Blog Archive

ಮೊದಲಿನ ಸ್ನೇಹ ಸಂಬಂಧದತ್ತ ಜನರ ಹೆಜ್ಜೆ

Friday, March 9th, 2018
byndoor

ಬೈಂದೂರು: ನಾವುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಹೆದ್ದಾರಿ ಅಂಡರ್‌ಪಾಸ್ ಬೇಕು, ಅದು ಬೇಡ ‘ಯು’ ತಿರುವು ಸಾಕು ಎಂದು ಸರಿಸುಮಾರು ಎರಡು ವರ್ಷ ನಡೆದ ಹೊಯ್ದಾಟ ಈಗ ಅಂತಿಮವಾಗಿ ಸಮಸ್ಥಿತಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಮೂಲ ಯೋಜನೆಯಂತೆ ಅಂಡರ್‌ಪಾಸ್ ಕಾಮಗಾರಿ ಆರಂ ಭವಾಗಿ, ದಿನದಿಂದ ದಿನಕ್ಕೆ ವೇಗ ಪಡೆಯುವುದರೊಂದಿಗೆ ಎರಡು ತೀವ್ರಾಭಿಪ್ರಾಯಗಳ ನಡುವೆ ಕದನ ವಿರಾಮ ಘೋಷಣೆಯಾಗಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ ಇಲ್ಲಿನ ನಾಗರಿಕರು. ಮೂಲ ಯೋಜನೆಯಂತೆ ಇಲ್ಲಿ ಅಂಡರ್‌ಪಾಸ್ ರಚನೆಯಾಗಬೇಕು. ಆದರೆ ಇದಕ್ಕೆ […]

ವ್ಯಾಲೆಂಟೈನ್ಸ್‌ ಡೇಯನ್ನು ‘ಮಾತೃ-ಪಿತೃ ಪೂಜನೀಯ ದಿನ’ವಾಗಿ ಆಚರಿಸಲು ಕರೆ

Wednesday, February 14th, 2018
valentines-day

ಮಂಗಳೂರು: ಫೆಬ್ರವರಿ 14 ವ್ಯಾಲೆಂಟೈನ್ಸ್‌ ಡೇ; ಪ್ರೇಮಿಗಳ ಹಬ್ಬ ವ್ಯಾಲೆಂಟೈನ್ಸ್‌ ಡೇಗಾಗಿ ಯುವ ಮನಸ್ಸುಗಳು ಮಿಡಿಯಲಾರಂಭಿಸಿವೆ. ಹಿಂದೂ ಪರ ಸಂಘಟನೆಗಳ ವಿರೋಧದ ನಡುವೆಯೂ ಪ್ರೇಮ ನಿವೇದನೆಗಾಗಿ ಕಾತರದಿಂದ ಕಾಯುತ್ತಿವೆ. ಆದರೆ, ಹಿಂದೂ ಜನ ಜಾಗೃತಿ ಸಮಿತಿಯು ವ್ಯಾಲೆಂಟೈನ್ಸ್‌ ಡೇಯನ್ನು ‘ಮಾತೃ-ಪಿತೃ ಪೂಜನೀಯ ದಿನ’ವಾಗಿ ಆಚರಿಸಲು ಕರೆ ನೀಡಿದೆ. ವ್ಯಾಲೆಂಟೈನ್ಸ್‌ ಡೇ ಹೆಸರಿನಲ್ಲಿ ನಡೆಯುವ ಅನೈತಿಕ ಕೃತ್ಯಗಳನ್ನು ತಡೆಯಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಮಾತೃ-ಪಿತೃ ಪೂಜನೀಯ ದಿನವಾಗಿ ಆಚರಿಸಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿಕೊಂಡಿದೆ. ಈ ಕುರಿತು ಮಂಗಳೂರು […]

ಬಾರ್ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ: ಸ್ಪಂದಿಸಿದ ಜಿಲ್ಲಾಧಿಕಾರಿ

