Blog Archive

ಸೈನಿಕರ ಸಮವಸ್ತ್ರ ಇತರರು ಧರಿಸಕೂಡದು

Monday, March 7th, 2016
Kasaragod DC

ಕಾಸರಗೋಡು: ಸಾರ್ವಜನಿಕರು ಹಾಗೂ ಸೆಕ್ಯೂರಿಟಿ ನೌಕರರು ಸಹಿತ ಇತರ ಯಾರೇ ಆಗಲಿ ಸೈನಿಕರ ಸಮವಸ್ತ್ರಗಳನ್ನು, ಸೈನಿಕ ಮಾದರಿಯ ಬಟ್ಟೆಬರೆಗಳನ್ನು ಧರಿಸಕೂಡದೆಂದು ಕಾಸರಗೋಡು ನೂತನ ಜಿಲ್ಲಾಧಿಕಾರಿ ಇ.ದೇವದಾಸನ್ ತಿಳಿಸಿದ್ದಾರೆ. ಪಂಜಾಬ್‌ನ ಪಠಾಣ್ ಕೋಟ್ ವಾಯುಸೇನಾ ಕೇಂದ್ರಗಳಿಗೆ ಇತ್ತೀಚೆಗೆ ಭಯೋತ್ಪಾದಕರು ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಈ ಕ್ರಮ ಕೈಗೊಳ್ಳಲಾಗಿದೆ. ಅದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲೂ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಅನಧಿಕೃತವಾಗಿ ಸೈನಿಕರ ಸಮವಸ್ತ್ರ ಧರಿಸುವುದು, ಅಂತಹ ಸಮವಸ್ತ್ರಗಳನ್ನು ಮಾರಾಟ ಮಾಡುವುದು ಮುಂತಾದವುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ […]

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ : ಹಳೆ ಅಡಿಕೆ ಕಿಲೋ. 179 ರೂ.

Saturday, August 27th, 2011
Arecanut Bunch/ಅಡಿಕೆ

ಪುತ್ತೂರು : ಅಡಿಕೆ ಮಾರುಕಟ್ಟೆಗೆ ಸರಿಯಾಗಿ ಪೂರೈಕೆ ಆಗದಿರುವುದರಿಂದ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಇನ್ನಷ್ಟು ಚೇತರಿಕೆ ಉಂಟಾಗಿದೆ. ಶುಕ್ರವಾರ ಹಳೆ ಅಡಿಕೆ ಕೆ.ಜಿ.ಯೊಂದರ 179 ರೂ. ಮತ್ತು ಹೊಸ ಅಡಿಕೆ ಕೆ.ಜಿ.ಯೊಂದರ 168 ರೂ.ಗಳಿಗೆ ವಿಕ್ರಯಗೊಂಡಿದೆ ಎಂದು ಕೃಷಿಕರು ಮಾಹಿತಿ ನೀಡಿದ್ದಾರೆ. ಗಡಿ ಪ್ರದೇಶ ಕಾಸರಗೋಡು ಜಿಲ್ಲೆಯ ಬಾಯಾರು, ಪೆರ್ಲ ಪ್ರದೇಶದಲ್ಲಿ ಅಡಿಕೆ ಧಾರಣೆ ಪುತ್ತೂರಿಗಿಂತ ಕೆ.ಜಿ.ಯೊಂದರ 1 ರೂ. ಹೆಚ್ಚಿತ್ತು. ಎಂಬ ಮಾಹಿತಿಗಳು ಕೂಡಾ ಕೃಷಿಕರಿಂದ ಲಭ್ಯವಾಗಿದ್ದು, ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯ ಪರಿಸ್ಥಿತಿ […]