ಸರಕಾರಿ ಸ್ಥಳದಿಂದ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ; ಗ್ರಾಪಂ ಸದಸ್ಯ ಸಹಿತ ಮೂವರ ಬಂಧನ

Wednesday, January 20th, 2021
Wooden Log

ಸುಳ್ಯ : ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಿರಾಲ್‌ಬೋಗಿ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಮಾಡಿ ಇಟ್ಟಿರುವುದಲ್ಲದೆ, ಸೊತ್ತುಗಳನ್ನು ಸಾಗಾಟ ಮಾಡಿರುವ ಪ್ರಕರಣದಲ್ಲಿ  ಜಾಲ್ಸೂರು ಗ್ರಾಪಂ ಸದಸ್ಯ ಸಹಿತ ಮೂವರನ್ನು ಬಂಧಿಸಿರುವುದಾಗಿ ಪಂಜ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಜಾಲ್ಸೂರು ಗ್ರಾಪಂ ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ ಹಾಗೂ ಮುಹಮ್ಮದ್ ಸುಹೈಬ್ ದೇಲಂಪಾಡಿ ಮತ್ತು ಅಭಿಲಾಷ್ ಗೌಡ ಅರಕಲಗೂಡು ಬಂಧಿತ ಆರೋಪಿಗಳು. ಅಮರಮುಡ್ನೂರು ಗ್ರಾಮದ ದೊಡ್ಡಿಹಿತ್ಲು ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಿರಾಲ್‌ಬೋಗಿ ಶೇಖರಿಸಿಟ್ಟಿದ್ದ ಮರಗಳನ್ನು  ಪಂಜ ವಲಯಾರಣ್ಯಾಧಿಕಾರಿಗಳ ತಂಡ ಬೇಧಿಸಿ ಪ್ರಕರಣ ದಾಖಲಿಸಿದ್ದಾರೆ. […]

ಸ್ವಾತಂತ್ರ್ಯದ ಮರುದಿನ ರಾಷ್ಟ್ರ ಧ್ವಜವನ್ನು ತಲೆ ಕೆಳಗೆ ಮಾಡಿ ಹಾರಿಸಿ, ರಾತ್ರಿಯವರೆಗೂ ಇಳಿಸದೆ ಇದ್ದ ಮಣಿನಾಲ್ಕೂರು ಗ್ರಾಮ ಪಂಚಾಯತಿ

Monday, August 17th, 2020
Mani Nalkuru

ಬಂಟ್ವಾಳ : ರಾಷ್ಟ್ರ ಧ್ವಜವನ್ನು ತಲೆ ಕೆಳಗೆ ಮಾಡಿ ಹರಿಸಿದ್ದಲ್ಲದೆ ಮರುದಿನ ರಾತ್ರಿ  ಎಂಟು ಗಂಟೆಯ ವರೆಗೆ ಇರಿಸಿದ ಘಟನೆ ಬಂಟ್ವಾಳ ತಾಲೂಕಿನ  ಮಣಿನಾಲ್ಕೂರು ಗ್ರಾಮ ಪಂಚಾಯತಿಯಲ್ಲಿ  ನಡೆದಿದೆ. ಸ್ವಾತಂತ್ರ್ಯ ದಿನದ ಮರುದಿನ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಿ, ರಾತ್ರಿಯವರೆಗೂ  ಇಳಿಸದೆ ಇದ್ದಾಗ ಸ್ಥಳೀಯ ಸಂಘಟನೆಯ ಕಾರ್ಯಕರ್ತರು ಗ್ರಾಮೀಣ ಪೊಲೀಸ್ ಠಾಣೆಗೆ ಮೌಖಿಕವಾಗಿ ದೂರು ನೀಡಿದ್ದಾರೆ. ಆಗಸ್ಟ್ 16 ಆದಿತ್ಯ ವಾರ  ಬೆಳಿಗ್ಗೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಣಿನಾಲ್ಕೂರು ಗ್ರಾಮ ಪಂಚಾಯತಿಯಲ್ಲಿರಾಷ್ಟ್ರ ಧ್ವಜವನ್ನು ತಲೆ ಕೆಳಗಾಗಿ ಹಾರಿಸಲಾಗಿದೆ. ಹಾಗೆಯೇ ರಾತ್ರಿ 8 […]