ಮಾಂಸಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪಿಯ ಬಂಧನ

Monday, November 4th, 2019
Gokarma

ಉತ್ತರ ಕನ್ನಡ : ಮಾಂಸಕ್ಕಾಗಿ ಸ್ಥಳೀಯ ಅರಣ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪಿಯನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೊಮ್ಮಯ್ಯ ಹಳ್ಳೇರ ಬಂಧಿತ ಆರೋಪಿ. ಈತನಿಂದ ಪ್ರಾಣಿ ಮಾಂಸ ವಶಕ್ಕೆ ಪಡೆಯಲಾಗಿದೆ. ಈತ ಗೋಕರ್ಣ ವ್ಯಾಪ್ತಿಯ ಅರಣ್ಯದಲ್ಲಿ ಮಾಂಸಕ್ಕಾಗಿ ಪ್ರಾಣಿಗಳನ್ನ ಬೇಟೆಯಾಡುತ್ತಿದ್ದ ಮಾಂಸ ಪ್ರಿಯರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈತನ ಹಿಂದೆ ದೊಡ್ಡ ಜಾಲವೇ ಇದೆ. ತನಿಖೆ ನಡೆಯುತ್ತಿದ್ದು ಶೀಘ್ರದಲ್ಲೇ ಎಲ್ಲ ಬೇಟೆಗಾರರನ್ನು ಬಂಧಿಸಲಾಗುವುದು ಎಂದು ಪೊಲೀಸರು […]

ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ನಾಪತ್ತೆ..!

Tuesday, July 3rd, 2018
kumuta

ಕುಮಟಾ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ವ್ಯಕ್ತಿಯೊಬ್ಬರು ದೋಣಿ ಮಗುಚಿದ ಪರಿಣಾಮ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಇಲ್ಲಿನ ಕಾಗಲ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಇಲ್ಲಿನ ಮುಲ್ಲಾ ಅಹ್ಮದ್ ಸಾಬ್ ಸಮುದ್ರದಲ್ಲಿ ನಾಪತ್ತೆಯಾದವರು. ಇವರು ಇಂದು ಮುಂಜಾನೆ ಕಾಗಲ ಬಳಿ ಪಾತಿ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿದ ಪಾತಿ ದೋಣಿ ಮಗುಚಿಬಿದ್ದಿದೆ. ಈ ವೇಳೆ ಅಹ್ಮದ್ ಸಾಬ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ.

ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸಿ : ರಾಘವೇಶ್ವರ ಭಾರತೀ ಸ್ವಾಮಿ

Tuesday, July 15th, 2014
ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸಿ : ರಾಘವೇಶ್ವರ ಭಾರತೀ ಸ್ವಾಮಿ

ಕೆಕ್ಕಾರು : ನಮ್ಮ ಬದುಕು ಸ್ಥಿರವಲ್ಲ, ಶಾಶ್ವತವಲ್ಲ. ಅದು ಕಮಲದ ಎಲೆಯ ಮೇಲಿನ ಬಿಂದುವಿನಂತೆ. ಕಮಲದ ಎಲೆಯಮೇಲೆ ಹೇಗೆ ನೀರಿನ ಬಿಂದು ಹೊಳೆಯುತ್ತದೆಯೋ ಹಾಗೆ ನಮ್ಮ ಬದುಕು ಕೂಡ ಹೊಳಪುಳ್ಳದ್ದು ಎಂದು ಭಾವಿಸುತ್ತೇವೆ. ಆದರೆ ಅದು ಸತ್ಯವಲ್ಲ; ಮಿಥ್ಯೆ. ಲೋಕ- ಶೋಕ ಅಕ್ಷರದಲ್ಲಿ ಮಾತ್ರ ವ್ಯತ್ಯಾಸ. ಆದರೆ ಅರ್ಥದಲ್ಲಿ ವ್ಯತ್ಯಾಸವಿಲ್ಲ. ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸು ಎಂದು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಿಳಿಸಿದರು. ಈ ದಿನ ಹರಿಕಂತ್ರ ಸಮಾಜದವರು ವಿಶೇಷ […]