ಕರಾವಳಿ ಜಿಲ್ಲೆಯ ವಿವಿದೆಡೆಯಲ್ಲಿ ನಾಗರ ಪಂಚಮಿ ಹಬ್ಬ

Monday, August 8th, 2016
Kudupu temple

ಮಂಗಳೂರು: ತುಳುವರ ಆಟಿ ಅಮಾವಾಸ್ಯೆ ಕಳೆದು ಬರುವುದೇ ನಾಗರ ಪಂಚಮಿ ಹಬ್ಬ. ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ಬರುವ ಈ ಹಬ್ಬ, ಕೆಲವೊಮ್ಮೆ ಸೋನೆ ತಿಂಗಳಿನಲ್ಲಿ ಬರುವುದೂ ಇದೆ. ಅದೆನೇ ಆದರೂ ಆ ಬಳಿಕ ಬರುವ ಹಬ್ಬಗಳು ಸಾಲು ಸಾಲಾಗಿ ನಾಡಿಗೆ ಸಂಭ್ರಮ ತರಲಿವೆ. ಕರಾವಳಿ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶಿಷ್ಟವಾದ ಸ್ಥಾನವಿದೆ. ನಾಗ ಪಂಚಮಿ ನಾಗಾರಾಧನೆಗೆ ಸಂಬಂಧಿಸಿದ ವಿಶಿಷ್ಟ ದಿನದಂದು ತುಳು ನಾಡಿನ ಉದ್ದಗಲಕ್ಕೂ ಎಲ್ಲಾ ಜಾತಿ-ಜನಾಂಗದವರೂ ನಾಗನಿಗೆ ಹಾಲೆರೆಯುತ್ತಾರೆ. ತುಳುನಾಡಿನ ಅಲ್ಲಲ್ಲಿ ನಾಗಂಡಗಳಿವೆ. ಅಂದರೆ ಇದರ ಅರ್ಥ […]