ವ್ಯಾಪಾರ ಮಾಡಲು ಕಾರ್ಡ್‌ ಇದ್ದರೂ, ಫುಟ್‌ಪಾತ್‌ ಗೂಡಂಗಡಿಗಳನ್ನು ತೆರವುಗೊಳಿಸಿದ ಪಾಲಿಕೆ

Thursday, December 23rd, 2021
petty-shop

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಗುರುವಾರ ಆರಂಭವಾಗಿದೆ. ಮೇಯರ್‌ ಹಾಗೂ ಆಯುಕ್ತರ ಸೂಚನೆಯಂತೆ ಕಂದಾಯ, ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ ಸ್ಟೇಟ್‌ಬ್ಯಾಂಕ್‌ ಭಾಗದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಮುಂದಕ್ಕೆ ಸೆಂಟ್ರಲ್‌ ಮಾರುಕಟ್ಟೆ, ಕಂಕನಾಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ. ಕಾರ್ಯಾಚರಣೆಗೆ ವ್ಯಾಪಾರಿಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ತಮ್ಮ ಬಳಿ ಬೀದಿಬದಿ ವ್ಯಾಪಾರ ಮಾಡಲು ಪಾಲಿಕೆ ನೀಡಿರುವ ಕಾರ್ಡ್‌ […]

ರಾಷ್ಟ್ರೀಯ ಹೆದ್ದಾರಿ ಬಳಿ ಮೀನು ಮಾರಾಟದ ಗೂಡಂಗಡಿಗೆ ಬೆಂಕಿ

Monday, August 23rd, 2021
fish-Shop

ಉಪ್ಪಿನಂಗಡಿ : ಮೀನು ಮಾರಾಟದ ಗೂಡಂಗಡಿಯೊಂದು ರಾಷ್ಟ್ರೀಯ ಹೆದ್ದಾರಿ ಬಳಿ ರವಿವಾರ ತಡರಾತ್ರಿ ಬೆಂಕಿಗಾಹುತಿಯಾಗಿದ್ದು, ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಹಳೆಗೇಟು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಅಶೋಕ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದೆ. ಘಟನೆಯಿಂದ ಮೀನಿನ ಅಂಗಡಿ ಹಾಗೂ ಮಂಜುಗಡ್ಡೆ ಹಾಕಿ ಶೇಖರಿಸಿಟ್ಟಿದ್ದ ಮೀನು ಸುಟ್ಟು ಹೋಗಿವೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಗ್ಗೆ ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರ […]

ಸರಕಾರಿ ಜಾಗದಲ್ಲಿ ಮೀನು ಮಾರುತ್ತಿದ್ದ ಗೂಡಂಗಡಿಗಳ ತೆರವು

Saturday, July 10th, 2021
Petty Shop

ಉಡುಪಿ : ಸರಕಾರಿ ಜಾಗದಲ್ಲಿ ಮೀನು ಮಾರುತ್ತಿದ್ದ ಗೂಡಂಗಡಿಗಳನ್ನು ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ್ದಾರೆ. ನಗರಸಭೆಯ ಅಧಿಕಾರಿಗಳು ನಗರದ ಪೋಲಿಸರ ನೇತೃತ್ವದಲ್ಲಿ ಬ್ರಹ್ಮಗಿರಿ ಸರ್ಕಲ್ ಸುತ್ತಮುತ್ತಲಿನ ಒಟ್ಟು ಐದು ಅಂಗಡಿಗಳನ್ನು ತೆರವು ಮಾಡಿದ್ದಾರೆ. ಯಾವುದೇ ನೋಟೀಸ್ ನೀಡದೆ ಏಕಾಏಕಿ ತೆರವುಗೊಳಿಸಿರುವುದಕ್ಕೆಅಂಗಡಿ ಮಾಲಕರಾದ ಅಶೋಕ್ ರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ಗೂಡಂಗಡಿ ಸಾಗಿಸುವ ವಾಹನದಡಿ ಮಲಗಿ ಪ್ರತಿಭಟಿಸಿದರು.   ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ರಾಜ್, […]

ತನ್ನ ಗೂಡಂಗಡಿಗೆ ತಾನೇ ಬೆಂಕಿ ಹಚ್ಚಿಕೊಂಡ ಮಾಲೀಕ

Tuesday, September 8th, 2020
petty Shop

ಪುತ್ತೂರು : ತನ್ನ ಗೂಡಂಗಡಿಗೆ ತಾನೇ ಬೆಂಕಿ ಹಚ್ಚಿಕೊಂಡು ನಂದಿಸಲು ಬಂದವರನ್ನು ಬಿಡದೆ  ಅಂಗಡಿಯೊಳಗಿನ ಸಾಮಗ್ರಿಗಳನ್ನು ಸುಟ್ಟು ಭಸ್ಮ ಮಾಡಿದ ಘಟನೆ ಇಲ್ಲಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪಂಚೋಡಿ ಮಾವಿನಕಟ್ಟೆ ಎಂಬಲ್ಲಿ ಸೋಮವಾರ ನಡೆದಿದೆ. ಸ್ಟೇಶನರಿ ಸಾಮಗ್ರಿ ಮತ್ತು ಚಹಾ ಹೊಂದಿರುವ ಸಣ್ಣ ಕ್ಯಾಂಟೀನ್ ಗೆ  ಮಾವಿನಕಟ್ಟೆ ನಿವಾಸಿ ಮಹಮ್ಮದ್ ಬೆಂಕಿ ಹಚ್ಚಿದವರು. ಕಳೆದ ನಾಲ್ಕು ವರ್ಷಗಳಿಂದ ಇದೇ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಎಂದಿನಂತೆ ಮಹಮ್ಮದ್, ಅಂಗಡಿ ಬಾಗಿಲು […]

ಆ್ಯಂಬುಲೆನ್ಸ್ ಚಾಲಕರು ಕೊರೊನಾ ಹೊತ್ತುಕೊಂಡು ಸುತ್ತಾಡುವರು, ಈ ಗೂಡಂಗಡಿಗೆ ಬಂದರೆ ಏನು ಸಿಗಲ್ಲ

Wednesday, June 10th, 2020
Ambulence

ಮಂಗಳೂರು : ಸುಳ್ಯದಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಚಾಲಕನಿಗೆ ನೀರು ನೀಡದೆ ಅವಮಾನಿನಿಂದ ಘಟನೆ ಮಂಗಳೂರಿನ ಪಲ್ನೀರ್  ರಸ್ತೆಯಲ್ಲಿ ನಡೆದಿದೆ. ಅಭಿಲಾಷ್ ಎನ್ನುವ ಅಂಬ್ಯುಲೆನ್ಸ್ ಡೈವರ್ ಸುಳ್ಯದಿಂದ ರೋಗಿಯೊಬ್ಬರನ್ನು ಬೆಳಗ್ಗಿನ ಜಾವ 4.30 ರ ವೇಳೆಗೆ ವೆನ್ ಲಾಕ್ ಆಸ್ಪತ್ರೆಗೆ ಕರೆತಂದಿದ್ದರು, ಅಂಬ್ಯುಲೆನ್ಸ್ ನಲ್ಲಿದ್ದ ರೋಗಿಯ ಸಂಬಂಧಿಕರೊಬ್ಬರಿಗೆ ಬಾಯಾರಿಕೆಯಾದ ಹಿನ್ನಲೆ ಮೋತಿಮಹಲ್ ಎದುರುಗಡೆ ಇರುವ ಜನಧ್ವನಿ ಕೇಂದ್ರದ ಗೂಂಡಂಗಡಿಯಲ್ಲಿ ನೀರು ಕೇಳಿದ್ದರು. ಆ್ಯಂಬುಲೆನ್ಸ್ ಚಾಲಕರು ನಮ್ಮ ಅಂಗಡಿಗೆ ಬರವುದು ಬೇಡ,  ಕೊರೊನಾ ವಾರಿಯರ್ ಈ ಗೂಡ ಅಂಗಡಿಗೆ ಬಂದರೆ ಏನು […]

