ಡೀಸೆಲ್ ಬೆಲೆ ಏರುತ್ತಿದ್ದಂತೆ ಯೆ ದ್ರವೀಕೃತ ಗ್ಯಾಸ್ ಬಳಸಿ ಬಸ್ ಸಂಚಾರ ಆರಂಭಿಸಿದ ಕೇರಳ

Monday, June 21st, 2021
gas Bus

ತಿರುವನಂತಪುರಂ: ಕೇರಳ ಸರ್ಕಾರ ಸೋಮವಾರ (ಜೂನ್ 21) ಪರಿಸರ ಸ್ನೇಹಿ ಎಂದೇ ಪರಿಗಣಿತವಾಗಿರುವ ದ್ರವೀಕೃತ ನೈಸರ್ಗಿಕ ಅನಿಲ(ಎಲ್ ಎನ್ ಜಿ) ಚಾಲಿತ ಮೊದಲ ಬಸ್ ಗೆ ಚಾಲನೆ ನೀಡಿದೆ. ಸಾರಿಗೆ ಸಚಿವ ಆ್ಯಂಟನಿ ರಾಜು ಅವರು ತಿರುವನಂತಪುರಂನ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಕೇರಳ, ತಿರುವನಂತಪುರಂನಲ್ಲಿ ಐದು ವರ್ಷಗಳ ಹಿಂದೆಯೇ ಕೇರಳ ಸರ್ಕಾರ  ಎಲ್ ಎನ್ ಜಿ ಬಸ್ ಪ್ರಾಯೋಗಿಕ ಸಂಚಾರ ನಡೆಸಿತ್ತು. ಇದೀಗ ಪೂರ್ಣಪ್ರಮಾಣದಲ್ಲಿ […]

ಶಬರಿಮಲೈಗೆ ತೆರಳುವ ಯಾತ್ರಾರ್ಥಿಗಳಿಗೆ ಕೇರಳ ಸರ್ಕಾರದಿಂದ ಮಾರ್ಗಸೂಚಿ

Friday, November 6th, 2020
ayyappa

ಬೆಂಗಳೂರು: ಕೇರಳ ರಾಜ್ಯದ ಶಬರಿಮಲೈನಲ್ಲಿ ಜರುಗುವ 2020-21 ನೇ ಸಾಲಿನ ಮಂಡಲ-ಮಕರವಿಳಕ್ಕು ವರ್ಷದ ಕಾರ್ಯಕ್ರಮದಲ್ಲಿ ತೆರಳುವ ಭಕ್ತಾದಿಗಳ ಆರೋಗ್ಯ ರಕ್ಷಣೆಗಾಗಿ ಹಾಗೂ ಸಾರ್ವಜಿನಕರ ಗಮನಕ್ಕೆ ಕೇರಳ ಸರ್ಕಾರವು ಮಾರ್ಗಸೂಚಿಯನ್ನು ಹೊರಡಿಸಿದೆ. ಎಲ್ಲಾ ಯತ್ರಾರ್ಥಿಗಳು https://sabarimalaonline.org/ವೆಬ್ಸೈಟ್ನ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರಥಮವಾಗಿ ಪ್ರತಿದಿನ ಒಂದು ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ವಾರಾಂತ್ಯದಲ್ಲಿ ಪ್ರತಿ ದಿನ ಎರಡು ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇರುತ್ತದೆ. ಅದರಂತೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ಇರುತ್ತದೆ. ಭೇಟಿ ನೀಡುವ 48 ಗಂಟೆ […]

ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಕೃಷ್ಣೈಕ್ಯ

Sunday, September 6th, 2020
keshavananda Bharati

ಕಾಸರಗೋಡು: ಎಡನೀರು ಮಠಾಧೀಶ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ  ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು (79) ರಾತ್ರಿ 12.45ರ ಸುಮಾರಿಗೆ ಕೃಷ್ಣೈಕ್ಯರಾದರು.. ಸೆ.2ರಂದು ಚಾತುರ್ಮಾಸ್ಯವನ್ನು ಪೂರೈಸಿದ್ದ ಶ್ರೀಗಳು ಕಳೆದ ಕೆಲವು ದಿನಗಳಿಂದ ಅಲ್ಪ ಅಸೌಖ್ಯದಲ್ಲಿದ್ದರು. ಶನಿವಾರ ರಾತ್ರಿ ಪೂಜೆ ಮುಗಿಸಿ ಫಲಾಹಾರ ಸ್ವೀಕರಿಸಿದ್ದ ಶ್ರೀಗಳು ಮಧ್ಯರಾತ್ರಿಯ ವೇಳೆ ಅಸ್ತಂಗತರಾಗಿದ್ದಾರೆ. 1960, ನ.14ರಿಂದ ಎಡನೀರು ಮಠಾಧಿಶರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಸಂಗೀತ, ಯಕ್ಷಗಾನ, ಶಿಕ್ಷಣ, ಪ್ರವಾಸೋದ್ಯಮ ಸಹಿತ ಧಾರ್ಮಿಕ ಕ್ಷೇತ್ರಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ  ಅಪಾರ […]

ಸಿಎಎ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ : ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಲು ಕೇರಳ ಸಿಎಂ ಒತ್ತಾಯ

Tuesday, January 14th, 2020
pinarayi

ನವದೆಹಲಿ : ವಿವಾದಾತ್ಮಕ ಪೌರತ್ವ ನಿಷೇಧ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಮೂಲಕ ಸುಪ್ರೀಂ ನಲ್ಲಿ ಸಿಎಎ ಕಾನೂನನ್ನು ಪ್ರಶ್ನಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕೇರಳ ಪಾತ್ರವಾಗಿದೆ. ಕೇರಳ ವಿಧಾನಸಭೆ ಕಳೆದ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು. ಎಲ್ಲಾ ಪಕ್ಷದ ಶಾಸಕರೂ ಸಿಎಎ ಕೇರಳದಲ್ಲಿ ಜಾರಿಯಾಗಬಾರದು ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದರು. ಅಲ್ಲದೆ, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದ […]

ಕೇರಳ ಸರ್ಕಾರದಿಂದ ರಕ್ಷಣೆ ನೀಡದಿದ್ದರೂ ಶಬರಿಮಲೆಗೆ ಭೇಟಿ ನೀಡುತ್ತೇವೆ : ಬಲಪಂಥೀಯ ಕಾರ್ಯಕರ್ತೆ ತೃಪ್ತಿ ದೇಸಾಯಿ

Saturday, November 16th, 2019
Trupti-Desai

ಮುಂಬೈ : ಕೇರಳ ಸರ್ಕಾರದಿಂದ ರಕ್ಷಣೆ ನೀಡುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನವೆಂಬರ್ 20ರ ನಂತರ ಶಬರಿಮಲೆ ದೇವಸ್ಥಾನಕ್ಕೆ ತೆರಳುವುದಾಗಿ ಬಲಪಂಥೀಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ. ನವೆಂಬರ್ 20ರ ನಂತರ ನಾನು ಶಬರಿಮಲೆಗೆ ಹೋಗುತ್ತೇನೆ. ನಾವು ಕೇರಳ ಸರ್ಕಾರದಿಂದ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದೇವೆ. ನಮಗೆ ರಕ್ಷಣೆ ನೀಡುವುದು ಬಿಡುವುದು ಅವರಿಗೆ ಬಿಟ್ಟದ್ದು. ರಕ್ಷಣೆ ಒದಗಿಸದಿದ್ದರೂ ನಾನು ದರ್ಶನಕ್ಕಾಗಿ ಶಬರಿಮಲೆಗೆ ಭೇಟಿಯೇ ನೀಡುತ್ತೇನೆ ಎಂದು ತೃಪ್ತಿ ಹೇಳಿದ್ದಾರೆ. ಶಬರಿಮಲೆ ದೇವಸ್ಥಾನವನ್ನು ತೆರೆಯುವ ಮುನ್ನ ಕೇರಳ ದೇವಸ್ವಂ ಮಂಡಳಿ […]