‘ಕವಿಗಳ ಭಾವನೆಗಳನ್ನು ಅರಿಯುವ ಸಂಘಟರು ಬೇಕು’ : ಅಶೋಕ ಕಡೇಶಿವಾಲಯ

Tuesday, December 28th, 2021
Chutuku-Sahitya

ಮಂಗಳೂರು  : ‘ಕವಿಗಳ ಭಾವನೆಗಳನ್ನು ಅರಿತುಕೊಳ್ಳುವ ಸಂಘಟಕರು ವಿರಳ.ಗೋಷ್ಠಿಯಲ್ಲಿ ಕವಿಗಳಿಗೆ ಚುಟುಕು ಸಾಹಿತ್ಯ ಪರಿಷತ್ತು ನೀಡಿದ ಗೌರವ ಆದರಾತಿಥ್ಯಗಳು ಸಂತೋಷದಾಯಕವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ಪರಿಷತ್ತು ಮಾಡುತ್ತಿರುವ ನಿರಂತರ ಸೇವೆ ಅಮೋಘ ಮತ್ತು ಅಭಿನಂದನೀಯ. ಗೋಷ್ಠಿಯಲ್ಲಿ ಭಾಗವಹಿಸಿದ ಕವಿ ಕವಯತ್ರಿಯರು ಪ್ರಸ್ತುತ ಪಡಿಸಿದ ಬಹುಪ್ರಕಾರ ಮತ್ತು ಬಹು ವಿಷಯಗಳ ಕವಿತೆಗಳು ಮನೋಜ್ಞವಾಗಿದ್ದವು’ ಎಂದು ಕವಿ ಅಶೋಕ ಎನ್ ಕಡೇ ಶಿವಾಲಯ ಅವರು ಹೇಳಿದರು. ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು […]

ಎಂಟನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನದ ಬಿಡುಗಡೆ

Sunday, December 26th, 2021
chutuku Sahitya

ಮಂಗಳೂರು : ಜನವರಿ 30ರಂದು ಮಂಗಳೂರಿನ ತುಳು ಭವನದ ಸಿರಿ ಚಾವಡಿಯಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಂಯುಕ್ತವಾಗಿ ಆಯೋಜಿಸುತ್ತಿರುವ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಎಂಟನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನದ ಬಿಡುಗಡೆ ಸಮಾರಂಭ ಕೆನರಾ ಕಾಲೇಜಿನ ಸಭಾಂಗಣದಲ್ಲಿ  ಶನಿವಾರ ನಡೆಯಿತು. ಸಾಹಿತ್ಯ ಪೋಷಕ, ಸಂಘಟಕ ಗುರುಪ್ರಸಾದ್ ಕಡಂಬಾರ್ ಅವರು ಲಾಂಛನವನ್ನು […]

ಅಕ್ಟೋಬರ್ 12 : ಮಂಗಳೂರು ತಾಲೂಕು ಚುಸಾಪದಿಂದ ಇರುಳು ಬಹುಭಾಷಾ ಕವಿಗೋಷ್ಠಿ

Saturday, October 9th, 2021
JF D Souza

ಮಂಗಳೂರು : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಕ್ಟೋಬರ್ 12, ಮಂಗಳವಾರ ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿಯವರೆಗೆ ಕ್ಲಬ್ ಹೌಸ್ ನಲ್ಲಿ ಇರುಳು ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ. ಭಾರತ, ಅಮೇರಿಕಾ, ದುಬೈಗಳಿಂದ ಕವಿಗಳು ಭಾಗವಹಿಸುತ್ತಿದ್ದು ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ, ಬ್ಯಾರಿ,ಕೊಡವ, ಮಲಯಾಳಂ ಮೊದಲಾದ ಭಾಷೆಗಳಲ್ಲಿ ಕವನ ವಾಚನ ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಜೆ.ಎಫ್ ಡಿಸೋಜಾ ಅವರು ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ, […]

