ಕಾಟುಕುಕ್ಕೆಯಲ್ಲಿ ವ್ಯಾಪಕ ಕಾಡುಕೋಣಗಳಿಂದ ಧಾಳಿ- ಕೃಷಿ ನಾಶ

Thursday, October 20th, 2016
Perla-katukukke

ಪೆರ್ಲ: ಗಡಿ ಗ್ರಾಮ ಕಾಟುಕುಕ್ಕೆ ಪರಿಸರದಲ್ಲಿ ಕಾಡುಕೋಣಗಳು ವ್ಯಾಪಕ ಕೃಷಿನಾಶಗೈದಿದ್ದು, ನಾಗರಿಕರಲ್ಲಿ ಭೀತಿ ಸೃಷ್ಟಿಸಿದೆ. ಮಂಗಳವಾರ ಮಧ್ಯಾಹ್ನ ಕಾಟುಕುಕ್ಕೆ ಶಾಲೆ ಸಮೀಪದ ಗುತ್ತು ಅರಯಕ್ಕೋಡಿ ಎಂಬಲ್ಲಿನ ಗೋಪಾಲ ಕೃಷ್ಣ ಭಟ್‌ರ ಅಡಿಕೆ ತೋಟಕ್ಕೆ ನುಗ್ಗಿ ಕಾಡು ಕೋಣಗಳು ಕೃಷಿನಾಶಗೈದಿವೆ. ಅಲ್ಲದೆ ಸಮೀಪದ ಅಪ್ಪಯ್ಯ ಮಣಿಯಾಣಿ ಎಂಬವರ ತೋಟಕ್ಕೆ ತಲುಪಿದಾಗ ಅರಣ್ಯಾಧಿಕಾರಿಗಳು ತಲುಪಿ ಸಿಡಿಮದ್ದು ಸಿಡಿಸಿದ್ದು, ಆದರೆ ಕಾಡುಕೋಣಗಳು ಕ್ಯಾರೆ ಅನ್ನಲಿಲ್ಲ. ಬಳಿಕ ಬುಧವಾರ ಬೆಳಿಗ್ಗೆ ಬಜಕ್ಕರೆ ಎಂಬಲ್ಲಿನ ಭಾಸ್ಕರ ಎಂಬವರ ಅಡಿಕೆ ತೋಟಕ್ಕೆ ಈ ಕಾಡುಕೋಣಗಳು ನುಗ್ಗಿ […]

ರೈತ ಸಂಘ ಒಕ್ಕೂಟದ ವತಿಯಿಂದ ಪ್ರತಿಭಟನೆ

Thursday, December 5th, 2013
WTO

ಮಂಗಳೂರು: ದಕ್ಷಿಣ ಭಾರತ ರೈತ ಸಂಘ ಒಕ್ಕೂಟದ ವತಿಯಿಂದ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ 33 ರಾಷ್ಟ್ರಗಳ 9ನೇ ಶೃಂಗಸಭೆಯಿಂದ ಭಾರತದ ಪ್ರತಿನಿಧಿಗಳು ಹೊರನಡೆಯಬೇಕು ಮತ್ತು ರೈತರ ಹಿತಾಸಕ್ತಿಯನ್ನು ಬಲಿಕೊಡುವ ಒಪ್ಪಂದಗಳಿಗೆ ಸಹಿ ಹಾಕಬಾರದು ಎಂದು ಆಗ್ರಹಿಸಿ ಮಂಗಳವಾರ ನವಮಂಗಳೂರು ಬಂದರು ಮಂಡಳಿ ಮುಂದೆ ಪ್ರತಿಭಟನೆ ನಡೆಯಿತು. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯ ರೈತ ಪ್ರತಿನಿಧಿಗಳು ಹಾಗೂ ರಾಜ್ಯದ ಮಂಡ್ಯ, ತುಮಕೂರು, ಕೊಡಗು ಗಡಿಭಾಗದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜಿ 33 […]