆ. ಗ್ರಾಮಸ್ಥರ ಕೃಷಿ ಫಸಲು ನಷ್ಟಗೊಳಿಸುತ್ತಿವೆ. ಕಳೆದ ವಾರ ಅರಣ್ಯ ರಕ್ಷಕನ ಮೇಲೆಯೇ ಧಾಳಿ ನಡೆಸಿದೆ. ಇದರೊಂದಿಗೆ ರಸ್ತೆ, ಹೊಲಗಳಿಗೆ ತೆರಳುವ ಕೃಷಿಕರ ಮೇಲೂ ಧಾಳಿ ನಡೆಸುತ್ತಿವೆ. ಆನೆಗಳನ್ನು ಕಾಡಿಗಟ್ಟುವಂತೆ ಹಲವಷ್ಟು ಬಾರಿ ಮನವಿ […]

ಅಮ್ಮತ್ತಿಯಲ್ಲಿ ಕಾಡಾನೆ ದಾಳಿ : ಬೆಳೆಗಾರ ಗಂಭೀರ

Tuesday, December 17th, 2019
kaadane

ಮಡಿಕೇರಿ : ಕೊಡಗಿನಲ್ಲಿ ವನ್ಯಜೀವಿಗಳ ಹಾವಳಿ ಮುಂದುವರೆದಿದ್ದು, ಅಮ್ಮತ್ತಿಯಲ್ಲಿ ಕಾಡಾನೆ ದಾಳಿಗೆ ಬೆಳೆಗಾರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಬೆಳೆಗಾರ ಮಾಚಿಮಂಡ ಶಮ್ಮು ಎಂಬುವವರ ಮೇಲೆ ಕಾಡಾನೆ ದಿಡೀರ್ ದಾಳಿ ಮಾಡಿದೆ. ಕಾಲು ಮುರಿತಕ್ಕೊಳಗಾಗಿರುವ ಶಮ್ಮು ಅವರನ್ನು ಆರ್‌ಎಚ್‌ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.    

ಚಾಮರಾಜನಗರದಲ್ಲಿ ಸೆರೆಯಾದ ಪುಂಡಾನೆಯನ್ನು ತಮಿಳುನಾಡಿಗೆ ಬಿಟ್ಟ ಅಧಿಕಾರಿಗಳು

Thursday, October 24th, 2019
Pundane

ಚಾಮರಾಜನಗರ : ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು  ಬನ್ನಿತಾಳಪುರ ಸಮೀಪ  ಕಳೆದ ಮೂರು ದಿನಗಳಿಂದ ರೈತರಲ್ಲಿ ಆತಂಕ ಹುಟ್ಟಿಸಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಮಿಳುನಾಡಿನಲ್ಲಿ ಈ ಆನೆ 8  ಜನರನ್ನು  ಕೊಂದಿತ್ತು.  ಇಬ್ಬರು ರೈತರಿಗೆ ಗಾಯ ಮಾಡಿತ್ತು,  3 ಹಸುಗಳನ್ನು ತುಳಿದು ಸಾಯಿಸಿ ತ್ತು . ತಮಿಳುನಾಡಿನ ಮಧುಮಲೈ ಅರಣ್ಯದಿಂದ ಬಂದಿದ್ದ ಆನೆ ಬನ್ನಿತಾಳಪುರ ದಲ್ಲಿ ರೈತರ ಹೊಲದಲ್ಲಿ ರಂಪಾಟ ನಡೆಸಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರವಳಿಕೆ ನೀಡಿ ಆನೆ ನೆ ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ.  ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ, […]

ಕಾಫಿ ತೋಟಕ್ಕೆ ಅಳವಡಿಸಿದ ಸೋಲಾರ್ ಬೇಲಿಗೆ ಸಿಲುಕಿ ಕಾಡಾನೆ ಸಾವು..!

