ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಪಲ್ಟಿ ಹೊಡೆದ ಹೊಸ ಕಾರು, ಸವಾರ ಗಂಭೀರ ಗಾಯ

Thursday, May 27th, 2021
Pumpwell-Accident

ಮಂಗಳೂರು : ಇನ್ನೂ ನೋಂದಣಿ ಗೊಳ್ಳದ ಹೊಸ ಕಾರೊಂದು  ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ರಸ್ತೆಯಲ್ಲಿ ಪಲ್ಟಿ ಹೊಡೆದ ಘಟನೆ ನಗರದ ಪಂಪ್ ವೆಲ್ ನಲ್ಲಿರುವ ಫ್ಲೈಓವರ್ ನಲ್ಲಿ ಗುರುವಾರ  ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಗೋರಿಗುಡ್ಡ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ವೇಳೆ ಕಾರು ಹಿಂದುಗಡೆಯಿಂದ ಬಂದು ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಇದರಿಂದ […]

ಕುಳಾಯಿ ಕಾರು ಅಪಘಾತ ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ

Thursday, February 4th, 2021
Car Accident Kulai

ಮಂಗಳೂರು : ಕುಳಾಯಿ ಸಮೀಪ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಬುಧವಾರ ರಾತ್ರಿ  ನಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತ ಮಹಿಳೆಯನ್ನು ಬೋಂದೆಲ್‌ ನಿವಾಸಿ ಸುಹಾನಾ (26) ಎಂದು ಗುರುತಿಸಲಾಗಿದೆ‌. ಕಾರಿನಲ್ಲಿ‌ ಸುಹಾನಾರ ಸಹೋದರಿ ಫಾತಿಮಾ ಶೌರೀನ್, ಸಹೋದರರಾದ ರಾಹಿಲ್ ಶಮೀಮ್ ಮತ್ತು ರಾಝಿಕ್ ಶಹಾನ್ ಗಂಭೀರ ಗಾಯಗಳಾಗಿವೆ, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸಿದ್ಧತೆಯಲ್ಲಿತ್ತು,  ಕಾರು […]

ಕಾರು ಅಪಘಾತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ 5 ಮಂದಿಗೆ ಗಾಯ

Tuesday, September 27th, 2016
car-

ಕಾಸರಗೋಡು: ಕಾರು ನಿಯಂತ್ರಣ ತಪ್ಪಿ ಮಗುಚಿ ಸಂಭವಿಸಿದ ಅಪಘಾತದಲ್ಲಿ ಬಿಜೆಪಿ ನೇತಾರರು ಗಾಯಗೊಂಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ಉದುಮ ಮಂಡಲ ಕಾರ್ಯದರ್ಶಿ ದಿಲೀಪ್ ಕುಮಾರ್, ಕಾಸರಗೋಡು ಮಂಡಲ ಅಧಕ್ಷ ಸುಧಾಮ ಗೋಸಾಡ, ಅಡೂರಿನ ಪ್ರದೀಪ್, ಚಾಲಕ ಕುಂಬಳೆಯ ಗುರುಪ್ರಸಾದ್ ಎಂಬವರು ಗಾಯಗೊಂಡಿದ್ದಾರೆ. ಇವರನ್ನು ವಿದ್ಯಾನಗರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೋಮವಾರ ಮುಂಜಾನೆ 4 ಗಂಟೆ ವೇಳೆ ಪಳ್ಳಿಕೆರೆ ಚೇಟುಕುಂಡ್ ಎಂಬಲ್ಲಿ ಅಪಘಾತ ಸಂಭವಿಸಿದೆ. ಕಲ್ಲಿಕೋಟೆಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪರಿಷತ್ ಸಮಾವೇಶದಲ್ಲಿ ಭಾಗವಹಿಸಿ ಶ್ರೀಕಾಂತ್ ಹಾಗೂ ಮತ್ತಿತರರು […]

ಪದವಿನಂಗಡಿ : ಕಾರು ಅಪಘಾತ ಅಪಾಯದಿಂದ ಪಾರಾದ ತುಳು ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌

Tuesday, March 19th, 2013
Umesh Kotian injured in car mishap

ಮಂಗಳೂರು : ಸೋಮವಾರ ಮಧ್ಯಾಹ್ನ ಪದವಿನಂಗಡಿ ಬಳಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌  ರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ನಡೆದಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಏರ್ ಕಾರ್ಗೋ ಸೇವೆಯ ಉದ್ಘಾಟನ ಸಮಾರಂಭಕ್ಕೆಅಕಾಡಮಿಯ ಕಾರಿನಲ್ಲಿ  ತೆರಳುತ್ತಿದ್ದ ವೇಳೆ ಪದವಿನಂಗಡಿಯಲ್ಲಿ ನಿಯಂತ್ರಣ ತಪ್ಪಿ ಕಾರು ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದಿದ ಪರಿಣಾಮ ಕಾರು  ಡಿವೈಡರ್‌ನ ಮೇಲೇರಿ, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು , ಕೋಟ್ಯಾನ್‌ ರು  ಸಣ್ಣಪುಟ್ಟ ಗಾಯಗಳೊಂದಿಗೆ […]

ಕಾರು ಅಪಘಾತ ಯೋಗೀಶ್‌ ಭಟ್‌ ಪಾರು, ಪತ್ನಿಗೆ ತೀವ್ರ ಗಾಯ

Monday, December 19th, 2011
yogish bhat accident

ಮಂಗಳೂರು: ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌ ಮತ್ತು ಅವರ ಕುಟುಂಬದ ಸದಸ್ಯರು ಭಾನುವಾರ ಬೆಳಗ್ಗಿನ ಜಾವ ಮಂಗಳೂರಿನಿಂದ ಮೈಸೂರಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾಗ ಅವರ ಸರಕಾರಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಸುಳ್ಯ ತಾಲೂಕಿನ ಪೆರಾಜೆಯಲ್ಲಿ ಅಪಘಾತಕ್ಕೀಡಾಯಿತು. ಘಟನೆಯಲ್ಲಿ ಯೋಗೀಶ್‌ ಭಟ್‌ ಅವರು ಅಪಾಯದಿಂದ ಪಾರಾಗಿದ್ದಾರೆ. ಪತ್ನಿ ವಿಜಯ ಭಟ್‌ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಯೋಗೀಶ್‌ ಭಟ್‌ , ಪತ್ನಿ ವಿಜಯ […]