ಪಾಕಿಸ್ತಾನದ ಪೇಶಾವರದಲ್ಲಿರುವ ಐತಿಹಾಸಿಕ ಚರ್ಚ್ ಮೇಲೆ ದಾಳಿ 70ಕ್ಕೂ ಹೆಚ್ಹು ಸಾವು, ನೂರಕ್ಕೂ ಅಧಿಕ ಗಾಯ
Monday, September 23rd, 2013ಪೇಶಾವರ: ಇಬ್ಬರು ಆತ್ಮಾಹುತಿ ಬಾಂಬರ್ಗಳು ಪಾಕಿಸ್ತಾನದ ಪೇಶಾವರದಲ್ಲಿರುವ ಐತಿಹಾಸಿಕ ಚರ್ಚ್ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಟ 70 ಜನರು ಸಾವಿಗೀಡಾಗಿರುವ ಶಂಕೆಯಿದ್ದು, ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪಾಕ್ ಇತಿಹಾಸ ದಲ್ಲೇ ಅಲ್ಪಸಂಖ್ಯಾತ ಕ್ರೈಸ್ತರ ಪ್ರಾರ್ಥನಾ ಮಂದಿರದ ಮೇಲೆ ನಡೆದ ಅತ್ಯಂತ ಘೋರ ದಾಳಿ ಇದಾಗಿದೆ. ಪೇಶಾವರದ ಕೊಹಟಿ ಗೇಟ್ ಪ್ರದೇಶದಲ್ಲಿರುವ ಆಲ್ ಸೈಂಟ್ ಚರ್ಚ್ನಲ್ಲಿ ನೀಡಲಾಗುತ್ತಿದ್ದ ಮಧ್ಯಾಹ್ನದ ಊಟಕ್ಕೆಂದು ಸುಮಾರು 600ರಷ್ಟು ಜನರು ಸೇರಿದ್ದರು. ಈ ಸಂದರ್ಭ ಪೊಲೀಸ್ ವಸ್ತ್ರ ಧರಿಸಿ ಪ್ರವೇಶ ಮಾಡಿದ ಬಾಂಬರ್ಗಳು […]