Friday, December 22nd, 2017
commissioner

ಮಂಗಳೂರು: ಇಲ್ಲಿನ ಕುಂಟಿಕಾನ ಶಾಲೆಯ ಬಳಿಯೇ ಬಾರ್ ಆ್ಯಂಡ್ ರೆಸ್ಟೊರೆಂಟ್ ತೆರೆದಿರುವುದರ ವಿರುದ್ಧ ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿ ನಡೆಸಿದ ಹೋರಾಟಕ್ಕೆ ಜಿಲ್ಲಾಧಿಕಾರಿ ಶಶಿಕಾಂತ್ ಸ್ಪಂದಿಸಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಯಾವುದೇ ತಂಬಾಕು ಅಥವಾ ಅಮಲು ಪದಾರ್ಥಗಳ ಮಾರಾಟ, ಜಾಹೀರಾತು ಹಾಕುವುದನ್ನು ನಿಷೇಧಿಸಲಾಗಿದೆ. ಆದರೆ ಇಷ್ಟಾದರೂ ಶಾಲೆಗೆ ಕೇವಲ 80 ಮೀಟರ್ ವ್ಯಾಪ್ತಿಯಲ್ಲಿ ಬಾರ್ ಆ್ಯಂಡ್ ರೆಸ್ಟೊರೆಂಟ್‌‌ಗೆ ಅನುಮತಿ ನೀಡಲಾಗಿತ್ತು. ಇದನ್ನು ವಿರೋಧಿಸಿ ಸೈಂಟ್ ಆ್ಯನ್ಸ್ ಶಾಲೆಯ ಆಡಳಿತ ಮಂಡಳಿ […]

ಪ್ರತಾಪ್‌ ಸಿಂಹ ವಿರುದ್ಧದ ಸೆಕ್ಷನ್‌ ಹಿಂಪಡೆಯಲು ಅರ್ಜಿ: ಪೊಲೀಸರಿಗೆ ಕೋರ್ಟ್‌‌ನಿಂದ ತಪರಾಕಿ

Friday, December 15th, 2017
pratap-simha

ಮೈಸೂರು: ಹುಣಸೂರು ಹನುಮ ಜಯಂತಿ ಮೆರವಣಿಗೆಗೆ ಹೊರಟಿದ್ದ ವೇಳೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿ, 188 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದ್ರೆ ಬಳಿಕ ಸಂಸದರ ವಿರುದ್ಧದ ಸೆಕ್ಷನ್‌ 188 ವಾಪಸ್ ಪಡೆಯಲು ಅರ್ಜಿ ಸಲ್ಲಿಸಿದ್ದಕ್ಕೆ ಪೊಲೀಸ್ ತನಿಖಾಧಿಕಾರಿಗೆ ಕೋರ್ಟ್ ತಪರಾಕಿ ಹಾಕಿದೆ. ಡಿ. 3ರಂದು ಹುಣಸೂರಿನ ಬೆಳಿಕೆರೆ ಸಮೀಪ ಸಂಸದ ಪ್ರತಾಪ್‌ ಸಿಂಹರನ್ನು ಪೊಲೀಸರು ಬಂಧಿಸಿ ಐಪಿಸಿ ಸೆಕ್ಷನ್ 188( ಸರ್ಕಾರಿ ಅಧಿಕಾರಿಯ ಆದೇಶದ ಉಲ್ಲಂಘನೆ) ಅಡಿಯಲ್ಲಿ ಪ್ರಕಣರ ದಾಖಲು ಮಾಡಿದ್ದರು. ಬಳಿಕ ಸಂಸದರನ್ನು ಬಿಡುಗಡೆ […]

ಸರೋಜಮ್ಮ ಅವರಿಗೆ ಹಕ್ಕುಪತ್ರ ಸಿಕ್ಕಿದರೂ ಸೂರಿಲ್ಲ

Saturday, December 9th, 2017
sarojamma

ಮಂಗಳೂರು  : ಹಕ್ಕು ಪತ್ರ ಸಿಕ್ಕಿದರೂ ಮನೆ ದೊರಕದೇ ಸಂಕಷ್ಟದಲ್ಲಿದ್ದ 72 ವರ್ಷದ ಸರೋಜಮ್ಮ ಅವರಿಗೆ ಕೊನೆಗೂ ಜಿಲ್ಲಾಧಿಕಾರಿ ಕಚೇರಿಯಲ್ಲೇ ನ್ಯಾಯ ಒದಗಿಸುವ ಭರವಸೆ ಸಿಕ್ಕಿದೆ. ಮೂಲತಃ ಉಡುಪಿಯವರಾದ ಸರೋಜಮ್ಮ ಊರು-ಕೇರಿ ಅಲೆದು ಜೀವನ ಸಾಗಿಸುತ್ತಿದ್ದಾರೆ. ಇವರ ಪತಿ ದೂರವಾಗಿದ್ದು, ಪುತ್ರಿಯರು ಯೋಗಕ್ಷೇಮ ನೋಡುತ್ತಿಲ್ಲ. ಪುತ್ರ ಮಾತ್ರ ಆಸರೆಯಾಗಿದ್ದಾರೆ. ತಮ್ಮ ಕಷ್ಟದ ಹಿನ್ನೆಲೆಯಲ್ಲಿ ನ್ಯಾಯ ನೀಡುವಂತೆ ಕೋರಿ ಸರೋಜಮ್ಮ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಶುಕ್ರವಾರ ಬೆಳಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಪುತ್ರ ಸುಬ್ರಹ್ಮಣ್ಯನ ಜೊತೆಗೆ ಸರೋಜಮ್ಮ ಆಗಮಿಸಿದ್ದರು. […]

ಟಿಪ್ಪು ಜಯಂತಿ ರದ್ದುಪಡಿಸಲು ಬಿಜೆಪಿ ಯುವ ಮೋರ್ಚಾದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ

Wednesday, October 25th, 2017
Tippu jayanti

ಮಂಗಳೂರು: ಬಿಜೆಪಿ ಯುವ ಮೋರ್ಚಾದ ವತಿಯಿಂದ ಮುಂದಿನ ತಿಂಗಳು ನಡೆಯುವ ಟಿಪ್ಪು ಜಯಂತಿಯನ್ನು ತತ್‌ಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ  ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಟಿಪ್ಪು ಜಯಂತಿ ಆಚರಿಸುತ್ತಿರುವ ರಾಜ್ಯ ಸರಕಾರದ ಕ್ರಮ ಸರಿಯಲ್ಲ. ಆಚರಣೆಯನ್ನು ರದ್ದುಪಡಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಯಿತು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜ, ಹರೀಶ್‌ ಮೂಡುಶೆಡ್ಡೆ, ದಯಾನಂದ ಕೊಣಾಜೆ, ಸುದರ್ಶನ್‌ ಪೂಜಾರಿ, ಮಹೇಶ್‌, ಸಂದೀಪ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

ದಕ್ಷಿಣ ಕನ್ನಡಕ್ಕೆ ನೂತನ ಜಿಲ್ಲಾಧಿಕಾರಿ

Wednesday, October 11th, 2017
Jagadhish

ಮಂಗಳೂರು:  ಜಿಲ್ಲೆಯಲ್ಲಿ ಒಂದು ವರ್ಷ 2 ತಿಂಗಳು ಕಾರ್ಯ ನಿರ್ವಹಿಸಿದ ಪ್ರಸ್ತುತ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ದಕ್ಷಿಣ ಕನ್ನಡಕ್ಕೆ ನೂತನ ಜಿಲ್ಲಾಧಿಕಾರಿಯನ್ನಾಗಿ ಶಶಿಕಾಂತ್ ಸೆಂತಿಲ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ. ಜಗದೀಶ್ ಅವರು 2016 ಆಗಸ್ಟ್ 1ರಂದು ದ.ಕ. ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಶಶಿಕಾಂತ್ ಸೇಂತಿಲ್ ಅವರನ್ನು ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಹುದ್ದೆಯಿಂದ ದ.ಕ. ಜಿಲ್ಲೆಗೆ ವರ್ಗಾವಣೆ ಮಾಡಲಾಗಿದ್ದು, […]

