ಕುಂಟಿಕಾನ ದ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ಕಳ್ಳತನ, ಮೂವರ ಬಂಧನ

Saturday, September 23rd, 2023
ಕುಂಟಿಕಾನ ದ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ಕಳ್ಳತನ, ಮೂವರ ಬಂಧನ

ಮಂಗಳೂರು: ಮಂಗಳೂರಿನ ಕುಂಟಿಕಾನ ಫ್ಲೈಓವರ್ ಬಳಿ ಪಾರ್ಕ್ ಮಾಡಿದ್ದ ಟೆಂಪೋ ಟ್ರಾವೆಲರ್ ವಾಹನವನ್ನು ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಳಗಾವಿಯಲ್ಲಿ ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೊರ ರಾಜ್ಯದ ನಿವಾಸಿಗಳಾದ ಅರೀಫ್ ಉಲ್ಲಾಖಾನ್ ಯಾನೆ ಅರೀಫ್, ಅಮಿತ್ ಬಾಹುಬಲಿ ಪಂಚೋಡಿ ಯಾನೆ ಬೇಬಿ ಮತ್ತು ಸುರೇಂದ್ರ ಕುಮಾರ್ ಬಂಧಿತ ಆರೋಪಿಗಳು. ಟೆಂಪೋ ಟ್ರಾವೆಲರ್ ಸೆ. 14 ರಂದು ರಾತ್ರಿ ಕಳವಾಗಿದ್ದು ಸುಮಾರಾಕ್ 15 ಲಕ್ಷ ರೂ. ಮೌಲ್ಯದ್ದಾಗಿತ್ತು ಈ ಬಗ್ಗೆ ಉರ್ವ ಠಾಣೆಯಲ್ಲಿ […]

ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿದ್ದ ಯುವತಿ ನೋಡಲು ಜಮಾಯಿದ ಜನ

Friday, October 1st, 2021
another Faith

ಸುಳ್ಯ : ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಯುವತಿ ಇದ್ದಾಳೆ ಎಂದು ಯುವಕನ ಮನೆ ಮುಂದೆ ಸಾರ್ವಜನಿಕರು ಜಮಾಯಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನ ಎಂಬಲ್ಲಿ ಸೆ.29 ರ ಗುರುವಾರ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟ ಹಿನ್ನಲೆಯಲ್ಲಿ ಬಳಿಕ ಪೊಲೀಸರು ಸಾರ್ವಜನಿಕರ ಗುಂಪನ್ನು ಚದುರಿಸಿದರು. ಬಳಿಕ ಪೊಲೀಸರು ಮನೆಯೊಳಗೆ ಹುಡುಕಾಡಿದಾಗ ಯುವತಿ ಇರಲಿಲ್ಲ. ಯುವತಿಯನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಯುವಕ ಸಿದ್ದೀಕ್ ನನ್ನು ವಶಕ್ಕೆ ಪಡೆದಿದ್ದಾರೆ. ಯುವಕ ದೇಲಂಪಾಡಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಯುವತಿಯ ಪರಿಚಯವಾಗಿ ಅವಳನ್ನು ಮನೆಯಲ್ಲಿ […]

ನಗರದ ಕುಂಟಿಕಾನ ಬಳಿ ರಸ್ತೆ ಅಪಘಾತ ಬೈಕ್‌ ಸವಾರನ ಸಾವು

Monday, January 7th, 2013
Jeep bike accident

ಮಂಗಳೂರು : ಕುಂಟಿಕಾನ ಎ.ಜೆ. ಆಸ್ಪತ್ರೆ ಬಳಿ ರವಿವಾರ ಜೀಪೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಾಯ ಗೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಕೋಡಿಕಲ್ ಕಲ್ಪಣೆ ನಿವಾಸಿ ನಾರಾಯಣ ಎಂಬವರ ಪುತ್ರ ಕರುಣಾಕರ್ ಎಂಬುವವರಾಗಿದ್ದಾರೆ. ನಿನ್ನೆ ಸಂಜೆ ಕದ್ರಿಯಿಂದ ಕೋಡಿಕಲ್‌ನತ್ತ ಪಲ್ಸರ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಮಹೇಂದ್ರ ಜೀಪೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ವಿರುದ್ಧ ದಿಕ್ಕಿಗೆ ತಿರುಗಿ ಡಿವೈಡರ್‌ಗೆ ಡಿಕ್ಕಿ […]