ಪಕ್ಷದ ಮೇಲೆ ನಂಬಿಕೆ ಇಟ್ಟು ಬರುವವರಿಗೆ ಪ್ರಜಾಕೀಯದ ಬಾಗಿಲು ಸದಾ ತೆರೆದಿರುತ್ತದೆ : ಉಪೇಂದ್ರ
Tuesday, December 5th, 2017ಮಂಗಳೂರು: ಒಬ್ಬ ಕಾರ್ಮಿಕನಾಗಿ ಜನರ ಮುಂದೆ ಹೋಗುತ್ತಿದ್ದೇನೆ. ನನ್ನ ಯೋಚನೆಗಳನ್ನು ಮುಂದಿಟ್ಟು ಅವರೊಂದಿಗೆ ಮಾತನಾಡುತ್ತಿದ್ದೇನೆ. ಸಮಾಜದಲ್ಲಿನ ಪ್ರಜ್ಞಾವಂತರು ಪಕ್ಷಕ್ಕೆ ಬನ್ನಿ ಎಂದು ಕೆಪಿಜೆಪಿ-ಪ್ರಜಾಕೀಯ ಪಕ್ಷ ದ ಸ್ಥಾಪಕ ಉಪೇಂದ್ರ ಕರೆ ನೀಡಿದರು. ಮಂಗಳವಾರ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ ರಾಜಕೀಯಕ್ಕೆ ಬೇಕಾಗಿರುವುದು ನಾಯಕರು, ಸೇವಕರಲ್ಲ. ಆದರೆ, ಇಂದು ವ್ಯವಸ್ಥೆ ಬದಲಾಗಿದೆ. ಗೆದ್ದ ಮೇಲೆ ಜನನಾಯಕರನ್ನು ಹುಡುಕುವುದೇ ಕಷ್ಟವಾಗಿದೆ. ಆದರೆ, ಪ್ರಜಾಕೀಯದಲ್ಲಿ ಹಾಗಲ್ಲ. ಚುನಾವಣೆಗೆ ದುಡ್ಡು ಖರ್ಚು ಮಾಡುವುದಿಲ್ಲ. ಪಕ್ಷ ಬಲವರ್ಧನೆಗೆ ದುಡ್ಡು ಸಂಗ್ರಹವಿಲ್ಲ. ಬೆಂಗಾವಲಿಗರನ್ನು ಇಟ್ಟುಕೊಂಡು ಜೈಕಾರ ಹಾಕಿ […]