ಪತ್ರಕರ್ತರ ಮೇಲೆ ಹಲ್ಲೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ

Saturday, August 5th, 2017
DC jagadeesha

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಬೆದರಿಕೆ, ಹಲ್ಲೆಯಂತಹ  ಪ್ರಕರಣಗಳು ನಡೆದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ  ಪತ್ರಕರ್ತರ ಮೇಲಿನ ಹಲ್ಲೆಗಳ ಮೇಲ್ವಿಚಾರಣೆ ಮತ್ತು ಪರಿಶೀಲನೆಗೆ ರಚಿಸಿರುವ ಜಿಲ್ಲಾಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರ ವಿರುದ್ಧ  ಯಾವುದೇ ದೂರುಗಳಿದ್ದರೂ ಸಮಿತಿಗೆ ಸಲ್ಲಿಸಬಹುದು. ಅದು ಬಿಟ್ಟು ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ನಡೆಯಲಿದೆ. ಪತ್ರಕರ್ತರ ಕರ್ತವ್ಯಕ್ಕೆ […]

ಕೊಳವೆ ಬಾವಿ ನಿಷೇಧ ಹಿಂಪಡೆಯಲು ಸರ್ಕಾರಕ್ಕೆ ಪತ್ರ ಬರೆದ ಜಿಲ್ಲಾಧಿಕಾರಿ

Thursday, January 19th, 2017
dc-borewell

ಮಂಗಳೂರು:  ಕೊಳವೆ ಬಾವಿ ಕೊರೆಯಲು ಇರುವ ನಿಷೇಧ  ಹಿಂಪಡೆಯಬೇಕು ಎಂದು ವಿನಂತಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ತಿಳಿಸಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿರುವ ವಿಷಯವನ್ನು ಬಹಿರಂಗಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಇಲ್ಲ. ಈ ಭಾಗದಲ್ಲಿ ಕೃಷಿಗಾಗಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ಅದೇ ರೀತಿ ಕೆಲವೊಂದು ಭಾಗಗಳಿಗೆ ಕೊಳವೆ ಮೂಲಕ ನೀರು ಒದಗಿಸುವ ಯೋಜನೆಗಳೂ ಇಲ್ಲ. ಆದುದರಿಂದ ದಕ್ಷಿಣ ಕನ್ನಡದಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಅವಕಾಶ ಕಲ್ಪಿಸಬೇಕು ಎಂಬ ಆಗ್ರಹಗಳು ಬಂದಿದ್ದವು ಎಂದು ಅವರು […]

ಪಶ್ಚಿಮ ಘಟ್ಟದ ಪರಿಸರದಲ್ಲಿ 2 ದಶಕಗಳಿಂದ ಸಕ್ರಿಯರಾಗಿದ್ದ ನಾಲ್ವರು ನಕ್ಸಲೀಯರು ಶರಣು

Tuesday, November 15th, 2016
naxal-leaders

ಚಿಕ್ಕಮಗಳೂರು: ಪಶ್ಚಿಮ ಘಟ್ಟದ ಪರಿಸರದಲ್ಲಿ ಕಳೆದ 2 ದಶಕಗಳಿಂದ ಸಕ್ರಿಯರಾಗಿದ್ದ ನಾಲ್ವರು ಪ್ರಮುಖ ನಕ್ಸಲೀಯರು ನಕ್ಸಲ್ ಪ್ಯಾಕೇಜ್ ನಡಿ ಸೋಮವಾರ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮುಂದೆ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದಾರೆ. ನಕ್ಸಲ್ ಮುಖಂಡರಾದ ನೀಲಗುಣಿ ಪದ್ಮನಾಭ, ರಿಜ್ವಾನ್ ಬೇಗಂ, ರಾಜು, ಭಾರತಿ ಸೇರಿದಂತೆ ನಾಲ್ವರು ನಕ್ಸಲೀಯರು ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಎಕೆ ಸುಬ್ಬಯ್ಯ ಮುಂದಾಳತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದಾರೆ. ನಾಲ್ವರು ನಕ್ಸಲೀಯರು ಗೌರಿ ಲಂಕೇಶ್ ಜೊತೆ ಇಂದು ಮಧ್ಯಾಹ್ನ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ನಕ್ಸಲೀಯರಾದ ಪದ್ಮನಾಭ, ರಾಜು, ಭಾರತಿ […]