ಡೆಂಗ್ಯೂ ಮಹಾಮಾರಿಗೆ ಜಪ್ಪು ಪಟ್ಣದ ವ್ಯಕ್ತಿ ಬಲಿ
Wednesday, August 14th, 2019ಮಂಗಳೂರು : ಡೆಂಗ್ಯೂ ಮಹಾಮಾರಿ ಬಲಿಪಡೆಯುವುದನ್ನು ಮುಂದುವರಿಸಿದ್ದು ಜಪ್ಪು ಪಟ್ಣದ ಯುವಕನೋರ್ವ ಡೆಂಗ್ ಜ್ವರಕ್ಕೆ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ವರದಿಯಾಗಿದ್ದು, ದ.ಕ. ಜಿಲ್ಲೆಯಲ್ಲಿ ಶಂಕಿತ ಡೆಂಗ್ ಜ್ವರಕ್ಕೆ ಬಲಿಯಾದವರ ಸಂಖ್ಯೆ 10ರ ಗಡಿ ದಾಟಿದೆ. ನಗರದ ಜಪ್ಪು ಪಟ್ಣ ನಿವಾಸಿ ಗಣೇಶ್ ಕರ್ಕೆರ (35) ಮೃತ ಯುವಕ. ಜ್ವರದ ಹಿನ್ನೆಲೆಯಲ್ಲಿ ಆ.13ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಗಣೇಶ್ ಸಾವಿಗೆ ಡೆಂಗ್ ಜ್ವರ ಕಾರಣ ಎಂದು ಖಾಸಗಿ ಆಸ್ಪತ್ರೆಯ […]