ಪಾನ್ ಮಸಾಲ ತಿನ್ನುವುದು ಮಾರಾಟ ಮಾಡುವುದು ನಿಷೇಧ

Wednesday, April 29th, 2020
Panmasala

ಮಂಗಳೂರು :  ಕೋವಿಡ್-19 ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಪಾನ್ ಮಸಾಲ, ಜರ್ದಾ, ಖೈನಿ, ಇತ್ಯಾದಿ ಜಗಿಯುವ ತಂಬಾಕು ಪದಾರ್ಥಗಳನ್ನು ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನ್ಯುಮೋನಿಯ ಮತ್ತು ಕೋವಿಡ್-19 ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಕಾರಣವಾಗಬಹುದು. ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಯ ಮೂಲಕ ವೈರಸ್‍ಗಳು ಮಾನವನ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಹಾಗೂ ದೇಹದ ಇತರೆ ಭಾಗಗಳಿಗೆ ಸೋಂಕು ಹರಡಿ ಶ್ವಾಸಕೋಶ, ಹೃದಯ ಸಂಬಂಧಿತ ಕಾಯಿಲೆಗಳು […]

ಬೆಳ್ತಂಗಡಿಗೂ ಕಾಲಿಟ್ಟ ಕೋವಿಡ್ 19 ವೈರಸ್ : ದುಬಾಯಿಯಿಂದ ಹಿಂತಿರುಗಿದ ಯುವಕನಿಗೆ ಪಾಸಿಟಿವ್

Friday, March 27th, 2020
Belthangady

ಬೆಳ್ತಂಗಡಿ: ಕರಾಯ ಗ್ರಾಮದ 21 ವರ್ಷದ ಯುವಕನಲ್ಲಿ ಕೋವಿಡ್ 19 ವೈರಸ್ ಪಾಸಿಟಿವ್ ಆಗಿರುವುದು  ಪತ್ತೆಯಾಗಿದೆ. ಈ ಯುವಕ ಮಾರ್ಚ್ 21ರಂದು ದುಬಾಯಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮತ್ತು ಆ ಬಳಿಕ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಮೂಲಕ ಕರಾಯದಲ್ಲಿರುವ ತನ್ನ ಮನೆಗೆ ಬಂದಿದ್ದ. ಬಳಿಕ ಈ ಯುವಕನಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದ ಕಾರಣದಿಂದ ಮಾರ್ಚ್ 24ರಂದು ಪುತ್ತೂರಿನ ಆಸ್ಪತ್ರೆ ದಾಖಲುಗೊಂಡಿದ್ದ. ಈ ಸಂದರ್ಭದಲ್ಲಿ ಈತನ ಗಂಟಲು ಸ್ರಾವ ಮಾದರಿಯನ್ನು ತಪಾಸಣೆಗೆ ಕಳುಹಿಸಿಕೊಡಲಾಗಿತ್ತು. ಪ್ರಯೋಗಾಲಯ ಪರೀಕ್ಷೆಯ ವರದಿ ಇಂದು ಕೈಸೇರಿದ್ದು ಇದರಲ್ಲಿ […]