ಕೊರೊನಾ ತಡೆಗಟ್ಟಲು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರ್ವ ವ್ಯವಸ್ಥೆ
Wednesday, March 18th, 2020ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದುವರೆಗೆ 29,053 ಜನರು ಹಾಗೂ ನವಮಂಗಳೂರು ಬಂದರಿನಲ್ಲಿ 5,543 ಜನರನ್ನು ತಪಾಸಣೆ ಮಾಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಮೇಲೆ ನಿಗಾ ವಹಿಸಲು ವೆನ್ಲಾಕ್ ನಲ್ಲಿ ನಿಗಾವಣಾ (ಕ್ವಾರಂಟೈನ್) ವಾರ್ಡ್ 10 ಹಾಗೂ ಪ್ರತ್ಯೇಕತಾ (ಐಸೋಲೇಶನ್) 6 ವಾರ್ಡ್ ಮಾಡಲಾಗಿದೆ. ತಾಲೂಕುಗಳಲ್ಲಿರುವ ನಿಗಾ ವಾರ್ಡ್‌ನಲ್ಲಿ 167, ಪ್ರತ್ಯೇಕತಾ ವಾರ್ಡ್‌ಗಳಾಗಿ 120ನ್ನು ಸಿದ್ಧಪಡಿಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ 100 ಬೆಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗಿನ 46 ಮಾದರಿ ಟೆಸ್ಟ್ ನಡೆಸಲಾಗಿದ್ದು, […]