‘ಜಗತ್ತು ನಿಂತಿರುವುದೇ ಪ್ರೀತಿ ಪ್ರೇಮದ ಮೇಲೆ’ : ಸಾಹಿತಿ ರಘು ಇಡ್ಕಿದು

Sunday, October 3rd, 2021
Raghu Idkidu

ಮಂಗಳೂರು : ‘ಜಗತ್ತು ನಿಂತಿರುವುದೇ ಪ್ರೀತಿ ಪ್ರೇಮದ ಮೇಲೆ. ಮನುಷ್ಯರೊಳಗಿನ ಪ್ರೇಮ ಭಾವ ಹೊರಬಾರದೇ ಹೋದರೆ ಸಮಾಜದಲ್ಲಿ ದ್ವೇಷ ಅಸೂಯೆ ಮತ್ಸರ ಮನೆ ಮಾಡುತ್ತದೆ. ಹಾಗಾಗಿ ಪ್ರೇಮ ಕವಿತೆಗಳಿಗೂ ಮಹತ್ವವಿದೆ. ಇತ್ತೀಚಿನ ದಿನಗಳಲ್ಲಿ ಪ್ರೇಮ ಕವಿತೆಗಳನ್ನು ಬರೆಯುವ ಕವಿಗಳು ಕಡಿಮೆಯಾಗಿದ್ದಾರೆ. ಟೀಕೆಗಳು ಬರಬಹುದು ಎಂಬ ಕಾರಣಕ್ಕೆ ಕವಿಗಳು ಹಿಂಜರೆಯುತ್ತಿರಬಹುದು ಅಥವಾ ಸಮಾಜದ ದುಗುಡಗಳಿಂದಲೇ ಪ್ರೇಮ ಕವಿತೆಗಳು ಹುಟ್ಟದಿರಬಹುದು. ಕವಿಯಾದವನಿಗೆ ದೇಶ,ಭಾಷೆ,ಜಾತಿ,ಪಂಥ,ಕಾಲ ವಯಸ್ಸುಗಳೆಂಬ ಹಂಗುಗಳಿರುವುದಿಲ್ಲ. ಹಾಗಾಗಿ ಪ್ರೇಮ ಕವಿತೆಯನ್ನು ಯುವಕರೇ ಬರೆವಬೇಕೆಂದೇನಿಲ್ಲ ಆ ವಯಸ್ಸು ಮೀರಿದ ಮೇಲೂ ಬರೆಯಬಹುದು. […]

‘ತುಳುವರ ಹಬ್ಬ ಎಂದರೆ ಪ್ರಕೃತಿ ಪೂಜೆ’

Sunday, September 26th, 2021
Veena Shetty

ಮಂಗಳೂರು : ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಹಬ್ಬಗಳೆಂದರೆ ಪ್ರಕೃತಿ ಪೂಜೆ. ತುಳುವರು ಪ್ರಕೃತಿಯ ಆರಾಧಕರು.ಪ್ರಕೃತಿಯನ್ನು ಬಿಟ್ಟು ತುಳುವರನ್ನು ಕಲ್ಪನೆ ಕಷ್ಟ’ ಎಂದು ಎಂ ಆರ್ ಪಿ ಎಲ್ ಉಪ ಮಹಾಪ್ರಬಂಧಕರಾದ ವೀಣಾ ಟಿ.ಶೆಟ್ಟಿ ಅವರು ಹೇಳಿದರು. ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆಯ 5ನೇ ಕಾರ್ಯಕ್ರಮದಲ್ಲಿ ‘ತುಳುವ ಮಣ್ಣ್’ದ ಕಮ್ಮೆನ’ ಎಂಬ ವಿಷಯದಲ್ಲಿ ತುಳು ಉಪನ್ಯಾಸ ನೀಡಿ ಮಾತನಾಡುದರು. ತುಳುವರು ಹೆಣ್ಣನ್ನು ಪೂಜಿಸುವವರು. ತುಳುನಾಡಿನಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಪ್ರಮುಖವಾಗಿದ್ದು ಜಾತ್ರೆಗಳು,ಯಕ್ಷಗಾನ, […]

ಕ್ರಾಂತಿ ಎಂಬುದು ಅವ್ಯವಸ್ಥೆಯ ವಿರುದ್ಧವೇ ಹೊರತು ವ್ಯವಸ್ಥೆಯ ವಿರುದ್ಧವಲ್ಲ : ಮಹಮ್ಮದ್ ಬಡ್ಡೂರು

Sunday, August 29th, 2021
Badooru

ಮಂಗಳೂರು  : ‘ಕ್ರಾಂತಿ ನಮ್ಮಿಂದಲೇ ಆರಂಭವಾಗಬೇಕು.ಆಗ ಅದಕ್ಕಿಂದು ಮೌಲ್ಯ ಬರುತ್ತದೆ. ಸಾಹಿತಿಗಳಿಗೆ ತಮ್ಮ ಕಾವ್ಯವನ್ನು ಹೊರ ಹಾಕುವ ತುಡಿತ ಇದ್ದರೆ ಸಾಲದು ಸಾಹಿತ್ಯದ ಮೂಲ ಆಯಾಮಗಳನ್ನು ಕಲಿಯುವ ಮಿಡಿತಗಳೂ ಇರಬೇಕು. ಕ್ರಾಂತಿ ಎಂಬುದು ಅವ್ಯವಸ್ಥೆಯ ವಿರುದ್ಧವೇ ಹೊರತು ವ್ಯವಸ್ಥೆಯ ವಿರುದ್ಧವಲ್ಲ. ಮಾನವೀಯ ಮೌಲ್ಯ ಇರುವ, ಸಾಮಾಜಿಕ ಕಳಕಳಿಯಿರುವ ಎಲ್ಲಾ ಸಾಹಿತ್ಯಗಳಲ್ಲೂ ಕ್ರಾಂತಿಯ ಕಿಡಿ ಇದ್ದೇ ಇದೆ’ ಎಂದು ಹಿರಿಯ ಪಂಚಭಾಷಾ ಕವಿ ಮಹಮ್ಮದ್ ಬಡ್ಡೂರು ಅವರು ಹೇಳಿದರು. ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರು […]