ಲಸಿಕೆ ಪಡೆಯದ ಫಲಾನುಭವಿಗಳನ್ನು ಗುರುತಿಸಿ, ವ್ಯಾಕ್ಸಿನ್ ಕೊಡಿಸಿ: ಪೊನ್ನು ರಾಜ್

Monday, October 25th, 2021
Ponnuraj

ಮಂಗಳೂರು : ಕೊವಿಡ್-19 ಸೋಂಕಿನ ಲಸಿಕೆ ಪಡೆಯದ ಫಲಾನುಭವಿಗಳನ್ನು ಕೂಡಲೇ ಗುರುತಿಸಿ ವ್ಯಾಕ್ಸಿನ್ ನೀಡಲು ಸಾಧ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಈ ಬಗ್ಗೆ ವ್ಯಾಪಕ ಜನ ಜಾಗೃತಿ ಮೂಡಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನು ರಾಜ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅವರು ಅ.25ರ ಸೋಮವಾರ ಕೋವಿಡ್-19 ಲಸಿಕಾಕರಣಕ್ಕೆ ಸಂಬಂಧಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ನಗರ ಸ್ಥಳೀಯ ಸಂಸ್ಥೆಗಳು ಹಾಗೂ […]

ಯಾಕೆ ಈ ಪಾರ್ಷಿಯಾಲಿಟಿ ? ಮಂದಿರ, ಮಸೀದಿ, ಚರ್ಚ್ ಸಂಪೂರ್ಣ ಬಂದ್ !

Thursday, April 22nd, 2021
mandhir

ಉಡುಪಿ : ಸರಕಾರದ ಆದೇಶದಂತೆ ಕೊವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಮೇ4 ರವರೆಗೆ ಕರೋನ ನೈಟ್ ಕರ್ಫ್ಯೂ ಮತ್ತು ವಾರಂತ್ಯ ಕರ್ಫ್ಯೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿ ಗೊಳಿಸಿದ್ದು, ಅದರಂತೆ ಮಸೀದಿ, ದೇವಸ್ಥಾನ, ಚಚ್೯ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಮುಂದಿನ ಆದೇಶವರೆಗೆ ಮುಚ್ಚಬೇಕು ಎಂದು ಉಡುಪಿ ಜಿಲ್ಲಾಧಿಕಾರಿ‌ ಜಿ.ಜಗದೀಶ್ ತಿಳಿಸಿದ್ದಾರೆ. ಪೂಜಾ ಸ್ಥಳದ ಸೇವೆಯಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳು ಯಾವುದೇ ಸಂದರ್ಶಕರನ್ನು ಒಳಗೊಳ್ಳದೆ ತಮ್ಮ ಆಚರಣೆ ಗಳನ್ನು ಮತ್ತು ಕರ್ತವ್ಯಗಳನ್ನು ನಿರ್ವಹಿಸಬಹುದಾಗಿದೆ. ಅಲ್ಲದೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ […]