ಕೇರಳ ರಾಜ್ಯದಲ್ಲಿ ಜೂ.12 ಮತ್ತು 13ರಂದು ಸಂಪೂರ್ಣ ಲಾಕ್ ಡೌನ್

Friday, June 11th, 2021
Kerala Lockdown

ಕಾಸರಗೋಡು : ಕೇರಳ ಸರಕಾರ, ರಾಜ್ಯದಲ್ಲಿ ಜೂ.16ರ ವರೆಗೆ ಲಾಕೌ ಡೌನ್ ವಿಸ್ತರಿಸಿದೆ. ಈ ನಡುವೆ ಜೂ.12 ಮತ್ತು 13ರಂದು ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುವಾಗ ಹೋಟೆಲ್ ಗಳಲ್ಲಿ ಪಾರ್ಸೆಲ್ ಆಗಿ ತಿಂಡಿತಿನಿಸುಗಳನ್ನು ಮಾರಾಟ ಮಾಡುಲು ಅವಕಾಶವಿಲ್ಲ . ಆದರೆ ಹೋಂ ಡೆಲಿವರಿಗೆ ಅವಕಾಶವಿರಲಿದೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ  ಅನುಮತಿ ಇದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.  

ಬಡವರು, ಕಾರ್ಮಿಕರಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

Thursday, May 27th, 2021
street-vendors

ಬೆಂಗಳೂರು : ಬೀದಿ ಬದಿ ವ್ಯಾಪಾರಿಗಳಿಗೆ, ಮೆಟ್ರೋ ನಿರ್ಮಾಣ ಕಾರ್ಮಿಕರಿಗೆ ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ನಗರದ ವಿವಿಧ ಭಾಗಗಳಲ್ಲಿ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,”ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚಿನ ಜನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೋಂಕಿನ ವಿರುದ್ಧದ ಹೋರಾಟವನ್ನ ಮತ್ತಷ್ಟು ಪರಿಣಾಮಕಾರಿಯಾಗಿಸಲು ಲಸಿಕೆ ನೀಡುವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಮುಂಚೂಣಿಯ ಕಾರ್ಯಕರ್ತರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದೆ. […]

ಕಾರ್ಮಿಕನನ್ನು ಕೊಲೆಗೈದ ಪ್ರಕರಣ, ಓರ್ವನ ಬಂಧನ

Monday, April 19th, 2021
BagalKot Umesh

ಕಾಸರಗೋಡು : ಕರ್ನಾಟಕ ಮೂಲದ ಕಾರ್ಮಿಕನೋರ್ವನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆ ನಿವಾಸಿಯೋರ್ವನನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಾಗಲಕೋಟೆಯ ಉಮೇಶ್ ಗೌಡ (37) ಎಂದು ಗುರುತಿಸಲಾಗಿದೆ. ಕೊಲೆಗೀಡಾದ ವ್ಯಕ್ತಿಯ  ಹೆಸರು ಮತ್ತು ವಿಳಾಸ ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೃತ ವ್ಯಕ್ತಿ ಕೋಟಿಕುಳಂ ಪರಿಸರದಲ್ಲಿ ದುಡಿದು ರೈಲ್ವೆ ಪ್ಲಾಟ್ ಫಾರ್ಮ್ ಅಥವಾ ಬಸ್ಸು ನಿಲ್ದಾಣಗಳಲ್ಲಿ ರಾತ್ರಿ ಕಾಲ ಕಳೆಯುತ್ತಿದ್ದರು. ಎಪ್ರಿಲ್ 14 ರಂದು ಉಮೇಶ್ ಗೌಡ […]

ಕೂಳೂರು ಚರ್ಚ್‌ನ ತಡೆಗೋಡೆ ಕುಸಿದು ಕಾರ್ಮಿಕ ಮೃತ್ಯು, ಇಬ್ಬರಿಗೆ ಗಾಯ

Saturday, September 19th, 2020
kulooru Compound

ಮಂಗಳೂರು : ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿವರುವ ಮಳೆಯ ನಡುವೆ ಮುಂಜಾಗ್ರತೆಯಿಲ್ಲದೆ ಕೆಲಸ ಕೈ ಗೊಂಡ ಪರಿಣಾಮ ಕೂಳೂರಿನ ಸೈಂಟ್ ಆ್ಯಂಟನಿ ಚರ್ಚ್‌ನ ತಡೆಗೋಡೆ ಕುಸಿದು ಕಾರ್ಮಿಕನೋರ್ವ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಶನಿವಾರ  ಬೆಳಗ್ಗೆ ನಡೆದಿದೆ. ಮೃತರನ್ನು ನೀರುಮಾರ್ಗ ನಿವಾಸಿ ಉಮೇಶ್(37) ಎಂದು ಗುರುತಿಸಲಾಗಿದೆ. ತಡೆಗೋಡೆ ಕುಸಿದ ಸ್ಥಳದಲ್ಲೇ ಉಮೇಶ ಕೆಲಸ ಮಾಡುತ್ತಿದ್ದರೆನ್ನ ಲಾಗಿದೆ. ಉಳಿದ ಇಬ್ಬರು ಕಾರ್ಮಿಕರಾದ ಬಸವರಾಜ್ ಹಾಗೂ ನಾರಾಯಣ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮಣ್ಣಿನಡಿಗೆ ಸಿಲುಕಿದ್ದ ಉಮೇಶ್ […]

ಕಾರ್ಮಿಕರು ತೋಡಿದ ಗುಂಡಿಗೆ ಬಿದ್ದ ಕರುವನ್ನು ರಕ್ಷಿಸಿದ ಸ್ಥಳೀಯ ಯುವಕರು

Thursday, July 16th, 2020
nikhil-poojary

ಮಂಗಳೂರು : ತಣ್ಣೀರುಬಾವಿ ಬೀಚ್ ಗೆ ಹೋಗುವ ರಸ್ತೆ ಬದಿಯಲ್ಲಿ ಗುತ್ತಿಗೆ ಕಾರ್ಮಿಕರು ತೋಡಿದ ಗುಂಡಿಗೆ ಕರುವೊಂದು ಬಿದ್ದ ಕರು ವೊಂದನ್ನು ಸ್ಥಳೀಯ ಯುವಕರ  ಗುಂಪೊಂದು ರಕ್ಷಿಸಿದೆ. ಅದೇ ರಸ್ತೆಯಲ್ಲಿ ಪ್ರಯಾಣಿಸುತಿದ್ದ ನಿಖಿಲ್ ಪೂಜಾರಿ ನೀರು ತುಂಬಿದ ಹೊಂಡಕ್ಕೆ ಇಳಿದು ಒದ್ದಾಡುತ್ತಿದ್ದ ಕರುವನ್ನು ಮೇಲೆಕೆತ್ತಿ ರಕ್ಷಣೆ ಮಾಡಿದ್ದಾರೆ. ಪ್ರಾಣಪಾಯದಲ್ಲಿದ್ದ ಕರುವನ್ನು ರಕ್ಷಿಸಿ, ಜೀವ ಉಳಿಸಿದ್ದಾರೆ. ನಿಖಿಲ್ ಪೂಜಾರಿಗೆ ಸ್ಥಳೀಯ ಯುವಕರು, ಅಗ್ನಿಶಾಮಕ ದಳದವರು ಸಹಕರಿಸಿದ್ದಾರೆ. ನೀರು ತುಂಬಿದ ಗುಂಡಿಯಲ್ಲಿ ಮುಳುಗಿದ್ದ ಕರುವಿಗೆ ಮರು ಜೀವಕೊಟ್ಟ ನಿಖಿಲ್ ಪೂಜಾರಿ ಹಾಗು ಸಹಕರಿಸಿದ ಸ್ಥಳೀಯ […]

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ

Friday, July 3rd, 2020
Bihari

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಶೌಚಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ 25 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮದ್ಯಾಹ್ನದ ವೇಳೆಗೆ ಕೆಲಸಕ್ಕೆ ಆಗಮಿಸಿದ್ದ ಈ ಯುವಕ ಶೌಚಾಲಯದ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಊರಿಗೆ ಮರಳಲು ಉತ್ತರ ಕರ್ನಾಟಕದ ಕಾರ್ಮಿಕರಿಗೆ ನೇರವಾದ ನಟ ಸೋನುಸೂದ್

Tuesday, May 12th, 2020
Sonu-Sood

ಬೆಂಗಳೂರು  : ಉತ್ತರ ಕರ್ನಾಟಕದಿಂದ ಮುಂಬೈಗೆ ಕೆಲಸ ಹರಸಿಕೊಂಡು ಹೋಗಿ  ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ ಸಿಕ್ಕಿ ಖಾಕಿ ಕೊಂಡ ಸುಮಾರು ಐನೂರ ರಷ್ಟು ಕಾರ್ಮಿಕರಿಗೆ  ಬಾಲಿವುಡ್ ನಟ ಸೋನುಸೂದ್ ಊರಿಗೆ ಮರಳಲು ನೆರವಾಗಿದ್ದಾರೆ.   ಮಹಾರಾಷ್ಟ್ರದ ಥಾಣೆಯಲ್ಲಿ ಸಿಲುಕಿದ್ದ ಕರ್ನಾಟಕದ ಕಲಬುರಗಿಯ ವಲಸೆ ಕಾರ್ಮಿಕರನ್ನು ಸೋನು ಸೂದ್‌ ಸುರಕ್ಷಿತವಾಗಿ ವಾಪಸ್‌ ಕಳಿಸಿಕೊಟ್ಟಿದ್ದಾರೆ. ಕಾರ್ಮಿಕರ ಪ್ರಯಾಣಕ್ಕೆಂದೇ 10 ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದರು ಅವರು. ಅಲ್ಲದೆ, ದಾರಿ ಮಧ್ಯೆ ಕಾರ್ಮಿಕರಿಗೆ ಹಸಿವು ನೀಗಿಸಲು ಫುಟ್‌ಕಿಟ್‌ಗಳನ್ನೂ ಅವರು ನೀಡಿದ್ದರು. ಈ ಸಂಬಂಧ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳಿಂದ […]

