ಕೋವಿಡ್‌ -19 ಮಣಿಸಲು ಹುಬ್ಬಳ್ಳಿ ಸಿದ್ದಾರೂಢನ ಸಂಶೋಧನೆ

Friday, July 24th, 2020
chandrashekara

ಹುಬ್ಬಳ್ಳಿ : ನಗರದ ಸಿದ್ಧಾರೂಢ ಚಂದ್ರಶೇಖರ ಅಂಗಡಿ ಕೋವಿಡ್‌ -19 ಕೋರಾನಾ ಸಾಂಕ್ರಾಮಿಕ ರೋಗ ಮಣಿಸಲು ವಿಶಿಷ್ಟ ರೀತಿಯ ಸ್ಯಾನಿಟೈಸರ್‌ ತಮ್ಮ ತಂಡದೊಂದಿಗೆ ಸಂಶೋಧಿಸಿ ಹುಬ್ಬಳ್ಳಿಯ ಹೆಸರನ್ನು ವಿಶ್ವದಾದ್ಯಂತ ಬೆಳಗಿಸಿದ್ದಾನೆ. ವಿಜ್ಹ್‌ ಕ್ಲೀಂಜರ್‌ ಇ – ಸ್ಯಾನಿಟೈಜರ್‌ ಶೋಧಿಸಿದ ಸಿದ್ಧಾರೂಢನ ತಂಡವು ಜಾಗತಿಕ ಮಟ್ಟದಲ್ಲಿ ಇದೊಂದು ಮೊಟ್ಟ ಮೊದಲ ಉತ್ಪನ್ನ (ಮೇಡ್‌ ಇನ್‌ ಇಂಡಿಯಾ, ಮೇಡ್‌ ಫಾರ್‌ ಇಂಡಿಯಾ). ಇ-ಸ್ಯಾನಿಟೈಜರ್‌ ಎಂಬ ವಿನೂತನ, ವಿಶಿಷ್ಷ ಹಾಗೂ ಪರಿಸರ ಸ್ನೇಹಿ ಉತ್ಪನ್ನವನ್ನು ವಿವಿಧ ಕಾಲೇಜಿನ ಇಂಜಿನೀಯರಿಂಗ್‌ ವಿದ್ಯಾರ್ಥಿಗಳ ಗುಂಪೊಂದು […]

ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ 100 ವೆಂಟಿಲೇಟರ್

Wednesday, June 3rd, 2020
modi-trump

ವಾಷಿಂಗ್ಟನ್ :  ಮುಂದಿನ ವಾರ ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ ಗಳನ್ನು ರವಾನಿಸಲಾಗುವುದು, ಕಾನ್ಫೆರೆನ್ಸ್ ಕಾಲ್ ನಲ್ಲಿ ಡೊನಾಲ್ಡ್ ಟ್ರಂಪ್ ಮೋದಿಗೆ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಶ್ವೇತ ಭವನ ಹೇಳಿದೆ. ಮಂಗಳವಾರ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಜಿ-7 ಶೃಂಗಸಭೆ, ಕೋವಿಡ್-19 ನಿರ್ವಹಣೆ, ಪ್ರಾದೇಶಿಕ ಭದ್ರತೆ ವಿಚಾರಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ವಾರ ಭಾರತಕ್ಕೆ ಮೊದಲ ಹಂತದಲ್ಲಿ […]

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾ. 31ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ

Monday, March 23rd, 2020
SindhuB Roopesh

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾ. 22ರ ರಾತ್ರಿ 9 ಗಂಟೆಯಿಂದ ಮಾ. 31ರ ಮಧ್ಯರಾತ್ರಿ 12 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ನಿಷೇಧಾಜ್ಞೆ ವಿಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಆದೇಶಿಸಿದ್ದಾರೆ. ಕೋವಿಡ್‌- 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿಷೇಧಾಜ್ಞೆ ವೇಳೆ ಸಾರ್ವಜನಿಕರು ತುರ್ತು ಮತ್ತು ಆವಶ್ಯಕ ಕಾರ್ಯಗಳನ್ನು ಹೊರತುಪಡಿಸಿ ಇನ್ನಾವುದೇ ಕಾರಣಗಳಿಗೆ ಮನೆಗಳಿಂದ ಹೊರಬರುವುದನ್ನು ಕಡ್ಡಾಯ ವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ತಮ್ಮ […]