ಮಂಗಳೂರಿನ ಪುರಭವನಕ್ಕೆ ‘ಕುದ್ಮುಲ್ ರಂಗರಾವ್ ಸ್ಮಾರಕ’ ಹೆಸರಿಡಲು ಒಪ್ಪಿಗೆ ಸೂಚನೆ

Saturday, July 30th, 2016
MCC

ಮಂಗಳೂರು: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಮಂಗಳೂರಿನ ಹೃದಯ ಭಾಗದಲ್ಲಿರುವ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ತಾಣ ಪುರಭವನಕ್ಕೆ ದಲಿತೋದ್ಧಾರಕ ‘ಕುದ್ಮುಲ್ ರಂಗರಾವ್ ಸ್ಮಾರಕ’ ಎಂದು ಹೆಸರಿಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಮುಖ್ಯ ಸಚೇತಕ ಶಶಿಧರ ಹೆಗ್ಡೆ ಕಾರ್ಯಸೂಚಿ ಮಂಡಿಸಿದ್ದು, ಒಪ್ಪಿಗೆ ಸೂಚಿಸಲಾಯಿತು. ಪುರಭವನದ ಎದುರಿನ ಮೈದಾನ ರಸ್ತೆಯಲ್ಲಿ ಪಾದಾಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಾಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿರುವ ಕುರಿತು ಸಭೆಯ ಕಾರ್ಯಸೂಚಿಯಲ್ಲಿ ವಿಷಯ […]

ಮುರಳೀ ಶ್ಯಾಮ್‌ಗೆ ಡಾಕ್ಟರೇಟ್ ಪದವಿ

Thursday, February 11th, 2016
shyam bhat

ಕುಂಬಳೆ: ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಫಲಿತ ಜ್ಯೋತಿಷ ವಿಭಾಗದಲ್ಲಿ ‘ದೈವಜ್ಞ ಕಾಮಧೇನು ಗ್ರಂಥಸ್ಯ ಸಮೀಕ್ಷಾತ್ಮಕ ಮಧ್ಯಯನಮ್ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ ಗೆ ಸಮಾನವಾದ ‘ವಿದ್ಯಾವಾರಿಧಿ ಪದವಿಯನ್ನು ಮುರಳೀ ಶ್ಯಾಮ ಪಡೆದಿದ್ದಾರೆ. ಅವರು ಎಡನಾಡು ಗ್ರಾಮದ ಹೊಸಮನೆ ನಿವಾಸಿ ಎಚ್. ಕೃಷ್ಣ ಭಟ್ ಮತ್ತು ಶ್ಯಾಮಲಾ ದಂಪತಿಯ ಪುತ್ರ. ಮುರಳೀ ಶ್ಯಾಮ್ ಪ್ರೊ.ರಾಧಾಕಾಂತ ಠಾಕೂರ್ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಮುರಳೀ ಶ್ಯಾಮ್‌ಗೆ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇವರು ಪೆರಡಾಲ […]