ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವ ದಿಂದ ಬಸುರಿ ಹೆಂಗಸು ಸಾವು

Friday, October 16th, 2020
chandrakala

ಸುಳ್ಯ :  ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ  ದಾಖಲು ಮಾಡಲಾಗಿದ್ದ ಮಹಿಳೆಯೊಬ್ಬರು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವರದಿಯಾಗಿದೆ. ಹೆರಿಗೆ ವೇಳೆ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟ ಮಹಿಳೆಯನ್ನು ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ಅವರ ಪುತ್ರಿ ಚಂದ್ರಕಲಾ (25) ಎಂದು ಗುರುತಿಸಲಾಗಿದೆ. ಸುಳ್ಯ ತಾಲೂಕಿನ ಮರ್ಕಂಜದಿಂದ ಚಂದ್ರಕಲಾ  ಅವರನ್ನು ಎರಡು ವರ್ಷಗಳ ಹಿಂದೆ ಪುತ್ತೂರಿನ ಕಾವುಗೆ ಮದುವೆ ಮಾಡಿಕೊಡಲಾಗಿತ್ತು. ಚಂದ್ರಕಲಾ ಅವರನ್ನು  ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಸಲಾಗಿತ್ತು. ಅಲ್ಲಿ ಹೆರಿಗೆ ವೇಳೆ ರಕ್ತದೊತ್ತಡ ಕಡಿಮೆಯಾಗಿ ಮತ್ತು […]

ಕುರ್ಕಾಲು-ಮಣಿಪುರ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣ : ವಾಹನ ಸಂಚಾರ ಮುಕ್ತ

Wednesday, September 11th, 2019
Katapadi

ಕಟಪಾಡಿ : ವಾಹನ ಸಂಚಾರ ನಿಷೇಧಗೊಂಡಿದ್ದ ಕುರ್ಕಾಲು- ಮಣಿಪುರ ಸಂಪರ್ಕ ರಸ್ತೆಯ ಅಪಾಯಕಾರಿ ಪ್ರದೇಶದಲ್ಲಿ ತಾತ್ಕಾಲಿಕ ಕಾಮಗಾರಿ ನಿರ್ವಹಿಸಲಾಗಿದ್ದು, ಸೆ.8ರಿಂದ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಬೆಳ್ಮಣ್‌, ಶಿರ್ವ, ಶಂಕರಪುರ ಭಾಗದಿಂದ ಮಣಿಪುರ-ದೆಂದೂರುಕಟ್ಟೆ-ಅಲೆವೂರು ಮಣಿಪಾಲಕ್ಕೆ ಸಂಪರ್ಕವನ್ನು ಕಲ್ಪಿಸುವ ಹೆಚ್ಚು ಬಳಕೆಯಲ್ಲಿರುವ ಅತೀ ಶಾರ್ಟ್‌ ಕಟ್ ಆಗಿರುವ ಈ ರಸ್ತೆಯ ನಡುವೆ ಕುಸಿತ ಉಂಟಾಗಿ ಸೃಷ್ಟಿಯಾಗಿದ್ದ ಭಾರೀ ಗಾತ್ರದ ಕಂದಕ ಇದೀಗ ಮುಚ್ಚಲಾಗಿದೆ. ರಸ್ತೆಯನ್ನು ಅಗೆದಾಗ ಬೃಹತ್‌ ಗಾತ್ರದ ಮರದ ಬುಡವೊಂದು ಕಂಡು ಬಂದಿದ್ದು, ಅದರ ಸುತ್ತ ಮಣ್ಣು ಕುಸಿದು […]

ಪರಿಶಿಷ್ಟರ ಕುಂದುಕೊರತೆಗಳ ಅಹವಾಲು ಸ್ವೀಕಾರ

Thursday, February 1st, 2018
belthangady

ಬೆಳ್ತಂಗಡಿ : ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪ್ರಾದೇಶಿಕ ಕಚೇರಿ ಮಂಗಳೂರಿನ ಪೊಲೀಸ್‌ ಅಧೀಕ್ಷಕ ಸಿ.ಬಿ. ವೇದಮೂರ್ತಿ ಅವರು ಬುಧವಾರ ಬೆಳ್ತಂಗಡಿ ತಾಲೂಕು ಪ್ರವಾಸದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಕುಂದುಕೊರತೆಗಳ ಅಹವಾಲು ಸ್ವೀಕಾರ ನಡೆಸಿದರು. ಕೊಯ್ಯೂರಿನ ಪಿಜಕ್ಕಳದ ಪಿಜಕ್ಕರೆ ಎಂಬ ಮಹಿಳೆ ಪಕ್ಕದ ಜಾಗದ ಚನನ ಗೌಡ ಅವರು ದೌರ್ಜನ್ಯ ನಡೆಸುತ್ತಿದ್ದಾರೆ, ಕೋವಿ ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ, ಪೊಲೀಸರು ಬಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಎಸ್‌ಐ ಅವರಿಗೆ ಈ ಕುರಿತು ತನಿಖೆ […]