ಸರಕಾರದ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ

Monday, June 7th, 2021
Horatti

ಹುಬ್ಬಳ್ಳಿ : ಮನುಷ್ಯನಿಗೆ ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಮುಖ್ಯವಾದುದು. ಆರೋಗ್ಯದಿಂದ ಇದ್ದಾಗ ಮಾತ್ರ ಜೀವನ ಎಲ್ಲ ಸುಖ ಸಂತೋಷಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಮಾನ್ಯ ವಿಧಾನ ಪರಿಷತ್ತಿನ ಸಭಾಪತಿಯವರಾದ ಬಸವರಾಜ ಹೊರಟ್ಟಿ ಅವರು ಹೇಳಿದರು. ಹುಬ್ಬಳ್ಳಿಯ ತಮ್ಮ ಜೀವನಾಡಿಯಾದ ನಿಸರ್ಗ ತೋಟದಲ್ಲಿ ಕೆಲಸ ಮಾಡುತ್ತಿರುವ ಕೃಷಿಕರು ಮತ್ತು ಕಾರ್ಮಿಕರಿಗೆ ಹಾಗೂ ಸುತ್ತುಮುತ್ತಲಿನ ಗ್ರಾಮದ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊವಿಡ್ ನ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ […]

ಕಾಂಗ್ರೆಸ್ ಯುವ ಮುಖಂಡನ ಅಂತ್ಯಕ್ರಿಯೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ, 25 ಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲು

Monday, June 7th, 2021
Mahanthesh

ಗದಗ: ಕಾಂಗ್ರೆಸ್ ಯುವ ಮುಖಂಡನ  ಅಂತ್ಯಕ್ರಿಯೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 25 ಕ್ಕೂ ಹೆಚ್ಚು ಮಂದಿ  ಮೇಲೆಯ ಪೊಲೀಸರು ದೂರು ದಾಖಲು ಮಾಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 25 ಕ್ಕೂ ಹೆಚ್ಚು ಮಂದಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ. ಗದಗ ನಗರದ ಗಂಗಾಪೂರ ನಿವಾಸಿಯಾದ ಮಹಾಂತೇಶ ಬೆಳಧಡಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರವಾದ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಜೂನ್ 5 ರಂದು ಗದಗದಲ್ಲಿ ಅವರ ಅಂತ್ಯ ಸಂಸ್ಕಾರ ನಡೆದಿತ್ತು. ಈ ಸಂದರ್ಭದಲ್ಲಿ […]

ಅಸ್ಥಿ ವಿಸರ್ಜನೆಗೆ ತೆರಳುವವರಿಗೆ ಯಾರು ಅಡ್ಡಿ ಪಡಿಸದಂತೆ ಆದೇಶ

Monday, May 24th, 2021
Asti

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿ ವಿಸರ್ಜನೆಗೆ ತೆರಳುವವರನ್ನ ಮಾರ್ಗ ಮಧ್ಯೆ ಯಾರು ತಡೆಯದ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಮಾಹಿತಿ ನೀಡಿದ ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್‌ ಅಶೋಕ, “ಸೋಂಕಿನಿಂದ ಮರಣ ಹೊಂದಿದವರ‌ ಅಸ್ಥಿಯನ್ನು ಸಂಬಂಧಿಗಳು ತಮ್ಮಿಷ್ಟದ ಸ್ಥಳದಲ್ಲಿ ವಿಸರ್ಜನೆ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಈಗಾಗಲೇ ಕುಟುಂಬಸ್ಥರಿಗೆ ಅಸ್ಥಿ ವಿಸರ್ಜನೆ ಮಾಡಲು ತೆರಳುವ ಮಾರ್ಗ ಮಧ್ಯೆ ಹಾಗೂ ವಿಸರ್ಜನೆಯ ಸ್ಥಳದಲ್ಲಿ ಅಡ್ಡಿಪಡಿಸುತ್ತಿರುವ ಕುರಿತಂತೆ ಸಾಕಷ್ಟು […]