ಮನೆಯಿಂದ ಹೋದ ಯುವತಿ ವಾಪಾಸು ಬಾರದೇ ನಾಪತ್ತೆ

Wednesday, February 28th, 2024
ಮನೆಯಿಂದ ಹೋದ ಯುವತಿ ವಾಪಾಸು ಬಾರದೇ ನಾಪತ್ತೆ

ಕಾರ್ಕಳ : ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಅಸಲ್ ಜಡ್ಡು ನಿವಾಸಿ ಪ್ರಮೀಳಾ (24) ಎಂಬ ಯುವತಿಯು ಫೆಬ್ರವರಿ 24 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು, ಇಂಗ್ಲೀಷ್ ಹಾಗೂ ಕುಡುಬಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಅಜೆಕಾರು ಪೊಲೀಸ್ ಠಾಣೆ ದೂ.ಸಂಖ್ಯೆ: 08253-271100, ಪೊಲೀಸ್ ಉಪನಿರೀಕ್ಷಕರು ಮೊ.ನಂ: 9480805470, ಸಂಪರ್ಕಿಸಬಹುದಾಗಿದೆ ಎಂದು ಅಜೆಕಾರು […]

ಕೊಲೆ ಮಾಡಿ, ದೇಹವನ್ನು ಇಂಗುಗುಂಡಿಯಲ್ಲಿ ಮುಚ್ಚಿಟ್ಟಿದ್ದ ಆರೋಪಿಗಳಿಗೆ ಜಾಮೀನು

Saturday, July 20th, 2013
Karkala Murder

ಮಂಗಳೂರು : ಕಾರ್ಕಳ ತಾಲೂಕು ರೆಂಜಾಳ ಗ್ರಾಮದಲ್ಲಿ ಜೂ.3ರಂದು ಕೊಲೆಯಾದ ಪೂರ್ಣಿಮಾ ಶೆಟ್ಟಿ ಪ್ರಕರಣದ ಆರೋಪಿಗಳಾದ ಅಮರೀಶ್, ಸುಧಾಕರ್ ಶೆಟ್ಟಿ, ಗುರುಪ್ರಸಾದ್, ಭಾಸ್ಕರ್ ಪೂಜಾರಿ ಹಾಗೂ ಪ್ರವೀಣ್ ತೌರು ಇವರಿಗೆ ಮೂಡುಬಿದರೆ ನ್ಯಾಯಾಲಯ ಜಾಮೀನು ನೀಡಿದೆ. ತನ್ನ ಸ್ನೇಹಿತರ ಸಹಕಾರದೊಂದಿಗೆ ಪ್ರಭಾಕರ್ ಶೆಟ್ಟಿ ಪೂರ್ಣಿಮಾಳನ್ನು ಕೊಲೆ ಮಾಡಿ, ದೇಹವನ್ನು ಬಟ್ಟೆಯಲ್ಲಿ ಸುತ್ತಿ ಮಾಸ್ತಿಕಟ್ಟೆಯ ಇಂಗುಗುಂಡಿಯಲ್ಲಿ ಹೂತು ಹಾಕಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.