ಉಡುಪಿ : ಕನ್ನಡ ಮಾಧ್ಯಮ ಶಾಲೆ ಉಳಿಸಲು ಕರ್ನಾಟಕ ರಕ್ಷಣಾ ವೇದಿಕೆಯಿಂದ ‘ಕಾಸರಗೋಡು ಚಲೋ’ ಗೆ ಚಾಲನೆ

Thursday, June 8th, 2017
Kasaragod Chalo

ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆಯು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿರುವ ಕೇರಳ ಸರಕಾರದ ಕ್ರಮವನ್ನು ವಿರೋಧಿಸಿ  ಗುರುವಾರ ಹಮ್ಮಿಕೊಳ್ಳಲಾದ ಕಾಸರಗೋಡು ಚಲೋ ಕಾರ್ಯಕ್ರಮಕ್ಕೆ ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಯ ಕ್ಲಾಕ್ ಟವರ್ ಎದುರು ಚಾಲನೆ ನೀಡಿದರು. ಕಾಸರಗೋಡು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಗೊಳಿಸಿರುವುದರಿಂದ ಕನ್ನಡ ಭಾಷೆ ನಶಿಸಿ ಹೋಗುತ್ತದೆ. ಆ ರೀತಿ ಆಗದಂತೆ ರಾಜ್ಯ ನಾಯಕರು ಎಚ್ಚರ ವಹಿಸಬೇಕಾಗಿದೆ. ಗಡಿನಾಡಿನಲ್ಲಿ ಕನ್ನಡಗರಿಗೆ ಆಗುತ್ತಿರುವ […]

ಜೂ.8 ರಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ‘ಕಾಸರಗೋಡು ಚಲೋ’

Monday, June 5th, 2017
kannada

ಮಂಗಳೂರು : ಕಾಸರಗೋಡಿನಲ್ಲಿರುವ ಅಲ್ಪಸಂಖ್ಯಾತ  ಕನ್ನಡಿಗರ ಮೇಲೆ  ಮಲಯಾಳಿ ಭಾಷಿಗರ ದಬ್ಬಾಳಿಕೆಯನ್ನು ಖಂಡಿಸಿ ಜೂ.8 ರಂದು ಉಡುಪಿಯಿಂದ ಕಾಸರಗೋಡಿನವರೆಗೆ `ಕಾಸರಗೋಡು ಚಲೋ’ ಮಾಡಲಾಗುವುದು ಹಾಗೂ ಸಂಜೆಯವರೆಗೆ ಗಡಿ ಬಂದ್‌ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಕಾಸರಗೋಡು ಕರ್ನಾಟಕದ ಭಾಗವಾಗಿದ್ದರೂ, ಸರ್ಕಾರದ ಬೇಜವಾಬ್ದಾರಿಯಿಂದ ಅದು ಕೇರಳ ರಾಜ್ಯಕ್ಕೆ ಸೇರಿಹೋಯಿತು. ಆದರೆ, ಗಡಿನಾಡಿನ ಸ್ವಾಭಿಮಾನಿ ಕನ್ನಡಿಗರ ಹೋರಾಟದ ಫಲವಾಗಿ ಅಲ್ಲಿ ಇಂದಿಗೂ ಕನ್ನಡ ಶಾಲೆಗಳು ಉಳಿದಿವೆ. ಇದೀಗ ಮಲಯಾಳಿ ಭಾಷಿಗರಿಂದ ಕನ್ನಡ […]