ಶ್ರೀ ಗಣೇಶನ ವಿಡಂಬನೆ ಮಾಡಿ ಅಥವಾ ಅದರ ಮೂಕಸಮ್ಮತಿ ಸೂಚಿಸಿ ಪಾಪದ ಪಾಲುದಾರರಾಗಬೇಡಿ !

Thursday, September 9th, 2021
Ganesha

ಮಂಗಳೂರು : ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಚಿತ್ರಕಾರರು ಮತ್ತು ಮೂರ್ತಿಕಾರರು ತಮ್ಮ ಕಲೆಯ ಮೂಲಕ ಶ್ರೀ ಗಣೇಶನ ಚಿತ್ರ ಮತ್ತು ಮೂರ್ತಿಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ಬಿಸ್ಕಿಟ್, ಬೆಣ್ಣೆ, ಕ್ಯಾಡ್‌ಬರಿ, ಜೆಮ್ಸ್, ಚಾಕಲೇಟ್, ಚಿಕ್ಕಿ, ಕುರ್‌ಕುರೆ, ಮಸಾಲೆ, ಹೂವು, ಮಣ್ಣಿನ ಹಣತೆಗಳು, ಚಾಕ್, ಪೆನ್ಸಿಲ್, ಪ್ಲಾಸ್ಟಿಕ್ ತಟ್ಟೆ, ಇತ್ಯಾದಿ ವಿವಿಧ ವಸ್ತುಗಳಿಂದ ಮಾಡಿದ ಗಣೇಶಮೂರ್ತಿ ಹಾಗೂ ಬಾಹುಬಲಿ ಚಲನಚಿತ್ರದ ನಾಯಕ ಶಿವಲಿಂಗವನ್ನು ಹೆಗಲ ಮೇಲಿಟ್ಟುಕೊಂಡು ನಿಂತಿರುವ, ಕ್ರಿಕೇಟ್ ಆಡುವ, ನರ್ತಿಸುವ, ಇತ್ಯಾದಿ ಆಕಾರಗಳ ಗಣೇಶಮೂರ್ತಿಗಳಿಂದಾಗಿ […]

ಮುಸ್ಲಿಂ ವ್ಯಾಪಾರಿಯಿಂದ ಮೋದಿ ಗೆಲುವಿಗೆ ಎಂಟು ಕೆ.ಜಿ. ಚಾಕಲೇಟ್‌ ವಿತರಣೆ

Friday, May 24th, 2019
Mohammed

ಕುಂದಾಪುರ : ಮೋದಿ ಅಭಿಮಾನಿ ವಕ್ವಾಡಿಯ ಗುಜರಿ ವ್ಯಾಪಾರಿ ಮುಹಮ್ಮದ್ ಸಾರ್ವಜನಿಕರಿಗೆ ಸುಮಾರು ಎಂಟು ಕೆ.ಜಿ. ಚಾಕಲೇಟ್‌ನ್ನು ವಿತರಣೆ ಮಾಡಿದ್ದಾರೆ. ಸ್ಥಳೀಯರಿಂದ ವಕ್ವಾಡಿಯ ಮೋದಿ ಎಂದೇ ಕರೆಯಲ್ಪಡುವ ಮುಹಮ್ಮದ್, ಕಳೆದ ಬಾರಿ ಮೋದಿ ಗೆಲುವು ಸಾಧಿಸಿದಾಗ ಸುಮಾರು ಐದು ಕೆ.ಜಿ.ಯಷ್ಟು ಚಾಕಲೇಟನ್ನು ವಿತರಿಸಿದ್ದಾರೆ. ಅನಾರೋಗ್ಯ ಪೀಡಿತರಾಗಿರುವ ಮುಹಮ್ಮದ್ ಮೋದಿ ಅಭಿಮಾನ ಮೆರೆದಿದ್ದಾರೆ.

ಚಾಕಲೇಟ್ ಆಮಿಷವೊಡ್ಡಿ ಮಕ್ಕಳ ಅಪಹರಣಕ್ಕೆ ಯತ್ನ: ತಪ್ಪಿಸಿಕೊಂಡ ಬಾಲಕ

Wednesday, November 23rd, 2016
child-kidnaping

ಮಂಗಳೂರು: 2 ದಿನಗಳ ಹಿಂದೆಯಷ್ಟೇ ಕಲಬುರಗಿಯನ್ನು ಬೆಚ್ಚಿ ಬೀಳಿಸುವ ರೀತಿ ಕಿಡ್ನಾಪ್‌ ಪ್ರಕರಣವೊಂದು ನಡೆದಿತ್ತು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದಿಂದ ಮಕ್ಕಳ ಅಪಹರಣಕಾರರ ಜಾಲವೊಂದು ಕರಾವಳಿ ಜಿಲ್ಲೆಯಾದ್ಯಂತ ಸುತ್ತಾಡುತ್ತಿದೆ ಎಂಬ ವಾಟ್ಸ್ಅಪ್ ಸಂದೇಶ ಜನರಲ್ಲಿ ಆತಂಕ ಮೂಡಿಸಿದ ಬೆನ್ನಲ್ಲೇ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಾಲಕನೊಬ್ಬ ಅಪಹರಣಕಾರರಿಂದ ತಪ್ಪಿಸಿಕೊಂಡು ಪಾರಾದ ಘಟನೆ ನಡೆದಿದೆ. ಕರಿಯಂಗಳ ಗ್ರಾಮದ ಸಾಣೂರು ನಿವಾಸಿ ವಾಮನ ಎಂಬುವರ ಮಗ ನಿಖಿಲ್ […]