ವೀರ ರಾಣಿ ಅಬ್ಬಕ್ಕ ಉತ್ಸವ ಜನಪದ ದಿಬ್ಬಣಕ್ಕೆ ಚಾಲನೆ

Saturday, March 2nd, 2019
Abbakka-Utsava

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ಡೊಳ್ಳು ಭಾರಿಸುವುದರ ಮೂಲಕ 2019ನೇ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ ಜನಪದ ದಿಬ್ಬಣಕ್ಕೆ ಇಂದು ಅಪರಾಹ್ನ 4.10 ಗಂಟೆಗೆ ಚಾಲನೆ ನೀಡಿದರು. ದಿಬ್ಬಣದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು. ಉಸ್ತುವಾರಿ ಸಚಿವರು ಮಾತನಾಡಿ, ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಬಹುದಿನಗಳಿಂದ ಸಿದ್ಧತೆ ನಡೆಸಿದ್ದು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹಾರೈಸಿದರು. ವೀರ ರಾಣಿ ಅಬ್ಬಕ್ಕನ ಟ್ಯಾಬ್ಲೋ ಮತ್ತು ಚೆಂಡೆ, ಕೊಡೆ, ಕೀಲುಕುದುರೆ, ದಫ್, […]

ಉಳ್ಳಾಲದ ರಾಣಿ ಅಬ್ಬಕ ಉತ್ಸವಕ್ಕೆ ಅದ್ದೂರಿ ಚಾಲನೆ

Saturday, January 29th, 2011
ವೀರ ರಾಣಿ ಅಬ್ಬಕ ಉತ್ಸವ

ಕೋಣಾಜೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವೀರ ರಾಣಿ ಅಬ್ಬಕ ಉತ್ಸವ ಸಮಿತಿ ವತಿಯಿಂದ ಮಂಗಳೂರು ಹೊರವಲಯ ಅಸೈಗೋಳಿಯ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಮೇಯರ್ ರಜನಿ ದುಗ್ಗಣ್ಣ ದೀಪ ಬೆಳಗಿಸುವುದರ ಮೂಲಕ ವೀರ ರಾಣಿ ಅಬ್ಬಕ್ಕ ಉತ್ಸವ 2011ಕ್ಕೆ ಚಾಲನೆ ನೀಡಿದರು. ಜನಪದ ದಿಬ್ಬಣದ ವಿಶೇಷ ಆಕರ್ಷಣೆಗಳಾದ ಪೂರ್ಣಕೊಂಭ, ಮಂಗಳವಾದ್ಯ, ಕೀಲುಕುದುರೆ, ಯಕ್ಷಗಾನ ಗೊಂಬೆ, ಕರಗನೃತ್ಯ, ಬ್ಯಾರಿ ಸಂಪ್ರದಾಯದ ದಫ್, ತಾಲೀಮು ಆಟ, ಕಳಂಜಿ, ಕಂಗೀಲು, ಬಣ್ಣದ ಕೊಡೆಗಳು, ಬ್ಯಾಂಡ್, ಚೆಂಡೆ ವಾದನ, ದೋಣಿಯೇರಿದ […]