ಎನ್ಡಿಎ ಜತೆ ಕೇಂದ್ರ ಚುನಾವಣಾ ಅಯೋಗ ಶಾಮೀಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪ
Saturday, October 14th, 2017ಮಂಗಳೂರು: ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಹಿಮಾಚಲ ಪ್ರದೇಶ ಹಾಗೂ ಗುಜರಾತ್ನಲ್ಲಿ ಏಕಕಾಲದಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸಬೇಕಿದ್ದ ಚುನಾವಣಾ ಆಯೋಗವು ಎನ್ಡಿಎ ಸರಕಾರದ ಜತೆ ಶಾಮೀಲಾಗಿರುವುದರಿಂದ ಗುಜರಾತ್ನಲ್ಲಿ ಬಿಜೆಪಿಗೆ ರಾಜಕೀಯ ತಂತ್ರಗಾರಿಕೆಗೆ ಅವಕಾಶ ನೀಡುವ ಸಲುವಾಗಿ ದಿನಾಂಕವನ್ನು ಪ್ರಕಟಿಸದೆ ತಾರತಮ್ಯವೆಸಗಿದೆ ಎಂದರು. ಗುಜರಾತ್ನಲ್ಲಿ ಬಿಜೆಪಿಗೆ ಸೋಲಿನ ಭೀತಿ ಆವರಿಸಿರುವುದರಿಂದ ಚುನಾವಣಾ ತಂತ್ರಗಾರಿಕೆಗೆ ಸಮಯಾವಕಾಶ ಒದಗಿಸಲು ಅನುಕೂಲವಾಗುವಂತೆ ಆಯೋಗ ಅನುವು ಮಾಡಿಕೊಟ್ಟಿದೆ ಎಂದು ದೂರಿದರು. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 100ನೇ […]