ಬಂದರಿಗೆ ಮೀನುಗಾರಿಕೆ ಅಪರ ನಿರ್ದೇಶಕರ ಅನಿರೀಕ್ಷಿತ ಭೇಟಿ

Friday, October 1st, 2021
Port

ಮಂಗಳೂರು : ಉಡುಪಿ ಜಿಲ್ಲೆಯ ಮೀನುಗಾರಿಕಾ ಅಪರ ನಿರ್ದೇಶಕ ಡಿ. ತಿಪ್ಪೆಸ್ವಾಮಿ ಅವರು ಅ.1ರ ಶುಕ್ರವಾರ ಮಂಗಳೂರಿನ ಮೀನುಗಾರಿಕೆ ಬಂದರಿಗೆ ಅನಿರೀಕ್ಷಿತ ಭೇಟಿ, ಅನಧಿಕೃತ ಚಿಲ್ಲರೆ ಮೀನು ಮಾರಾಟ ಚಟುವಟಿಕೆಯನ್ನು ಕೂಡಲೇ ತೆರವುಗೊಳಿಸುವಂತೆ ಚಿಲ್ಲರೆ ಮೀನು ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು. ಬಂದರಿನಲ್ಲಿ ರೀತಿಯ ಚಿಲ್ಲರೆ ಮೀನು ಮಾರಾಟ ಕ್ರಮ ಮುಂದುವರೆಸಿದ್ದಲ್ಲೀ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದೆಂದು ಸ್ಥಳದಲ್ಲಿ ಮೀನು ವ್ಯಾಪಾರಸ್ಥರಿಗೆ ಸೂಚಿಸಿದರು. ಸ್ಥಳೀಯ ಮೀನುಗಾರಿಕೆ ಇಲಾಖಾ ಅಧಿಕಾರಿಗಳು ಹಾಗೂ ಮಂಗಳೂರು ಮೀನುಗಾರಿಕೆ ಬಂದರಿನ ಸಮಗ್ರ ನಿರ್ವಹಣೆಯ ಗುತ್ತಿಗೆದಾರರು […]

ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸಿದರೆ ಅಂತಹವರ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು: ಜಗದೀಶ್

Monday, October 3rd, 2016
jagadeesh

ಮಂಗಳೂರು: ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸಿದರೆ ಅಂತಹವರ ಪರವಾನಗಿಯನ್ನು ಅಮಾನತುಗೊಳಿಸುವುದಾಗಿ ಜಿಲ್ಲಾಧಿಕಾರಿ ಡಾ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಮರಳುಗಾರಿಕೆಗೆ ಮತ್ತೆ ಅನುಮತಿ ನೀಡಿದ್ದಾರೆಂಬ ಶಂಕೆಗೆ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ ಅವರು, ಪರವಾನಗಿ ನಿಯಮದಂತೆ ಮರಳುಗಾರಿಕೆ ನಡೆಸುವ ಬಗ್ಗೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೆ. ಆಗ ಕೆಲವು ಮಂದಿ ನಿಯಮದಲ್ಲಿ ವಿನಾಯ್ತಿ ನೀಡುವಂತೆ ಆಗ್ರಹಿಸಿದ್ದರು. ಆದರೆ ಅದಕ್ಕೆ ಒಪ್ಪದ ಕಾರಣ, ಎಲ್ಲ ಷರತ್ತುಗಳಿಗೆ ಬದ್ಧವಾಗಿರುತ್ತೇವೆ ಎಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಷರತ್ತು ಮೀರದಂತೆ ಮರಳುಗಾರಿಕೆ ನಡೆಸುವಂತೆ ಸೂಚಿಸಲಾಗಿದೆ ಎಂದು […]