ಮಾಟ-ಮಂತ್ರಕ್ಕೆ ಬಳಸಿದ್ದ ತೆಂಗಿನಕಾಯಿ, ಬಾಳೆಹಣ್ಣು ತಿಂದು ಯುವಕರ ಚಾಲೆಂಜ್..!

Saturday, October 13th, 2018
belagavi

ಬೆಳಗಾವಿ: ಮಾಟ-ಮಂತ್ರಕ್ಕೆ ಬಳಸಿದ್ದ ತೆಂಗಿನಕಾಯಿ, ಬಾಳೆಹಣ್ಣು ಸೇವಿಸುವ ಮೂಲಕ ಬೆಳಗಾವಿಯ ಈ ಯುವಕರು ಮೌಢ್ಯಕ್ಕೆ ಸೆಡ್ಡು ಹೊಡೆದು ಗಮನ ಸೆಳೆದಿದ್ದಾರೆ. ಖಾನಾಪುರ ಪಟ್ಟಣದ ಯುವಕರು ಇಂದು ಬೆಳಗ್ಗೆ ವಾಯು ವಿಹಾರಕ್ಕೆ ಹೋದಾಗ ಕಣ್ಣಿಗೆ ಕಂಡಿರುವ ಮಾಟ-ಮಂತ್ರಕ್ಕೆ ಬಳಸಿದ್ದ ಬಾಳೆ ಹಣ್ಣು, ತೆಂಗಿನಕಾಯಿ ಸೇವಿಸಿದ್ದಾರೆ. ನಿನ್ನೆ ಮಹಾನವಮಿ ಅಮವಾಸ್ಯೆ ಆದ ಕಾರಣ ಖಾನಾಪುರ ಪಟ್ಟಣದ ನಿಟ್ಟೂರು ಕ್ರಾಸ್ ಬಳಿ ಮಾಟ-ಮಂತ್ರ ಮಾಡಿಸಲಾಗಿತ್ತು. ಮಾಟ-ಮಂತ್ರಕ್ಕೆ ತೆಂಗು, ಬಾಳೆಹಣ್ಣು, ಗಡಿಗೆ, ನಿಂಬೆಹಣ್ಣು ಸೇರಿದಂತೆ ಇನ್ನಿತರ ವಸ್ತು ಬಳಸಿದ್ದರು. ಮಾಟಕ್ಕೆ ಬಳಸಿದ್ದ ಬಾಳೆ, […]

ಖಾನಾಪುರ ಬಳಿ ಭಾರಿ ಮಳೆಗೆ ಕೊಚ್ಚಿಹೋಯ್ತು ಸೇತುವೆ

Monday, July 16th, 2018
bridge-collapsed

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಸೇತುವೆಯೊಂದು‌ ಕೊಚ್ಚಿ ಹೋಗಿದೆ. ಇದರಿಂದ ಹಲವು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ. ಖಾನಾಪುರ ತಾಲೂಕಿನ ಹಲ್ತರಾ ನಾಲೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಖಾನಾಪುರ ಹಾಗೂ ಶಿರೋಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ನಿರ್ಮಿಸಲಾಗಿತ್ತು‌. ಕಳೆದ ಐದು ವರ್ಷಗಳಲ್ಲಿ ‌ಮೂರು ಸಲ ಈ ಸೇತುವೆ ಕೊಚ್ಚಿ ಹೋಗಿದ್ದು, ಕಾಮಗಾರಿ‌ ಗುಣಮಟ್ಟದ ಕುರಿತು ಗ್ರಾಮಸ್ಥರು ಅನುಮಾನ‌ ವ್ಯಕ್ತಪಡಿಸಿದ್ದಾರೆ.