ಸಿದ್ದರಾಮಯ್ಯರು ಗುರಿ ಇಲ್ಲದ ಕೊರತೆಯ ಬಜೆಟ್ ಮಂಡಿಸಿದ್ದಾರೆ ; ಸಿಪಿಐಎಂ
Saturday, July 13th, 2013ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿರುವ ಜನವಿರೋಧಿ ಬಜೆಟ್ ನ್ನು ವಿರೋಧಿಸಿ ಶನಿವಾರ ಜಿಲ್ಲಾಧಿಕಾರಿ ಗೇಟಿನ ಎದುರು ಸಿಪಿಐಎಂ ಪ್ರತಿಭಟನೆ ನಡೆಸಿತು. ಸಿದ್ದರಾಮಯ್ಯ ರವರು ಮಂಡಿಸಿರುವ ಬಜೆಟ್ ನಲ್ಲಿ ಎಲ್ಲಾ ವಸ್ತುಗಳ ಬೆಲೆಗಳು ಮತ್ತಷ್ಟು ತೀವ್ರಗತಿಯಲ್ಲಿ ಏರಿಕೆಯಾಗುವಂತೆ ಪರಿಣಾಮ ಬೀರುತ್ತದೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಮತ್ತು ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡದೆ ಅಭಿವೃದ್ಧಿ ಶೂನ್ಯತೆಯನ್ನು ರಾಜ್ಯದಲ್ಲಿ ನಿರ್ಮಾಣ ಮಾಡುತ್ತಿದ್ದು, ಇದು ಜನವಿರೋಧಿ ಬಜೆಟ್ ಆಗಿದೆ ಎಂದು ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಬಿ.ಮಾಧವ ಹೇಳಿದರು. ರಾಜ್ಯ ಅಬಕಾರಿ ತೆರಿಗೆ ಮತ್ತು […]