ಆಗಸ್ಟ್ 12 ರಂದು ಮಂಗಳೂರಿನಲ್ಲಿ ಸೀರೆಯುಟ್ಟ ನಾರಿಯರಿಗಾಗಿ ಓಟ – ನಡಿಗೆ ಸ್ಪರ್ಧೆ

Saturday, July 28th, 2018
marathon

ಮಂಗಳೂರು: ಇತ್ತೀಚಿನ ದಿನಗಳಲ್ಲಿ ದೇಶದಲ್ಲೆಲ್ಲಾ ಫಿಟ್ ನೆಸ್ ನದ್ದೇ ಹವಾ. ಎಲ್ಲರೂ ಫಿಟ್ ನೆಸ್ ಕಾನ್ಶಿಯಸ್ ಆಗಿ ಬಿಟ್ಟಿದ್ದಾರೆ. ಪ್ರಧಾನಿ ಮೋದಿ ಆದಿಯಾಗಿ ಸಚಿವರು, ಕ್ರೀಡಾಪಟುಗಳು, ಚಿತ್ರ ತಾರೆಯರು ಫಿಟ್ ನೆಸ್ ಚಾಲೆಂಜ್ ಹಾಕುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ಸೀರೆಯುಟ್ಟು ಮನೆಗೆಲಸದಲ್ಲೇ ತಲ್ಲೀನರಾಗಿರುವ ಮಹಿಳೆಯರಲ್ಲಿ ಫಿಟ್ ನೆಸ್ ಬಗ್ಗೆ ಜಾಗೃತಿ ಮೂಡುವುದಾದರೂ ಯಾವಾಗ? ಈ ಹಿನ್ನೆಲೆಯಲ್ಲಿ ಆಗಸ್ಟ್ 12 ರಂದು ಮಂಗಳೂರಿನಲ್ಲಿ ಸೀರೆಯುಟ್ಟ ನಾರಿಯರಿಗಾಗಿ ಓಟ – ನಡಿಗೆ ಹಮ್ಮಿಕೊಳ್ಳಲಾಗಿದೆ. ಮಂಗಳೂರು ಮಹಿಳಾ ರನ್ […]

ರಿಯೋ ಒಲಿಂಪಿಕ್ಸ್‌ಗೆ ಆಳ್ವಾಸ್ ಕಾಲೇಜಿನ ಕ್ರೀಡಾಪಟು ಧರುಣ್ ಅಯ್ಯ ಸ್ವಾಮಿ ಆಯ್ಕೆ

Wednesday, July 27th, 2016
Alwas Student

ಮಂಗಳೂರು: ಆಗಸ್ಟ್ 5ರಿಂದ ಆರಂಭಗೊಳ್ಳಲಿರುವ ರಿಯೋ ಒಲಿಂಪಿಕ್ಸ್‌ಗೆ ಆಳ್ವಾಸ್ ಕಾಲೇಜಿನ ಕ್ರೀಡಾಪಟು ಧರುಣ್ ಅಯ್ಯ ಸ್ವಾಮಿ ಅರ್ಹತೆ ಪಡೆದಿದ್ದಾರೆ. 4X400 ಮೀಟರ್ ರಿಲೇಯಲ್ಲಿ ಸ್ಪರ್ಧಿಸಲು ಭಾರತ ತಂಡವನ್ನು ಪ್ರತಿನಿಧಿಸಲಿರುವ 6 ಆಟಗಾರರ ಪೈಕಿ ಧರುಣ್ ಕೂಡಾ ಒಬ್ಬ. ಕಳೆದ ವರ್ಷದ ಅಖಿಲ ಭಾರತ ಅಥ್ಲೆಟಿಕ್ಸ್‌‌‌‌‌‌‌‌‌‌‌‌‌ 400 ಮೀಟರ್ ಓಟದಲ್ಲಿ ಚಿನ್ನ, ಹರ್ಡಲ್ಸ್‌‌‌‌‌‌‌‌‌‌‌‌‌‌‌‌‌‌‌‌‌ನಲ್ಲಿ ಕೂಟ ದಾಖಲೆ ಮತ್ತು ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ. 400 ಮೀಟರ್ ಓಟವನ್ನು 46.31 ಸೆಕೆಂಡ್‌‌ನಲ್ಲಿ ಗುರಿ ಮುಟ್ಟಿರುವುದು ಧರುಣ್ ಸಾಧನೆಯಾಗಿದೆ. ಮೂಲತ: ತಮಿಳುನಾಡಿನವರಾದ […]

ಅನಂತಪದ್ಮನಾಭ ಉಪಾಧ್ಯಾಯ ಸಂಸ್ಮರಣಾ ಸಮಾರಂಭ

Friday, February 5th, 2016
Kollangana

ಬದಿಯಡ್ಕ: ಬ್ರಹ್ಮಶ್ರೀ ತಂತ್ರ ವಿದ್ಯಾತಿಲಕ ತಂತ್ರಿ ಅನಂತಪದ್ಮನಾಭ ಉಪಾಧ್ಯಾಯ ಕೊಲ್ಲಂಗಾನ ಅವರ ೧೨ನೇ ಸಂಸ್ಮರಣಾ ಸಮಾರಂಭವು ಮಂಗಳವಾರ ರಾತ್ರಿ ನೀರ್ಚಾಲು ಬಳಿಯ ಕೊಲ್ಲಂಗಾನ ಶ್ರೀನಿಲಯದಲ್ಲಿ ಜರಗಿತು. ಯಕ್ಷಗಾನ ಕಲಾವಿದ ರವಿ ಅಲೆವೂರಾಯ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಂತ್ರಿವರ್ಯ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಸಹಿತ ಹಲವಾರು ಮಂದಿ ಪ್ರಮುಖರು ಭಾಗವಹಿಸಿದ್ದರು. ಇದೇ ವೇಳೆ ಬ್ರಹ್ಮಶ್ರೀ ವೇದಮೂರ್ತಿ ಚಂದ್ರಶೇಖರ ಭಟ್ ಕುರೋಮೂಲೆ ಕರೋಪಾಡಿ ಅವರನ್ನು ಗೌರವಿಸಲಾಯಿತು.