ಬಸ್ಸಿನ ಕನಿಷ್ಠ ದರ 2 ರೂ ಏರಿಕೆ, ಇಂದಿನಿಂದ ಖಾಸಗಿ ಬಸ್ಸುಗಳ ಸಂಚಾರ ಆರಂಭ

Thursday, July 1st, 2021
Private Bus

ಮಂಗಳೂರು :  ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಸುಮಾರು 2 ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ಸುಗಳ ಸಂಚಾರ ಗುರುವಾರ  ಆರಂಭಗೊಂಡಿದೆ. ಸರಕಾರಿ ಬಸ್ಸುಗಳ ಜತೆಗೆ ಗುರುವಾರ ದಿಂದ ಕೆಲವು ಖಾಸಗಿ ಬಸ್ಸುಗಳೂ ರಸ್ತೆಗಿಳಿದಿವೆ. ಆದರೆ ಕೆಲವು  ಬಸ್ಸುಗಳಲ್ಲಿ ಬೆರಳೆಣಿಕೆಯ ಪ್ರಯಾಣಿಕರಿದ್ದರೆ, ಮತ್ತೆ ಕೆಲವು ಬಸ್ಸುಗಳ ಆಸನಗಳು ಭರ್ತಿಗೊಂಡು ಸಂಚರಿಸುತ್ತಿವೆ. ಡೀಸೆಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಬಸ್ಸು ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘ ಹೇಳಿದ್ದು, ಬಸ್ಸಿನ ಕನಿಷ್ಠ ದರವನ್ನು […]

ಮಂಗಳಾದೇವಿ ಸಮೀಪದ ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಗೆ ಕಿಡಿಗೇಡಿಗಳಿಂದ ಬೆಂಕಿ

Tuesday, May 18th, 2021
Bus Rajalakshmi

ಮಂಗಳೂರು : ನಗರದ ಮಂಗಳಾದೇವಿ ದೇವಸ್ಥಾನದ ಬಳಿಯ ಪೆಟ್ರೋಲ್ ಪಂಪ್ ಎದುರುಗಡೆ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ಸೋಮವಾರ ತಡರಾತ್ರಿ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಮಂಗಳೂರು- ಸುರತ್ಕಲ್ ಸಂಚಾರ ನಡೆಸುತ್ತಿದ್ದ ರೂಟ್ ನಂಬ್ರ 15ರ  ರಾಜಲಕ್ಷ್ಮಿ ಹೆಸರಿನ ಖಾಸಗಿ  ಬಸ್ಸು ಬೆಂಕಿಗಾಹುತಿಯಾಗಿದೆ. ಬಸ್ಸನ್ನು ಇತ್ತೀಚೆಗೆ ಲಾಕ್ಡೌನ್ ಘೋಷಣೆಯಾದ ಬಳಿಕ  ಒಂದೇ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಅಲ್ಲಿ ಅದೇ ಸಂಸ್ಥೆಗೆ ಸೇರಿದ ಇತರ ಮೂರ್ನಾಲ್ಕು ಬಸ್ ಗಳು ನಿಂತಿದ್ದವು. ಆದರೆ, ಒಂದು ಬಸ್ ಮಾತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಘಟನೆ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು […]

ಜಿಲ್ಲಾಡಳಿತ ಸೂಚನೆಯ ಮೇರೆಗೆ ಮಾ.31ರವರೆಗೆ ಖಾಸಗಿ ಬಸ್ಸುಗಳ ಸೇವೆ ಸ್ಥಗಿತ

Sunday, March 22nd, 2020
Bus

ಮಂಗಳೂರು : ಸರ್ಕಾರದ ಆದೇಶದಂತೆ ಕೊರೊನಾ ವೈರಸ್ ಎದುರಿಸುವ ನಿಟ್ಟಿನಲ್ಲಿ ಮಾ.31ರವರೆಗೆ ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಸೇವೆ ಇರುವುದಿಲ್ಲ ಎಂದು ಬಸ್ಸು ಮಾಲಕರ ಸಂಘದ ಪ್ರಕಟಣೆ ತಿಳಿಸಿದೆ. ಈ ಕ್ರಮ ಜಿಲ್ಲಾಡಳಿತ ಸೂಚನೆಯ ಮೇರೆಗೆ ಜರುಗಿಸಲಾಗಿದೆ. ಬಸ್‌ ಸಂಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು  ಪ್ರಕಟಣೆ  ಹೇಳಿದೆ.

ಮಂಗಳೂರು ನಾಗರೀಕರ ಸುಖಕರ ಪ್ರಯಾಣಕ್ಕೆ ಕೆಎಸ್ಅರ್ ಟಿಸಿ ಬಸ್ಸುಗಳು

Thursday, January 6th, 2011
ಸುಬೋಧ್ ಯಾದವ್

ಮಂಗಳೂರು ಜ 6 : ಖಾಸಗಿ ಬಸ್ಸುಗಳ ಮೇಲಾಟದಿಂದ ಮಂಗಳೂರು ನಾಗರೀಕರಿಗೆ ಪ್ರಯಾಣ ಪ್ರಯಾಸವಾಗಿದ್ದು,ಇದರಿಂದ ಮುಕ್ತಿ ಹೊಂದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನಗರ ಸಾರಿಗೆ ಬಸ್ಗಳನ್ನು ಓಡಿಸಲು ಪರವಾನಗಿ ನೀಡುವಂತೆ  ಕೆಎಸ್ಆರ್ಟಿಸಿ ಕಾನೂನು ಅಧಿಕಾರಿ ರಾಜೇಶ್ ಶೆಟ್ಟಿ ಅವರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ಸುಬೋಧ್ ಯಾದವ್ ಅವರನ್ನು ಕೋರಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯವನ್ನು ಪ್ರಾಧಿಕಾರದ […]