ಪಾಲಿಕೆಯಿಂದ ಅನಧಿಕೃತ ಗೂಡಂಗಡಿ ಬೀದಿಬದಿ ವ್ಯಾಪಾರಿಗಳ ತೆರವು

Wednesday, August 1st, 2018
petty-shop

ಮಂಗಳೂರು  : ಪೊಲೀಸ್‌ ಭದ್ರತೆಯ ಜತೆಗೆ ಹಾಗೂ ಪಾಲಿಕೆ ಅಧಿಕಾರಿಗಳು ಮನಪಾ ಸಿಬಂದಿಗಳು  ಸ್ಟೇಟ್‌ ಬ್ಯಾಂಕ್‌, ಲೇಡಿಗೋಷನ್‌, ಸರ್ವೀಸ್‌ ಬಸ್‌ ನಿಲ್ದಾಣ ಹಾಗೂ ಸೆಂಟ್ರಲ್‌ ಮಾರ್ಕೆಟ್‌ ಸಮೀಪದಲ್ಲಿ ಅನಧೀಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ನಡೆಯಿತು. ಬೀದಿಬದಿ ವ್ಯಾಪಾರ ನಡೆಸುವವರನ್ನು ತೆರವು ಮಾಡುವಂತೆ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ವ್ಯಾಪಕ ಆಗ್ರಹ ವ್ಯಕ್ತವಾಗಿತ್ತು. ಈ ಸಂಬಂಧ ಸ್ಟೇಟ್‌ಬ್ಯಾಂಕ್‌ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಲಾಯಿತು. ಪಾಲಿಕೆ ಕಂದಾಯ ಇಲಾಖೆ ವತಿಯಿಂದ ಪೊಲೀಸ್‌ ಭದ್ರತೆಯ ಜತೆಗೆ ಹಾಗೂ ಪಾಲಿಕೆ […]

ಸ್ವಚ್ಚ ತೊಕ್ಕೊಟ್ಟಿನ ಪರಿಕಲ್ಪನೆಗೆ ರಸ್ತೆ ಬದಿಯಲ್ಲಿದ್ದ ಗೂಡಂಗಡಿ ತೆರವು

Saturday, June 17th, 2017
Swacha Thokkottu

ಉಳ್ಳಾಲ :  ತೊಕ್ಕೊಟ್ಟು ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳನ್ನು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೌರಾಯುಕ್ತರ ಆದೇಶದ ಮೇರೆಗೆ ಉಳ್ಳಾಲ ನಗರ ಸಭಾ ವತಿಯಿಂದ ಶನಿವಾರ ತೆರವುಗೊಳಿಸಲಾಯಿತು. ಸ್ವಚ್ಚ ತೊಕ್ಕೊಟ್ಟಿನ ಪರಿಕಲ್ಪನೆಗೆ ಉಳ್ಳಾಲ ನಗರ ಸಭೆಯೊಂದಿಗೆ ಎಲ್ಲಾ ನಾಗರಿಕರು ಕೈ ಜೋಡಿಸಿ ಎಂದು ಉಳ್ಳಾಲ ನಗರ ಸಭೆ ಆಯುಕ್ತೆ ವಾಣಿ ಆಳ್ವ ಈ ಸಂದರ್ಭದಲ್ಲಿ ತಿಳಿಸಿದರು. ಸಿಯಾಳದ ಗೆರಟೆಯಲ್ಲಿ ಮಳೆಯ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ಆರೋಗ್ಯ ಇಲಾಖೆ ಈ ಹಿಂದೆ ಎಚ್ಚರಿಸಿದರೂ ಪ್ರಯೋಜನ ವಾಗಿಲ್ಲ ಈ […]

ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆ 8 ಗೂಡಂಗಡಿಗಳ ದ್ವಂಸ

Friday, March 13th, 2015
Deralakatte shops

ಉಳ್ಳಾಲ: ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆ ಕಾರ್ಯಾಚರಿಸುತ್ತಿದ್ದ 8 ಗೂಡಂಗಡಿಗಳನ್ನು ಶುಕ್ರವಾರ ಲೋಕೋಪಯೋಗಿ ಇಲಾಖೆ ತೊಕ್ಕೊಟ್ಟು-ಮೆಲ್ಕಾರ್ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ತೆರವುಗೊಳಿಸಿತು. ಮೂರು ಅಂಗವಿಕಲರ ಅಂಗಡಿ ಸೇರಿದಂತೆ ಒಟ್ಟು 8 ಅಂಗಡಿಗಳಿಗೆ 12 ದಿನಗಳ ಹಿಂದೆ ತೆರವು ಗೊಳಿಸಲು ಇಲಾಖೆ ನೋಟೀಸು ಜಾರಿಗೊಳಿಸಿತ್ತು. ಅದರಂತೆ ಶುಕ್ರವಾರ ತೆರವು ಕಾರ್ಯಾಚರಣೆ ನಡೆಯಿತು. ಅಗಲೀಕರಣ ಸಂದರ್ಭ ಇಲಾಖೆಯವರು ಬಡವರಿಗೊಂದು ನೀತಿ, ಶ್ರೀಮಂತರಿಗೊಂದು ನೀತಿ ಎಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಬದಲಿ ವ್ಯವಸ್ಥೆ ಮಾಡದೆ ಏಕಾಏಕಿ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿರುವುದರಿಂದ ಹೊಟ್ಟೆಪಾಡಿಗೆ […]