ಕುಕ್ಕೆ ಶ್ರೀ ಸುಬ್ರಹ್ಮಣ್ಯ ದಲ್ಲಿ ಸಂಭ್ರಮದ ಚಂಪಾಷ‌ಷ್ಠಿ- ಬ್ರಹ್ಮರಥೋತ್ಸವ

Monday, December 2nd, 2019
Kukke-shashti

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥದ ಸಮರ್ಪಣೆ ಸೋಮವಾರ ಬೆಳಗ್ಗೆ ನಡೆದಿದ್ದು 8.14ರ ಧನುರ್‌ ಲಗ್ನದ ಸುಮುಹೂರ್ತದಲ್ಲಿ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿಗಳನ್ನು ನೆರವೇರಿಸಿದರು. ಬಳಿಕ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಚಂಪಾಷ‌ಷ್ಠಿ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು. ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮರಥೋತ್ಸವ ಸೇವೆಗೆ 99 ಭಕ್ತರು ನೋಂದಾಯಿಸಿದ್ದರು. 400 ವರ್ಷಗಳ ಬಳಿಕ ದೇವರಿಗೆ ನೂತನ ಬ್ರಹ್ಮರಥದ ಸಮರ್ಪಣೆ ನಡೆದಿದ್ದು, ಭಕ್ತ ಜನ ಸಾಗರದ ನಡುವೆ ಸಂಭ್ರಮದಿಂದ ಚಂಪಾಷ‌ಷ್ಠಿ ಮಹಾರಥೋತ್ಸವ […]

ಕುಕ್ಕೆ:ಚಂಪಾಷಷ್ಠಿ ಸಾಂಗವಾಗಿ ನಡೆದ ಎಡೆಸ್ನಾನ ಸೇವೆ

Tuesday, December 15th, 2015
Ede Snana

ಸುಬ್ರಹಣ್ಯ: ಚಂಪಾಷಷ್ಠಿ ಜಾತ್ರ ದಿನವಾದ ಮಂಗಳವಾರ ಚೌತಿಯಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ 124 ಮಂದಿ ಎಡೆಸ್ನಾನ ಸೇವೆಗೈದರು. ದೇವಳದ ಪೂಜೆಯ ಬಳಿಕ ಪ್ರಸಾದವನ್ನು ಗೋವುಗಳಿಗೆ ತಿನ್ನಲು ಕೊಟ್ಟು ನಂತರ ಆ ಎಲೆಯ ಮೇಲೆ ಭಕ್ತರು ಹೊರಾಂಗಣದಲ್ಲಿ ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದರು. ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೆ.ಮೂ. ಎಸ್ ರಾಜಗೋಪಾಲ ಹಾಗೂ ಪಾಂಚರಾತ್ರ ಪಂಡಿತ ವೆ.ಮೂ. ವಿಜಯಕುಮಾರ್ ಅವರು ಸ್ಥಳದಲ್ಲಿದ್ದು ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು. ಮಧ್ಯಾಹ್ನ ಮಹಾಪೂಜೆ ಬಳಿಕ ದೇವಳದ […]

ಶ್ರೀ ಕ್ಷೇತ್ರ ಕುಡುಪುವಿನಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ

Wednesday, December 19th, 2012
Kudupu Temple

ಮಂಗಳೂರು :ಮಂಗಳವಾರ ಚಂಪಾಷಷ್ಠಿಯಂದು ಕರಾವಳಿಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಇಲ್ಲಿನ ಪ್ರಮುಖ ಕ್ಷೇತ್ರವಾದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಬ್ರಹ್ಮರಥೋತ್ಸವದ ಮೂಲಕ ನೆರವೇರಿತು. ಮಾರ್ಗಶಿರ ಮಾಸದ ಪಾಡ್ಯದಿಂದ ಪ್ರಾರಂಭವಾಗಿ ಪಂಚಮಿವರೆಗೆ ಕ್ಷೇತ್ರದ ಜಾತ್ರಾ ಮಹೋತ್ಸವ ಜರುಗಿತ್ತು. ಆರನೇ ದಿನವಾದ ಷಷ್ಠಿಯಂದು ಹಗಲು ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅನಂತಪದ್ಮನಾಭ, ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ಮೂವರು ಕೂಡಾ ಒಟ್ಟಾಗಿ ನೆಲೆಸಿರುವ ಅಪರೂಪದ ಕ್ಷೇತ್ರ ಇದಾಗಿದೆ. ದೇವಳ ದಕ್ಷಿಣಕ್ಕೆ ಪವಿತ್ರ ಭದ್ರಾ ಸರಸ್ವತಿ […]