ಇ-ಆಡಳಿತ ವ್ಯವಸ್ಥೆಯಿಂದ ತ್ವರಿತ ಸೇವೆ ಸಾಧ್ಯ: ಜೆ.ಆರ್.ಲೋಬೋ

Monday, January 28th, 2013
ಇ-ಆಡಳಿತ ವ್ಯವಸ್ಥೆಯಿಂದ ತ್ವರಿತ ಸೇವೆ ಸಾಧ್ಯ: ಜೆ.ಆರ್.ಲೋಬೋ

ಮಂಗಳೂರು : ನಗರಾಭಿವೃದ್ಧಿ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಸೂಪರ್ ಟೈಂ ಸ್ಕೇಲ್ ಕೆಎಎಸ್ ಅಧಿಕಾರಿಯಾಗಿ ನಿವೃತ್ತಿಯಾಗಿರುವ ಜೆ.ಆರ್.ಲೋಬೋ ಅವರು ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾಗಿ, ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣೆ ಯೋಜನೆ (ಕುಡ್ಸೆಂಪ್) ಯೋಜನಾ ನಿರ್ದೇಶಕರಾಗಿ ಮತ್ತು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಹಕ ನಿರ್ದೇಶಕರಾಗಿ ಜೆ.ಆರ್.ಲೋಬೋ ಮಂಗಳೂರು ನಗರದ ಜನತೆಗೆ ಚಿರಪರಿಚಿತರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿರುವ ಲೋಬೋ ಅವರು ಇದೀಗ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಸದ್ಯದಲ್ಲೇ ಮಹಾನಗರಪಾಲಿಕೆ […]

ಒಳ ಚರಂಡಿ ಕಾಮಗಾರಿ, ನೀರಿನಲ್ಲಿ ಮುಳುಗಿ ಕಾರ್ಮಿಕನ ಸಾವು

Monday, December 24th, 2012
water pipe burst Nagori

ಮಂಗಳೂರು : ಕಪಿತಾನಿಯೊ ಬಳಿ ಸೈಮನ್‌ ಲೇನ್‌ನಲ್ಲಿ ಶನಿವಾರ ಒಳ ಚರಂಡಿ ವ್ಯವಸ್ಥೆ ಕಾಮಗಾರಿ ನಡೆಯುತ್ತಿದ್ದ ವೇಳೆ ನೀರಿನ ಕೊಳವೆ ಒಡೆದ ಪರಿಣಾಮ, ಕಾರ್ಮಿಕ ನೀರಿನಲ್ಲಿ ಮುಳುಗಿ ಕೆಸರಿನಲ್ಲಿ ಹೂತು ಹೋಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ವ್ಯಕ್ತಿ ಆಂಧ್ರಪ್ರದೇಶ ಮೂಲದ ಕಾರ್ಮಿಕ ರಾಜು(25). ಸೈಮನ್ ಲೇನ್ ಗೆ ಕುಡ್ಸೆಂಪ್ ಯೋಜನೆಯಡಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕಳೆದ ಕೆಲವು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಸುಮಾರು 10 ಮಂದಿ ಕಾರ್ಮಿಕರು ಈ ಕಾರ್ಯಕ್ಕೆ ಕೊಳವೆ ಹಾಯಿಸಲು ಹೊಂಡ ತೆಗೆಯುವ […]