ಗ್ರಾ.ಪಂ ಚುನಾವಣೆ ಬಗ್ಗೆ ಪಕ್ಷ ಸನ್ನದ್ಧವಾಗಿದೆ. ಮಂಡಲಗಳಲ್ಲಿ ವಾರ್‌ ರೂಂ‌ಗಳು ಆರಂಭಗೊಳ್ಳಲಿದೆ

Thursday, November 5th, 2020
limbavali

ಮಂಗಳೂರು :  ಕೋರ್ ಕಮಿಟಿ ಸಮಿತಿಯ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆಯಾಗಿದೆ. ಶಾರ್ಟ್ ಲಿಸ್ಟ್‌ ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ. ಈಗಾಗಲೇ 10-12 ಹೆಸರು ಬಂದಿದ್ದು, ಅದರಲ್ಲಿ ಆಯ್ದು ಕಳುಹಿಸಲಾಗುತ್ತದೆ. ಅಲ್ಲಿ ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರ ಮಾಡುತ್ತದೆ ಎಂದು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ವಿಶ್ವಾಸದ ಬಗ್ಗೆ ವಿಶ್ಲೇಷಣೆ ನಡೆದಿದೆ. ಸಮಿತಿಯ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆಯಾಗಿದೆ. ಶಾರ್ಟ್ ಲಿಸ್ಟ್‌ ಮಾಡಿ […]

ಬಿಜೆಪಿ ಮಂಜೇಶ್ವರ ಮಂಡಲ ಚುನಾವಣಾ ಸಮಿತಿ ಕಛೇರಿ ಉದ್ಘಾಟನೆ

Friday, March 18th, 2016
Bjp Manjeshwara

ಉಪ್ಪಳ : ದೇಶ ಕಾತರತೆಯಿಂದ ಈ ಸಾಲಿನ ಕೇರಳದ ವಿಧಾನ ಸಭಾ ಚುನಾವಣೆಯನ್ನು ಕಾಯುತ್ತಿದೆ. ರಾಜ್ಯದ ಜನತೆಯ ಸಹಿತ ಪ್ರತಿಯೊಬ್ಬರ ದೃಷ್ಟಿಯು ಚುನಾವಣೆಯತ್ತ ಹಾಯಿಸುವಂತಾಗಿದೆ. ಇದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಜನರಪರ ಆಡಳಿತವೇ ಕಾರಣ ಎಂಬುವುದರಲ್ಲಿ ಸಂಶಯವೇ ಇಲ್ಲ. ಬಿಜೆಪಿ ಯಾವ ಕಾಲಕ್ಕೂ ಜನಪರ ಹೋರಾಟದ ಹಾದಿಗೆ ದನಿಯಾದ ಪಕ್ಷವಾಗಿದೆ. ಅಲ್ಲದೆ ಭಾರತೀಯ ಜನ ಸಂಘದ ಕಾಲದಿಂದಲೂ ಮಂಜೇಶ್ವರ ಮಂಡಲ ಪ್ರತಿಭಟನೆ, ಹೋರಾಟಗಳಿಗೆ ಸಾಕ್ಷಿ ಎನಿಸಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಸಿ.ಕೆ.ಪದ್ಮನಾಭನ್ ಅವರು ಅಭಿಪ್ರಾಯಪಟ್ಟರು. […]

ಜೆ.ಆರ್ ಲೋಬೋ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸೆನೆಟ್‌ಗೆ ಸದಸ್ಯರಾಗಿ ಆಯ್ಕೆ

Sunday, August 2nd, 2015
jr Lobo

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಮಾನ್ಯ ಶ್ರೀ ಜೆ. ಆರ್ ಲೋಬೋರವರು ರಾಜೀವ್ ಗಾಂಧಿ ಆರೋಗ್ಯ ವಿಜ್ಙಾನಗಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಸದಸ್ಯರಾಗಿ ಚುನಾಯಿತರಾಗಿರುತ್ತಾರೆಂದು ಎಂ. ಗುರುರಾಜ, ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಇದಲ್ಲದೆ, ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಮಾನ್ಯ ಶ್ರೀ ಡಾ. ಸಿ.ಎನ್. ಅಶ್ವಥ್‌ನಾರಾಯಣ ಹಾಗೂ ಕೋಲಾರದ ಮಾಲೂರು ಕ್ಷೇತ್ರದ ಶಾಸಕ ಮಾನ್ಯ ಶ್ರೀ ಕೆ.ಎಸ್. ಮಂಜುನಾಥಗೌಡ ಇವರು ನೂತನ ಸದಸ್ಯರಾಗಿ ಆಯ್ಕೆಗೊಂಡಿರುತ್ತಾರೆ.