ಕೊಡವ ಬುಡಕಟ್ಟು ಸ್ಥಾನಮಾನ ವಿಚಾರ ಸಂಕಿರಣ : ಸಂಘಟಿತ ಹೋರಾಟಕ್ಕೆ ಕುಪ್ಪೇಂದ್ರ ರೆಡ್ಡಿ, ಹರಿಪ್ರಸಾದ್ ಕರೆ
Monday, January 20th, 2020ಮಡಿಕೇರಿ : ಸತತ ಪ್ರಯತ್ನ ಮತ್ತು ಸಂಘಟಿತ ಹೋರಾಟ ಮಾಡದೇ ಇರುವುದರಿಂದ ಸಂವಿಧಾನ ಬದ್ಧವಾಗಿ ದೊರಕಬೇಕಿದ್ದ ಬುಡಕಟ್ಟು ಸ್ಥಾನಮಾನದ ಹಕ್ಕಿನಿಂದ ಕೊಡವ ಸಮುದಾಯ ವಂಚಿತವಾಗಿದೆ. ಕಳೆದ 70 ವರ್ಷಗಳಿಂದ ಸುಮ್ಮನಿದ್ದಿರಿ, ಇನ್ನಾದರೂ ಹೋರಾಟಕ್ಕೆ ಮುಂದಾಗಿ ಎಂದು ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಕೊಡವರಿಗೆ ಕರೆ ನೀಡಿದರು. ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಕೊಡವ ಬುಡಕಟ್ಟು ಸ್ಥಾನಮಾನದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡವ ಸಮುದಾಯದ […]