ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ದರೋಡೆಗೆ ಸಂಚು: ಮೂವರ ಬಂಧನ

Saturday, February 17th, 2018
arrested

ಮಂಗಳೂರು: ಪಣಂಬೂರು ಕುದುರೆಮುಖ ಜಂಕ್ಷನ್ ಬಳಿ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಹಣ ಹಾಗೂ ಚಿನ್ನಾಭರಣ ದರೋಡೆಗೆ ಸಂಚು ರೂಪಿಸುತ್ತಿದ್ದ ತಂಡದ ಮೇಲೆ ಶುಕ್ರವಾರ ದಾಳಿ ಮಾಡಿರುವ ಪಣಂಬೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಡುಪಿ ಅಂಬಲಪಾಡಿಯ ಪ್ರದೀಪ್ ಕುಮಾರ್ ಯಾನೆ ಪ್ರದೀಪ್ ಮೆಂಡನ್ (47), ಕುದ್ರೋಳಿ ಬೆಂಗ್ರೆಯ ಸುನೀಲ್ (20), ಬೋಳಾರದ ಚರಣ್ (32) ಬಂಧಿತ ಆರೋಪಿಗಳು. ಭರತ್ ಮತ್ತು ನವೀನ್ ಎಂಬವರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ […]

ಜೈಲಿನಲ್ಲೇ ಹಫ್ತಾ ವಸೂಲಿ, 8 ಜನರ ಮೇಲೆ ಕೇಸು

Friday, January 26th, 2018
mangaluru-jail

ಮಂಗಳೂರು: ಜೈಲಿನಲ್ಲೇ ವಿಚಾರಣಾಧಿನ ಕೈದಿಗಳನ್ನು ಬೆದರಿಸಿ ಸಹ ಕೈದಿಗಳೇ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಘಟನೆ ಮಂಗಳೂರು ಕಾರಾಗೃಹ ದಲ್ಲಿ ಬೆಳಕಿಗೆ ಬಂದಿದೆ.ಕೆಆರ್‌ಐಡಿಎಲ್ ಸಂಸ್ಥೆಗೆ ವಂಚನೆ ಮಾಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಸಹ ಕೈದಿಗಳು ಜೀವ ಬೆದರಿಕೆ ಹಾಕಿ 15 ಲಕ್ಷ ವಸೂಲಿ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಈ ಸಂಬಂಧ ಎಂಟು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೆಆರ್‌ಐಡಿಎಲ್ ಸಂಸ್ಥೆಯಲ್ಲಿ ಕೆಲವು ತಿಂಗಳುಗಳ ಹಿಂದೆ 55 ಕೋಟಿ ರೂಪಾಯಿ ಅವ್ಯವಹಾರ ನಡೆದ […]