Thursday, July 12th, 2018
elephant

ಮಡಿಕೇರಿ: ಕಾಫಿ ತೋಟಕ್ಕೆ ಅಳವಡಿಸಿದ ಸೋಲಾರ್ ಬೇಲಿಗೆ ಸಿಲುಕಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆ ಸಮೀಪದ ಕಾಡ್ನೂರು ಗ್ರಾಮದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದ ಜನರು ಕಾಡಾನೆಗಳ ದಾಳಿಯಿಂದ ಬೇಸತ್ತಿದ್ದರು. ಇದರಿಂದ ಮುಕ್ತಿ ಹೊಂದಲೂ ಗ್ರಾಮದ ಜನರು ತಮ್ಮ ಮನೆ ಮತ್ತು ತೋಟದ ಸುತ್ತಮುತ್ತ ಸೋಲಾರ್ ಬೇಲಿ ಅಳವಡಿಸಿ ಬೆಳೆ ರಕ್ಷಣೆ ಮಾಡುತ್ತಿದ್ದರು. ಆದರೆ ಕಳೆದ ರಾತ್ರಿ ಆನೆಯೊಂದು ಆಹಾರ ಅರಸಿ ಬಂದಿತ್ತು. ಅಂದಾಜು 30 ವರ್ಷ ವಯಸ್ಸಿನ ಹೆಣ್ಣಾನೆಯ ಸೊಂಡಿಲು […]

ಮತ್ತೆ ತೀವ್ರಗೊಂಡ ಕಾಡಾನೆ ಹಾವಳಿ-ಜೀವನ ಪರ್ಯಂತರದ ಕೃಷಿ ಕಣ್ಣೆದುರೇ ವ್ಯರ್ಥ

Sunday, May 8th, 2016
waild Elephant

ಮುಳ್ಳೇರಿಯಾ: ಕೃಷಿಯನ್ನು ತಪಸ್ಸಿನಂತೆ ಸ್ವೀಕರಿಸಿ ಜೀವನ ಪರ್ಯಂತರದ ಸಾಧನೆ,ಸಾಮರ್ಥ್ಯವನ್ನು ಧಾರೆಯೆರೆದು ಪೋಶಿಸಿ ಬೆಳೆಸಿದ ಬೆಳೆ ನಿಮಿಷಗಳಲ್ಲಿ ನಾಶವಾಗುವುದನ್ನು ಯಾವ ಕೃಷಿಕನೂ ಸಹಿಸಲಾರ. ಆದರೆ ಇಂತಹ ನೋವುಗಳನ್ನು ಕಳೆದ ಹಲವು ವರ್ಷಗಳಿಂದ ಅನುಭವಿಸುತ್ತಿರುವ ನೂರಾರು ಕೃಷಿ ಕುಟುಂಬ ಸಮಸ್ಯೆಗಳನ್ನು ಅನುಭವಿಸುತ್ತಾ ಕಣ್ಣೀರಿಡುತ್ತಿರುವುದು ಮುಂದುವರಿದಿದೆ. ಮುಳ್ಳೇರಿಯಾ ಸಮೀಪದ ಕೊಟ್ಟಂಗುಳಿಯ ಇ.ರಾಘವನ್ ನಾಯರ್ ರವರ ತೋಟಕ್ಕೆ ಭಾನುವಾರ ಮುಂಜಾನೆ ನುಗ್ಗಿದ ಕಾಡಾನೆಗಳ ಹಿಂಡು ಭೀಕರ ಧಾಳಿ ನಡೆಸಿ ಲಕ್ಷಾಂತರ ರೂ.ಗಳ ಕೃಷಿ ನಾಶಗೈದಿದೆ. 2 ಮರಿ ಆನೆಗಳ ಜೊತೆಗೆ 6 ದೊಡ್ಡ […]

‘ದಬಕ್ ದಬಾ ಐಸಾ’ ತುಳು ಚಿತ್ರಕ್ಕೆ ಮುಹೂರ್ತ

Wednesday, September 16th, 2015
dabak daba isa

ಮಂಗಳೂರು: ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸಿ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ದಬಕ್ ದಬಾ ಐಸಾ’ ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಬಿಜೈ ಬಟ್ಟಗುಡ್ಡದಲ್ಲಿರುವ ಜಯಕಿರಣ ಕಚೇರಿಯಲ್ಲಿ ಸೋಮವಾರ ಜರಗಿತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭಾರಂಭಗೈದರು. ತುಳುವಿನಲ್ಲೀಗ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿದೆ. ಚಿತ್ರ ನಿರ್ಮಿಸುವವರು ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡಿದರೆ ಮಾತ್ರ ಪ್ರೇಕ್ಷಕರು ಸ್ವೀಕರಿಸುತ್ತಾರೆ. ಹೀಗಾಗಿ […]