ಮಂಗಳೂರು : ತಪಾಸಣೆ ನಡೆಸಿ 243 ಕಾರ್ಮಿಕರನ್ನು ಹೊರ ಜಿಲ್ಲೆಗಳಿಗೆ ರವಾನೆ

Friday, May 1st, 2020
Labourers

ಮಂಗಳೂರು  :  ಗುರುಪುರ ಹಾಗೂ ಸುರತ್ಕಲ್‌ ಹೋಬಳಿಯ ಗ್ರಾಮಾಂತರ ಪ್ರದೇಶದಲ್ಲಿದ್ದ ಹೊರ ಜಿಲ್ಲೆಯ ಕಾರ್ಮಿಕರನ್ನು ಅವರ ಊರುಗಳಿಗೆ ಒಟ್ಟು 35 ಬಸ್ಸುಗಳಲ್ಲಿ ಗುರುಪುರ ಕೈಕಂಬ ಹಾಗೂ ಬಜಪೆ ಯಿಂದ ಬುಧವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ರಾತ್ರಿ ವೇಳೆಯಲ್ಲಿ ಕೊಂಡೊಯ್ಯಲಾಯಿತು. ಬಜಪೆಯಲ್ಲಿ ಸುರತ್ಕಲ್‌ ಹೋಬಳಿಯ 11 ಬಸ್ಸುಗಳಲ್ಲಿ 243 ಕಾರ್ಮಿಕರು, ಗುರುಪುರ ಹೋಬಳಿಯಿಂದ 24 ಬಸ್ಸುಗಳಲ್ಲಿ 506 ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕೊಂಡೊಯ್ಯಲಾಯಿತು. ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಅವರಿಗೆ ಮಾಸ್ಕ್ ನೀಡಿ, ಬಸ್‌ಗಳಲ್ಲಿ ಕೂಡ […]

ಮರ ಬಿದ್ದು ಕಾರ್ಮಿಕ ದುರ್ಮರಣ

Tuesday, February 25th, 2020
umesh

ಮಡಿಕೇರಿ : ಮರ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಈರಳೆವಳವಾಡಿ ಗ್ರಾಮದ ಅಭ್ಯಾಲ ತೋಟದಲ್ಲಿ ನಡೆದಿದೆ. ನಾಕೂರು ಗ್ರಾಮದ ಉಮೇಶ್ ಎಂಬುವವರು ಇಂದು ಬೆಳಗ್ಗೆ ಸಹ ಕಾರ್ಮಿಕರೊಂದಿಗೆ ಮರವೊಂದನ್ನು ಕಡಿಯುವ ಕೆಲಸದಲ್ಲಿ ತೊಡಗಿದ್ದರು. ಮರಕ್ಕೆ ಕಟ್ಟಲಾಗಿದ್ದ ಹಗ್ಗವನ್ನು ಹಿಡಿದು ಎಳೆಯುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾರೆ. ದುರಾದೃಷ್ಟವಶಾತ್ ಅವರ ಮೇಲೆಯೇ ಮರ ಬಿದ್ದು, ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು.    

ಕಾರ್ಮಿಕ ಸಾವು : ಸಂಬಂಧಿಕರ ಬಗ್ಗೆ ಮಾಹಿತಿ ಒದಗಿಸಲು ಮನವಿ

Thursday, December 5th, 2019
prabhu

ಮಡಿಕೇರಿ :  ಬಿರುನಾಣಿ ಗ್ರಾಮದ ಅಣ್ಣಳಮಾಡ ಮುತ್ತಪ್ಪ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕ ಪ್ರಭು (45) ಎಂಬುವವರು ಮೃತಪಟ್ಟಿದ್ದು, ಮೃತರ ಸಂಬಂಧಿಕರು ಯಾರು  ಈ ವರೆಗೆ ಲಭ್ಯವಾಗಿಲ್ಲ. ಶವದ ಕತ್ತಿನ ಭಾಗ ತಲೆಯ ಬಲಭಾಗ, ಬಲಪಕ್ಕೆ ಎಲುಬಿನ ಭಾಗ, ಬಲ ಎದೆಯ ಬಳಿ, ಬಲ ಮೊಣಕಾಲು ಬಿಳಿ ಗಾಯವಾಗಿರುವುದು  ಕಂಡು ಬಂದಿದೆ. ಮೃತರ ವಾರಸುದಾರರಿದ್ದಲ್ಲಿ ಶ್ರೀಮಂಗಲ ಪೊಲೀಸ್ ಠಾಣೆಯ ಆರಕ್ಷಕ ಉಪನೀರಿಕ್ಷಕರನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.