ಕೆಎಸ್ಐಸಿ ಸಂಸ್ಥೆ ವತಿಯಿಂದ ಮೈಸೂರು ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ..!

Friday, December 14th, 2018
silk-saree

ಮಂಗಳೂರು: ರೇಷ್ಮೆ ಸೀರೆಗಳು ಮಧ್ಯಮವರ್ಗದವರ ಕೈಗೆಟಕುವುದಿಲ್ಲ ಎಂದುಕೊಂಡಿದ್ದರೆ ನಿಮ್ಮ ಆಲೋಚನೆ ಪಕ್ಕಕ್ಕಿಡಿ. ಮಹಿಳೆಯರ ಅಚ್ಚು ಮೆಚ್ಚಿನ ರೇಷ್ಮೆ ಸೀರೆಗಳು ಈಗ ಅಗ್ಗದ ಬೆಲೆಯಲ್ಲಿ ಸಿಗುತ್ತಿವೆ. ಮೈಸೂರು ಸಿಲ್ಕ್ ಸಂಸ್ಥೆ ಈ ಒಂದು ಆಫರ್ ಕೊಟ್ಟಿದೆ. ಬಡವರಿಗೂ, ಮಧ್ಯಮ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಕೆಎಸ್ ಐಸಿ ಸಂಸ್ಥೆ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡುತ್ತಿದೆ. ನಗರದ ಲಾಲ್ ಬಾಗ್ ನಲ್ಲಿರುವ ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿಯಲ್ಲಿ ಕರ್ನಾಟಕದ ಪಾರಂಪರಿಕ ಉತ್ಪನ್ನ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು […]

ಸಂತ್ರಸ್ತರಿಗೆ ಯಾವುದೇ ಸರ್ವೆ ನಡೆಸಲಾಗುತ್ತಿಲ್ಲ: ಜಿಲ್ಲಾಧಿಕಾರಿ ಕುಮಾರ್

Wednesday, September 26th, 2018
kumar

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಈಗಾಗಲೇ ಭೂಮಿಯನ್ನು ಬಿಟ್ಟು ಕೊಟ್ಟಿರುವ ಸಂತ್ರಸ್ತರ ಭೂಮಿಯಲ್ಲಿ ಮತ್ತೊಮ್ಮೆ ಸರ್ವೆ ನಡೆಸಿದ ವಿಚಾರ ಆತಂಕ ಸೃಷ್ಟಿಸಿತ್ತು. ಸದ್ಯ ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆತಂಕ ನಿವಾರಣೆ ಮಾಡಲಾಯಿತು. ಪುತ್ತೂರು ತಾಲೂಕಿನ ನೆಲ್ಯಾಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಹೆದ್ದಾರಿ ಬದಿಯಲ್ಲಿದ್ದಂತಹ ಹಲವರ ಭೂಮಿಯನ್ನು ಒತ್ತುವರಿ ಮಾಡಲಾಗಿತ್ತು. ಈ ಒತ್ತುವರಿಯ ಸಂತ್ರಸ್ತರಿಗೆ ಪರಿಹಾರವನ್ನೂ ವಿತರಿಸಲಾಗಿತ್ತು. ಇದೆಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದೇ ಭಾಗದಲ್ಲಿ ಎಲ್‌ ಆಂಡ್ ಟಿ ಕಂಪನಿಯವರು ಇತೀಚೆಗೆ […]

ಯಕ್ಷಗಾನ ಬೆಳವಣಿಗೆಗೆ ಕಲಾಭಿಮಾನಿಗಳ ಸಹಕಾರ ಅಗತ್ಯ: ಅಗರಿ ರಾಘವೇಂದ್ರ ರಾವ್

Tuesday, April 17th, 2018
sathish-patla

ಮಂಗಳೂರು: ಯಕ್ಷಗಾನ ಕಲೆ ಬೆಳೆಯುತ್ತಿದೆ, ಮತ್ತಷ್ಟು ಬೆಳೆಯಲು ಸರ್ವರ, ಕಲಾಭಿಮಾಗಳ ಸಹಕಾರ ಅಗತ್ಯ. ಯಕ್ಷಗಾನ ಕಲೆ ಬೆಳವಣಿಗೆ ಟ್ಟಿನಲ್ಲಿಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಎಲ್ಲರನ್ನು ಸೇರಿಸಿ ಕಾರ್ಯವೆಸಗುತ್ತಿರುವುದು ಶ್ಲಾಘಯ ಎಂದು ಅಗರಿ ಎಂಟರ್‌ಪ್ರೈಸಸ್ ಸಮೂಹ ಸಂಸ್ಥೆಗಳ ಮಾಲಿಕ ಅಗರಿ ರಾಘವೇಂದ್ರ ರಾವ್ ಹೇಳಿದರು. ಯಕ್ಷಧ್ರುವ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ 29ನೇ ಸುರತ್ಕಲ್ ಘಟಕದ ಉದ್ಘಾಟನೆ ಸಮಾರಂಭ ಇಲ್ಲಿನ ಬಂಟರ ಭವನದಲ್ಲಿ ಭಾನುವಾರ ನಡೆದಾಗ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಉದ್ಘಾಟಿಸಿದ ಪ್ರಸಿದ್ದ ಜ್ಯೋತಿಷಿ ಕೆಸಿ ನಾಗೇಂದ್ರ […]

ದ.ಕ.ದಲ್ಲಿ ಮತದಾರರ ಜಾಗೃತಿಗಾಗಿ ಚುನಾವಣಾ ತಂಡ ರಚನೆ

Wednesday, February 28th, 2018
dakshina-kannda

ಮಂಗಳೂರು: ಮತದಾರರ ಜಾಗೃತಿಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಗ್ರಾಮ ಮಟ್ಟದ ಚುನಾವಣಾ ತಂಡಗಳನ್ನು ರಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ. ನಗರದ ಪುರಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮ ಹಾಗೂ ಆಶಾ ಕಾರ್ಯಕರ್ತಯರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮ ಲೆಕ್ಕಿಗರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡಂತಹ ಒಟ್ಟು 430 ತಂಡಗಳನ್ನು ರಚಿಸಲಾಗಿದೆ. ಆಯಾ ಗ್ರಾಮದಲ್ಲಿ ಚುನಾವಣೆಗೆ ಸಂಬಂಧಿಸಿದ ವಿವಿಧ ಜಾಗೃತಿ ಕಾರ್ಯಗಳನ್ನು ಅವರು ನಿರ್ವಹಿಸಲಿದ್ದಾರೆ. ಅವರಿಗೆ ಬೇಕಾದ […]